ಬಾಗಲಕೋಟೆ: ನಾಡಿನಲ್ಲಿ ವಿದ್ಯೆಯ ಜೊತೆಗೆ ಅನ್ನವನ್ನು ನೀಡಿ ಶೈಕ್ಷಣಿಕ ಕ್ರಾಂತಿ ಮಾಡಿದ ಕೀರ್ತಿ ಉತ್ತರ ಕರ್ನಾಟಕದ ಮಠಗಳಿಗೆ ಸಲ್ಲುತ್ತದೆ ಎಂದು ಶಿವಮೊಗ್ಗ ಆನಂದಪುರ ಬೆಕ್ಕಿನಕಲ್ಮಠದ ಡಾ.ಮಲ್ಲಿಕಾರ್ಜುನ ಮುರಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.
ಅವರು ನಗರದ ಚರಂತಿಮಠ ಶಿವಾನುಭವ ಮಂಟಪದ ಆವರಣದಲ್ಲಿ ಶುಕ್ರವಾರ ಸಂಜೆ ನಡೆದ ಟೆಂಗಿನಮಠ-ಟೀಕಿನಮಠದ ಶತಾಯುಸಿ ಲಿಂ.ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳವರ ರಜತ ಪುಣ್ಯಸ್ಮರಣೆ, ಹಾಗೂ ಲಿಂ.ಶ್ರೀ ರೇವಣಸಿದ್ದ ಮಹಾಸ್ವಾಮಿಗಳವರ ದಶಮ ಪುಣ್ಯಸ್ಮರಣೆಯ ನಿಮಿತ್ಯ ಗುರುಸ್ಮರಣೆ ಸಮಾರಂಭದಲ್ಲಿ ಟೀಕಿನಮಠದ ಶ್ರೀಗಳು ಹಾಗೂ ಕುಮಾರೇಶ್ವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾಂಜಲಿ ಮೂಲಕ ಗೌರವ ನಮನ ಸಲ್ಲಸಿಮಾತನಾಡಿ ಅವರು. ಮಠಗಳಿಲ್ಲದೇ ಸಮಾಜಕ್ಕೆ ಭವಿಷ್ಯವಿಲ್ಲ ಅವುಗಳೊಂದಿಗೆ ನಿರಂತರ ಸಂಪರ್ಕದಿಂದ ಸಮೃದ್ಧ ಸಮಾಜ ನಿರ್ಮಾಣ ಸಾಧ್ಯ. ಉತ್ತರ ಕರ್ನಾಟಕದ ಶಿಕ್ಷಣ ಕ್ರಾಂತಿಯಲ್ಲಿ ಮಠ ಮತ್ತು ಸಂಘ ಸಂಸ್ಥೆಗಳ ಪಾತ್ರ ಅಪಾರ, ಮಠ ಮತ್ತು ಸಮಾಜ ಪೂರಕ ಬಿಂದುಗಳಾಗಿದ್ದು ಒಂದನ್ನು ಬಿಟ್ಟು ಇನ್ನೊಂದು ಇರಲು ಸಾಧ್ಯವಿಲ್ಲ. ಸಮಾಜ ಸಂಘಟನೆಯಾದರೆ ಮಾತ್ರ ಭವಿತವ್ಯ ರಚನೆಯಾಗಲು ಸಾಧ್ಯ ಇದನ್ನು ಮಠಗಳು ಮಾಡುತ್ತ ಬಂದಿವೆ. ಯೋಗ್ಯ ಮಠಾಧಿಪತಿಗಳಿಂದ ಮಠಗಳು ಬೆಳೆಯುತ್ತವೆ. ಹಾನಗಲ್ಲ ಕುಮಾರ ಮಹಾಸ್ವಾಮಿಗಳ ದೂರದೃಷ್ಟಿಯಿಂದ ಘಟಗಳನ್ನು ತಯಾರಿಸುವ ಕೆಲಸ ಶಿವಯೋಗ ಮಂದಿರದಿಂದ ನಡೆಯುತ್ತಿದೆ. ಲಿಂಗ ಪೂಜೆಗಿಂತ ಸಮಾಜ ಸೇವೆ ಮುಖ್ಯ ಎಂಬ ಕಲ್ಪನೆಯನ್ನು ಕಂಡುಕೊಂಡು ಮಠಗಳ ಮೂಲಕ ಶಿಕ್ಷ ನೀಡಿ ಸಾಮಜವನ್ನು ಕಟ್ಟಲು ಹಲವಾರು ಸಂಘ ಸಂಸ್ಥೆಗಳು ಹುಟ್ಟಿಕೊಳ್ಳಲು ಪ್ರೇರಣೆಯಾಗಿದ್ದು, ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಸ್ಥಾಪನೆಗೆ ಟೆಂಗಿನಮಠದ ಸಹಾಯ ಹಸ್ತ ಅಮೂಲಾಗ್ರ ವಾಗಿದ್ದು ಇದೀಗ ಬಾಗಲಕೋಟೆಯು ಎಲ್ಲ ಕ್ಷೇತ್ರಗಳಲ್ಲಿಯೂ ಸಮೃದ್ಧವಾಗಿ ಬೆಳೆಯುವಲ್ಲಿ ಪ್ರಮುಖ ಪಾತ್ರವಹಿಸಿದೆ. ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಧಾರವಾಡದ ಮುರುಘಾಮಠದ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು. ಭಗವಂತನಿಗಿಂತ ದೊಡ್ಡ ಸ್ಥಾನ ಗುರುವಿಗಿದೆ. ಪೂರ್ವ ಟೀಕಿನಮಠದ ಶ್ರೀಗಳ ಕಾರ್ಯ ಸಮಾಜಪರ ಚಿಂತನೆಗಳಿಗೆ ಪೂರಕವಾಗಿದ್ದು, ಜನಸಾಮನ್ಯರಿಗೆ ಸಮೃದ್ದ ಬದುಕನ್ನು ಕಟ್ಟಿಕೊಡುವಲ್ಲಿ ಅವರ ಸೇವೆ ಶ್ಲಾಘನೀಯವಾಗಿದ್ದು ಅವರ ಸ್ಮರಣೆ ನಿತ್ಯ ನಿರಂತರ ಎಂದರು.
ಜಿಲ್ಲಾಧಿಕಾರಿಗಳಾದ ಕೆ.ಸಂಗಪ್ಪ ಅವರು ಮಾತನಾಡಿ ಜೀವನಕ್ಕೆ ದಾರಿ ತೋರಿಸುವ ಗುರುವನ್ನು ಸ್ಮರಿಸುವು ಸಂಪ್ರದಾಯವಲ್ಲ ಅದು ನಮ್ಮ ಕರ್ತವ್ಯ. ಗುರು ಜ್ಞಾನದ ರೂಪಿಯಾಗಿದ್ದು ಅಂಧಕಾರವನ್ನು ದೂರಮಾಡಿ ಬದುಕಿಗೆ ಬೆಳಕು ಸೀಡುತ್ತಾರೆ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುವುದು ನಮ್ಮೆಲ್ಲರ ಹೊಣೆ ಎಂದರು. ಮಠಗಳು ಪೂಜಾ ಸ್ಥಳಗಳಲ್ಲ ಜ್ಞಾನ, ಶಿಕ್ಷಣ ಮತ್ತು ಸಂಕಷ್ಟದಲ್ಲಿ ಇರುವವರಿಗೆ ಆಶ್ರಯ ನೀಡುವ ದಯಾಮಂದಿರಗಳಾಗಿವೆ ಇವುಗಳ ಮಹತ್ವವನ್ನು ಮುಂದಿನ ಪೀಳಿಗೆಗೆ ತಿಳಿಸುವ ಮೂಲಕ ತಂತ್ರಜ್ಞಾನದ ಜೊತೆಗೆ ಮೌಲ್ಯಗಳನ್ನು ಬೆಳಸಿಕೊಳ್ಳಬೇಕು ಎಂದರು.

ಜಿಲ್ಲ ಪೊಲೀಸ್ ವರಿಷ್ಠಾಧಿಕಾರಿಗಳಾದ ಸಿದ್ಧಾರ್ಥ ಘೋಯಲ್ ಅವರು ಮಾತನಾಡಿ ಗುರುವಿನ ಪರಿಶ್ರಮ ಶಿಷ್ಯರಿಗೆ ಮಾರ್ಗದರ್ಶನವಾಗುತ್ತದೆ. ತಂದೆ ತಾಯಿಗಳು ಬುದ್ದಿಮಾತುಗಳು ಗುರುವಾಣಿ ಇದ್ದಂತೆ ಅವರನ್ನು ಪಾಲಿಸುವ ಹೊಣೆ ಎಲ್ಲರದ್ದು ಎಂದರು.
ವೇದಿಕೆ ಮೇಲೆ ಇಲಕಲ್ಲಿನ ಚಿತ್ತರಗಿ ಸಂಸ್ಥಾನಮಠದ ಪೂಜ್ಯಶ್ರೀ ಗುರುಮಹಾಂತ ಮಹಾಸ್ವಾಮಿಗಳು, ಸೂಡಿ ಜುಕ್ತಿಮಠದ ಡಾ,ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮಿಗಳು, ಗಿರಿಸಾಗರದ ಕಲ್ಯಾಣಮಠದ ರುದ್ರಮುನಿ ಶಿವಾಚಾರ್ಯಸ್ವಾಮಿಗಳು, ಬಿಲ್ ಕೆರೂರ ಬಿಲ್ವಾಶ್ರಮದ ಸಿದ್ದಲಿಂಗ ಶಿವಾಚಾರ್ಯಸ್ವಾಮಿಗಳು, ಮುತ್ತತ್ತಿ ಹಿರೇಮಠ ಗುರುಲಿಂಗ ಶಿವಾಚಾರ್ಯಸ್ವಾಮಿಗಳು, ತಾಳಿಕೋಟೆ ಖಾಸ್ಗತೇಶ್ವರ ಮಠದ ಸಿದ್ದಲಿಂಗಸ್ವಾಮಿಗಳು, ರಬಕವಿಯ ಬ್ರಹ್ಮಾನಂದ ಮಠದ ಗುರುಸಿದ್ದಮಹಾಸ್ವಾಮಿಗಳು ಸಾನಿದ್ಯವಹಿಸಿದ್ದರು.
ಟೆಂಗಿನಮಠ-ಟೀಕಿನಮಠದ ಗುರುಪರಂಪರೆ ಕುರಿತು ಅಕ್ಕಮಹಾದೇವಿ ಮಹಾವಿದ್ಯಾಲಯದ ಡಾ. ಜಿ.ಐ.ನಂದಿಕೋಲಮಠ ಉಪನ್ಯಾಸ ನೀಡಿದರು, ನಂತರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
Laxmi News 24×7