Breaking News

ನೇಣುಬಿಗಿದು SSLC ವಿದ್ಯಾರ್ಥಿ ಸೂಸೈಡ್ – ಪರೀಕ್ಷೆಗೆ ಹೆದರಿ ಆತ್ಮಹತ್ಯೆ ಶಂಕೆ

Spread the love

ಬೀದರ್: ನೇಣುಬಿಗಿದು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೀದರ್  ಜಿಲ್ಲೆಯ ಬಸವಕಲ್ಯಾಣ ) ತಾಲೂಕಿನ ನಾರಾಯಣಪುರ ಗ್ರಾಮದ ನವೋದಯ ವಸತಿ ಶಾಲೆಯಲ್ಲಿ ನಡೆದಿದೆ.

ಮಂಠಾಳ ಗ್ರಾಮದ ಶರತ್ (16) ಮೃತ ವಿದ್ಯಾರ್ಥಿ. ನವೋದಯ ವಸತಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಎಂದು ತಿಳಿದುಬಂದಿದೆ. 

ಡೆತ್‌ನೋಟ್ ಬರೆದಿಟ್ಟು ಹಾಸ್ಟೆಲ್‌ನಲ್ಲೇ ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪತ್ತೆಯಾದ ಡೆತ್‌ನೋಟ್‌ನಲ್ಲಿ ಮಮ್ಮಿ Sorry… ಅಪ್ಪ I Love You ಹಾಗೂ Keep Smile Forever ಎಂದು ಬರೆದಿದ್ದಾನೆ.

ಸ್ಥಳಕ್ಕೆ ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಪಿಎಸ್‌ಐ ಚಂದ್ರಶೇಖರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮುಂಬರುವ ಪರೀಕ್ಷೆಗೆ ಹೆದರಿ ವಿದ್ಯಾರ್ಥಿ ಆತ್ಮಹತ್ಯೆ ಶರಣಾಗಿದ್ದಾನೆ ಎಂದು ಶಂಕಿಸಲಾಗಿದೆ. ಸದ್ಯ ವಿದ್ಯಾರ್ಥಿ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ವಸತಿ ಶಾಲೆಯ ಮುಂಭಾಗದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.


Spread the love

About Laxminews 24x7

Check Also

ದೇಶದಲ್ಲಿ ಸಿಲಿಂಡರ್ ಎಮರ್ಜೆನ್ಸಿಗೆ ಮೋದಿ ವಿದೇಶಾಂಗ ನೀತಿಯ ವೈಫಲ್ಯವೇ ಕಾರಣ: ಪ್ರಿಯಾಂಕ್ ಖರ್ಗೆ

Spread the loveಬೀದರ್: ಇರಾನ್ ಮತ್ತು ಇಸ್ರೆಲ್ ವಾರ್‌ನಿಂದ ರಾಜ್ಯ ಸೇರಿದಂತೆ ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಎಮರ್ಜೆನ್ಸಿಗೆ  ಪ್ರಧಾನಿ ಮೋದಿ  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ