Breaking News

ಮುರಗೋಡ ಮಹಾಂತ ಶ್ರೀ ಜಾತ್ರೆ ಫೆ.20ರಿಂದ

Spread the love

ಮುರಗೋಡ: ಗ್ರಾಮದ ಮಹಾಂತ ದುರದುಂಡೀಶ್ವರ ಮಠದ ಸಭಾಭವನದಲ್ಲಿ ಲಿಂ.ಮಹಾಂತ ಶಿವಯೋಗಿಗಳ 54ನೇ ಪುಣ್ಯಸ್ಮರಣೆ ಅಂಗವಾಗಿ ನಡೆಯಲಿರುವ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ನೀಲಕಂಠ ಸ್ವಾಮೀಜಿ ನೇತೃತ್ವದಲ್ಲಿ ಈಚೆಗೆ ಜರುಗಿತು. ನೀಲಕಂಠ ಸ್ವಾಮೀಜಿ ಮಾತನಾಡಿ, ಫೆ.20 ರಿಂದ ಐದು ದಿನಗಳ ಶರಣರ ಅನುಭಾವ ಪ್ರವಚನ, ಫೆ.25ರಿಂದ ರೈತ ಸಮಾವೇಶ, ಉದ್ಯೋಗ ಮೇಳ, ಭಜನಾ ಸ್ಪರ್ಧೆ, ಮಹಿಳಾ ಗೋಷ್ಠಿ, ಶರಣರ ಸಿದ್ಧಾಂತ ದರ್ಶನ ಹಾಗೂ ಮುರಗೋಡ ಮುಕುಟ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಸಾಮೂಹಿಕ ವಿವಾಹ, ಮಹಾಪ್ರಸಾದ ವಿತರಣೆ ಹಾಗೂ ರಥೋತ್ಸವ ಜರುಗಲಿದೆ ಎಂದು ವಿವರಿಸಿದರು.
ಅಂದಾಜು 2 ಕೋಟಿ ರೂ.ವೆಚ್ಚದಲ್ಲಿ ಗುರುಭವನ ನಿರ್ಮಿಸಲಾಗುತ್ತಿದ್ದು, ಹೆಚ್ಚಿನ ಹಣ ಸಂಗ್ರಹಿಸಿ ದೇಣಿಗೆ ನೀಡುವುದಾಗಿ ಭಕ್ತರು ತಿಳಿಸಿದರು.  ಧರ್ಮದರ್ಶಿ ವಿ.ಬಿ.ದೇಸಾಯಿ, ಅಶೋಕ ಶೆಟ್ಟರ, ವಿಜಯ ಸಾಣಿಕೂಪ್ಪ, ಶಿವನಗೌಡ ಪಾಟೀಲ,
ಎಸ್​.ಟಿ.ಪಟ್ಟಣಶೆಟ್ಟಿ, ದುಂಡಪ್ಪ ಕಾರಿ, ಮಹಾಂತೇಶ ಗೌಡತಿ, ಪರಮೇಶ ತಟ್ಟಿಮನಿ, ಮಲ್ಲಯ್ಯ ಮಾಸಮರಡಿ, ಸುರೇಶ ಮ್ಯಾಕಲ, ಸಂಗಪ್ಪ ಬೆಳಗಾವಿ, ಪ್ರಕಾಶ ಕಾರಗಿ, ಮಹಾಂತೇಶ ಬೇಟದ, ಮಲ್ಲಪ್ಪ ಕುರಬೇಟ, ಸಂತೋಷ ಹಿರೇಮಠ ಇತರರಿದ್ದರು.

Spread the love

About Laxminews 24x7

Check Also

​ಹಿರೇಕುಂಬಿಯ ಶ್ರೀ ಅಮೋಘಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ!

Spread the love​ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನಮ್ಮ ಸಂಕಲ್ಪ. ಇಂದು ಕ್ಷೇತ್ರದ ಹಿರೇಕುಂಬಿ ಗ್ರಾಮದ ಪರಮ ಪವಿತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ