ಮದುವೆ ದಿನವೇ ಅಂಗಾಂಗ ದಾನ ; ಅಥಣಿಯಲ್ಲೊಂದು‌ ಸಾಮಾಜಿಕ ಸೇವೆಯ ಮದುವೆ

Spread the love

ಅಥಣಿ : ತಮ್ಮ ಮದುವೆಯ ದಿನವೇ ಅಂಗಾಂಗ ದಾನ ಮಾಡುವ ಮೂಲಕ ಜನರಲ್ಲಿ ದೇಹದಾನದ ಮಹತ್ವ ತಿಳಿಸಿಕೊಡುವ ಮಹತ್ವ ಕೆಲಸವನ್ನು ನವಜೋಡಿ ಮಾಡಿದೆ.

ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಸಿದ್ದೇಶ್ವರ ದೇವಸ್ಥಾನದ ಸಭಾಂಗಣದಲ್ಲಿ. ಅಥಣಿ ತಾಲೂಕಿನ ಕೊಕಟನೂರು ಗ್ರಾಮದ ವಾಗೇಶ ಕಾಡದೇವರಮಠ ಮತ್ತು ಕೋಮಲ ಹಿರೇಮಠ ಇವರ ವಿವಾಹ ಸಮಾರಂಭ ಬುಧವಾರ ಸಂಪ್ರದಾಯದಂತೆ ಜರುಗಿತು.

ಈ ವೇಳೆ ವಾಗೇಶ್ ಹಾಗೂ ಕೋಮಲ್ ಇಬ್ಬರೂ ದೇಹದಾನ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸುತ್ತಮುತ್ತಲಿನ ಪರಿಸರ ಸಂರಕ್ಷಣೆ, ಸಾವಯುವ ಕೃಷಿ, ಸ್ವದೇಶಿ ವಸ್ತುಗಳ ಬಳಕೆಗೆ ಆದ್ಯತೆ ನೀಡಬೇಕು ಎಂಬ ಸಮಾಜಮುಖಿ ಚಿಂತನೆಯನ್ನೂ ವ್ಯಕ್ತಪಡಿಸಿದ್ದಾರೆ‌.

ಇದೊಂದು ವಿಶೇಷ ಮದುವೆ, ಸಾಮಾಜಿಕ ಸೇವೆಯ ಪ್ರತಿಜ್ಞೆ ಮೂಲಕ ಅನೇಕ ಜೋಡಿಗಳಿಗೆ ಪ್ರೇರಣೆಯಾದ ಮದುವೆ. ಮದುವೆಯ ಸಂಪ್ರದಾಯದ ವಿಧಿವಿಧಾನಗಳ ಮಧ್ಯ ಸಪ್ತಪದಿ ತುಳಿದ ನವಜೋಡಿ ಸಾರ್ವಜನಿಕವಾಗಿ ತಮ್ಮ ಅಂಗಾಂಗ ದಾನದ ಪ್ರತಿಜ್ಞೆ ಮಾಡಿ ಗಮನ ಸೆಳೆದರು.


Spread the love

About Laxminews 24x7

Check Also

ಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ ಉದ್ಯಾನವನ

Spread the loveಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ