Breaking News

Belagavi: 6.50 ಲಕ್ಷ ರೂ. ಮೌಲ್ಯದ 18 ಬೈಕ್ ಜಪ್ತಿ

Spread the love

ಬೆಳಗಾವಿ: ನಗರದ ಮಾರ್ಕೆಟ್, ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣದ ಅಡಿಯಲ್ಲಿ ಗುರುವಾರ ಪೊಲೀಸರು 6.50 ಲಕ್ಷ ರೂ. ಮೌಲ್ಯದ 18 ಬೈಕ್ ಜಪ್ತಿ ಮಾಡಿ ನಾಲ್ವರನ್ನು ಬಂಧಿಸಿದ್ದಾರೆ.
ತಾಲೂಕಿನ ಕಂಗ್ರಾಳಿಕೆ.ಎಚ್ ಗ್ರಾಮದ ರಜತ ಶಿವಣಗೇಕರ (29), ಬೈಲಹೊಂಗಲ ತಾಲೂಕಿನ ಶಿಗಿಹಳ್ಳಿ ಗ್ರಾಮದ ವಿಠ್ಠಲ ಆರೇರ (38), ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಉಮೇಶ ಬಾಗೇವಾಡಿ (33), ಗುಡಸ ಗ್ರಾಮದ ಮೌಲಾ ಹಲಕರ್ಣಿ (48) ಬಂಧಿತರು. ಕಳೆದ ಎರಡು ವರ್ಷಗಳಿಂದೆ ನಗರದ ವಿವಿಧ ಭಾಗಗಳಲ್ಲಿ ಪಾರ್ಕಿಂಗ್ ಮಾಡಿದ್ದ ಬೈಕ್ ಕಳ್ಳತನ  ಕುರಿತು ಪ್ರಕರಣ ದಾಖಲಾಗಿದ್ದವು. ಈ ಪ್ರಕರಣದ ಅಡಿ ಸಿಸಿಬಿ ಪಿಐ ನಂದೀಶ್ವರ ಕುಂಬಾರ,ಎಪಿಎಂಸಿ ಪಿಐ ಯು.ಎಸ್. ಅವಟಿ  ನೇತೃತ್ವದಲ್ಲಿ  ರಚನೆ ಮಾಡಿದ್ದ ಅಪರಾಧ ಪತ್ತೆ ವಿಶೇಷ ತಂಡವು ಕಾರ್ಯಚರಣೆ ನಡೆಸಿ  ಬೈಕ್ ಕಳ್ಳರನ್ನು ಬಂಧಿಸಿ ಅವರ ಬಳಿಯಿದ್ದ ಹೊಂಡಾ ಆಕ್ಟಿವಾ-2, ಹಿರೋ ಸ್ಪ್ಲೆಂಡರ್ ಮೋಟಾರ್-13,  ಬಜಾಜ ಪ್ಲಾಟಿನಾ ಬೈಕ್-1, ಹಿರೋ ಎಚ್‌ಎಫ್ ಡಿಲೆಕ್ಸ್-2 ಸೇರಿ ಒಟ್ಟು 18 ಬೈಕ್‌ಗಳನ್ನು  ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಲ್ವರು ಬಂಧನ: ನಗರದಲ್ಲಿ ಮಟಕಾ, ಗಾಂಜಾ ಅಡ್ಡಯ ಮೇಲೆ ದಾಳಿ ಮುಂದುವರಿಸಿರುವ ಪೊಲೀಸರು ಗುರುವಾರ ನಗರದ ಲಕ್ಷೀ ಗಲ್ಲಿಯ ಮೀಲಿಂದ ಸುತಾರ (43), ಭಾರತ ನಗರದ ಶುಭಂ ಕನ್ನೂಕಲೆ (31), ಅನಗೋಳದ ವಿರಾಜ ಕಂಗ್ರಾಳಕರ (29), ಬಾಂದೂರ ಗಲ್ಲಿಯ ಸುನೀಲ ಅಸಲಕರ (26)ಬಂಧಿಸಿ 11 ಸಾವಿರ ರೂ. ನಗರು, ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.  ಈ ಕುರಿತು  ಟಿಳಕವಾಡಿ, ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.

Spread the love

About Laxminews 24x7

Check Also

ಬೆಳಗಾವಿ: ಒಂದೇ ವರ್ಷದಲ್ಲಿ ಅಪಘಾತಕ್ಕೆ 800 ಬಲಿ

Spread the loveಬೆಳಗಾವಿ: ಜಿಲ್ಲೆಯಲ್ಲಿ ಚಾಲಕರ ರ್ನಿಲಕ್ಷ$್ಯ ಮದ್ಯಸೇವನೆ ಮಾಡಿ ವಾಹನ ಚಲಾವಣೆ, ಅತಿಯಾದ ವೇಗ ಹೀಗೆ ವಿವಿಧ ಕಾರಣಗಳಿಂದ ರಸ್ತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ