Breaking News

ವೀರಶೈವ ಲಿಂಗಾಯತ ಧರ್ಮ ಸಮನ್ವಯತೆಯ ಧರ್ಮ : ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು

Spread the love

ವೀರಶೈವ ಲಿಂಗಾಯತ ಧರ್ಮ ಸಮನ್ವಯತೆಯ ಧರ್ಮ : ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು
ಬಾಗಲಕೋಟೆ: ಸಮಾನತೆಯನ್ನು ಭೋದಿಸುವ ಮೂಲಕ ಎಲ್ಲ ಸಮುದಾಯಗಳೊಡನೆ ಸಮನ್ವಯವನ್ನು ಸಾಧಿಸಿದ ಶಿಕ್ಷಣ, ಅನ್ನ, ಉದ್ಯೋಗ ನೀಡುವ ಮೂಲಕ ಎಲ್ಲರ ಪ್ರಗತಿಗೆ ಕಾರಣವಾಗಿರುವ ಸಮಾಜ ವೀರಶೈವ ಲಿಂಗಾಯತ ಸಮಾಜ ಎಂದು ಸವದತ್ತಿಯ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಹೇಳಿದರು.

ನಗರದ ಟೀಕಿನಮಠದ ಮಲ್ಲಿಕಾರ್ಜುನ ದೇಶಿಕರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವದ ನಿಮಿತ್ಯ ಚರಂತಿಮಠದ ಆವರಣದಲ್ಲಿ ಶುಕ್ರವಾರ ನಡೆದ ಧರ್ಮತತ್ವ ಚಿಂತನೆ ಸಮಾರಂಭದಲ್ಲಿ ಷಟಸ್ಥಳ ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದ ಅವರು ಸ್ವತಂತ್ರ ವಿಚಾರಗಳಿಗೆ ಅವಕಾಶ ಕೊಟ್ಟ ಮತ್ತು ಪ್ರಮುಖ ನಾಲ್ಕು ಚಿಂತನೆಗಳಾದ ವ್ಯಕ್ತಿಯ ವಿಕಾಸ ಮತ್ತು ಆತ್ಮಾವಲೋಕನಕ್ಕೆ ಸಹಾಕರ, ಸಾಮಾಜಿಕ ಚಿಂತನೆಯ ಮೌಲ್ಯಗಳನ್ನು ಹೊಂದಿರುವ ಹಾಗೂ ಸರ್ವಧರ್ಮಕ್ಕೂ ಸಾರ್ವತ್ರಿಕವಾದ ತತ್ವಗಳನ್ನು ಒಳಗೊಂಡ, ಸ್ತ್ರೀಪರ ಚಿಂತನೆ ಮತ್ತು ಸ್ತ್ರೀ ಪುರುಷ ಸಮಾನತೆಯನ್ನು ಹೊಂದಿರುವ ಧರ್ಮವು ಶ್ರೇಷ್ಠವಾಗಿರುತ್ತದೆ. ಇಂತಹ ಮೌಲ್ಯಗಳು ವೀರಶೈವ ಪಂರಂಪರೆಯಲ್ಲಿದ್ದು ಅವುಗಳನ್ನು ಉಳಿಸಿ ಬೆಳಸಬೇಕು. ವೀರಶೈವದಲ್ಲಿ ಸಮನ್ವತೆಯಲ್ಲಿ ಅμÁ್ಟಚಾರ, ಪಂಚಾಚಾರ, ಷಟಸ್ಥಲಗಳು ಪ್ರಮುಖ ಚಿಂತನೆಗಳಾಗಿವೆ. ಭಕ್ತ, ಮಹೇಶ, ಪ್ರಸಾದಿ, ಪ್ರಾಣಲಿಂಗಿ, ಶರಣ, ಐಕ್ಯ ಎಂಬ ಷಟ್ ಸ್ಥಲದ ಆರು ಸಾಧನೆಯ ಹಂತಗಳಿದ್ದು ಅವುಗಳನ್ಬು ಸಾಧಿಸಿದವರು ಶ್ರೇಷ್ಠರಾಗುತ್ತಾರೆ. ಲೌಕಿಕ ಭಕ್ತಿಯಿಂದ ಮುಕ್ತರಾಗಿ ಬಯಕೆಗಳನ್ನು ತೊರೆದು ದೇವರಿಗೆ ಶರಣಾಗುವುದು ನೈಜ ಭಕ್ತಿ. ಧರ್ಮ ಲಾಂಚನಗಳ ಸ್ವೀಕಾರ ಮತ್ತು ಲಿಂಗದ ಮೇಲಿನ ಅಚಲ ನಿμÉ್ಠ ಹೊಂದಬೇಕು. ಮನಸ್ಸಿನ ಪ್ರಸನ್ನತೆಯನ್ನು ಪಡೆದುಕೊಳ್ಳುವುದರ ಮೂಲಕ ಲಿಂಗವನ್ನು ಪ್ರಾಣವನ್ನಾಗಿಸಿ ಅಂಗಲಿಂಗ ಸಾಮರಸ್ಯ ಸಾಧಿಸುವುದು ಧರ್ಮ ಸಾಧಕನ ಮಾರ್ಗವಾಗಿದೆ ಎಂದರು.

ಬೆಳಗಾವಿ ಕಾರಂಜಿಮಠದ ಡಾ. ಶಿವಯೋಗಿ ದೇವರು ಉಪನ್ಯಾಸ ನೀಡಿ ಪಂಚಾಚಾರಗಳನ್ನು ಅರಿತು ನಡೆಯುವುದು ಭಕ್ತಿಯ ಪಥವಾಗಿದ್ದು ಭಕ್ತಿಯಿಂದ ಮುಕ್ತಿ ಸಾಧ್ಯ. ಪಂಚ ಆಚಾರಗಳಾದ ಲಿಂಗಾಚಾರ, ಸಧಾಚಾರ, ಶಿವಾಚಾರ, ಗಣಾಚಾರ, ಮೃತ್ಯಾಚಾರಗಳನ್ನು ಮೈಗೂಡಿಸಿಕೊಂಡರೆ ಭಕ್ತನಾಗಲು ಯೋಗ್ಯರಾಗುತ್ತಾರೆ. ನಮ್ಮೊಳಗಿನ ಜ್ಞಾನವೇ ಲಿಂಗವಾಗಿದ್ದು ಅದರೊಳಗೆ ಅಂತರ್ಮುಖಿಯಾಗುವುದು ಲಿಂಗಾಚಾರವಾಗಿದೆ. ಪ್ರಾಮಾಣಿಕ ದುಡಿಮೆ ಮತ್ತು ತನು, ಮನ, ಧನದ ಸಮರ್ಪಣೆ ಸದಾಚಾರವಾಗಿದೆ. ಎಲ್ಲರೂ ನಮ್ಮವರೆನ್ನುವುದು ಶಿವಾಚಾರವಾಗಿದ್ದು ಲಿಂಗಕ್ಕೆ ತೊಂದರೆ ಬಂದಾಗ ಅದರ ತಡೆಯುವುದು, ಧರ್ಮ ರಕ್ಷಣೆ ಮಾಡುವುದು ಗಣಾಚಾರವಾಗಿದೆ. ಎಲ್ಲರೂ ದೊಡ್ಡವರೆನ್ನುವ ಭಾವವನ್ನು ತಳೆಯುವುದು ಮೃತ್ಯಾಚಾರವಾಗಿದ್ದು ಎಲ್ಲ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಶಿವಯೋಗಮಂದಿರ ಸಂಸ್ಥೆಯ ವ್ಯವಸ್ಥಾಪಕಾರದ ಡಾ.ಜಿ.ಕೆ ಹಿರೇಮಠ ಅವರು ಅμÁ್ಟವರಣಗಳ ಕುರಿತು ಉಪನ್ಯಾಸ ನೀಡಿ ಆಂತರಿಕ ಸದ್ಗುಣಗಳು ಹೊರಹೋಗದಂತೆ ಮತ್ತು ಬಾಹ್ಯ ದುರ್ಗುಣಗಳು ಒಳಗೆ ಬಾರದಂತೆ ತಡೆಯಲು ಇರುವ ಆವರಣಗಳಾಗಿದ್ದು ಭಕ್ತನನ್ನು ಅಥವಾ ಅದ್ಯಾತ್ಮ ಸಾಧಕರನ್ನು ಅಪಾಯಗಳಿಂದ ರಕ್ಷಿಸುವುದೆ ಅμÁ್ಟವರಣಗಳ ಮೂಲ ದ್ಯೆಯವಾಗಿದೆ. ಗುರು, ಲಿಂಗ, ಜಂಗಮ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಾದೋದಕ, ಪ್ರಸಾದ ಇವುಗಳು ಧರ್ಮದ ಅಂಗಗಳಾಗಿವೆ. ಮಾನವನನ್ನು ಶರಣಾಗಿಸುವ ಮೂಲಕ ವಿಶ್ವ ಮಾನವ ಪ್ರಜ್ಞೆ ಯನ್ನು ಜಾಗೃತ ಗೋಳಿಸುವಲ್ಲಿ ಅμÁ್ಟವರ್ಣಗಳ ಸಂಸ್ಕøತಿಯ ಮೂಲ ಬೇರುಗಳಾಗಿವೆ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಸಚಿವರಾದ ಎಸ್.ಆರ್.ಪಾಟೀಲ ಮಾತನಾಡಿ ಹಸಿದವರಿಗೆ ಅನ್ನ ನೀಡುವುದೇ ನಿಜವಾದ ಧರ್ಮ, ಎಲ್ಲರೂ ಐಕ್ಯತೆಯಿಂದ ಬಾಳಲಿ ಎಂದರು. ಇನ್ನೋರ್ವ ಅತಿಥಿ ಬಿ.ಡಿ.ಸಿ.ಸಿ ಬ್ಯಾಂಕಿನ ಅಧ್ಯಕ್ಷರಾದ ಅಜಯಕುಮಾರ ಸರನಾಯಕ ಮಾತನಾಡಿ ಧರ್ಮದಂತೆ ನಡೆದರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ, ಸೌಹಾರ್ದತೆಯಿಂದ ಬಾಳುವುದೆ ನಿಜವಾದ ಧರ್ಮದ ಅರ್ಥ ಎಂದರು.
ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಸಮಾಧಾನ ಚಿತ್ತದಿಂದ ಸಹಕಾರ, ಸದ್ವಿಚಾರ, ಸಂತೈಸುವ ತಾಳ್ಮೆ ಇಟ್ಟುಕೊಂಡು ನಕಾರಾತ್ಮಕ ಆಲೋಚನೆಗಳ ವಿರುದ್ಧ ಸಕಾರಾತ್ಮಕ ಚಿಂತನೆಗಳನ್ನು ಹಿಡಿದು ನಿಲ್ಲುವವರು ಮಠಾಧಿಪತಿಗಳು ಆಗಲು ಸಾಧ್ಯ ಎಂದರು.


ಧಾರ್ಮಿಕ ಚಿಂತನ ಸಮಾರಂಭದ ಧಿವ್ಯ ಸಾನಿಧ್ಯ ವಹಸಿ ಮಾತನಾಡಿದ ಚರಂತಿಮಠ ಪ್ರಭುಮಹಾಸ್ವಾಮಿಗಳು ಮಾತನಾಡಿ ವೀರಶೈವವು ಕೋಟಿ ದೇವರನ್ನು ಇಷ್ಟಲಿಂಗದಲ್ಲಿ ಅಡಗಿಸಿ ಪೂಜಿಸುವ ವಿಶಿಷ್ಟ ಧರ್ಮವಾಗಿದ್ದು ಸರಳ ಸಿದ್ದಾಂತ ಮತ್ತು ಮೌಲ್ಯಗಳನ್ನು ಮೈಗೂಡಿಸಿಕೊಂಡಿದೆ, ಶೂನ್ಯವು ಪ್ರಾರಂಭ ಮತ್ತು ಅಂತ್ಯದ ಕೇಂದ್ರ ವಾದಂತೆ ಭಕ್ತಿ ಮತ್ತು ಮುಕ್ತಿಯ ಕೇಂದ್ರ ಲಿಂಗವಾಗಿದೆ. ದಿನನಿತ್ಯದ ಪೂಜೆ, ಜಪ, ತಪ ಮಂತ್ರ ಪಠಣದಿಂದ ಜ್ಞಾನ ಪ್ರವೃತ್ತಿಯಾಗುತ್ತದೆ, ಷಟ್ ಸ್ಥಲವು ಪ್ರತಿದಿನ ನಡೆಯುವ ಆಚರಣೆಯಾಗಿದ್ದು ಇಷ್ಟಲಿಂಗ ಪೂಜೆಯಿಂದ ಏಕದೇವೋಪಾಸನೆ ಮಾಡುವುದೇ ದೈವಭಕ್ತಿ. ಲಿಂಗ ಪೂಜೆಯಿಂದ ಕೋಟೆ ದೇವರನ್ನು ಪೂಜಿಸಿದ ಫಲ ಸಿಗುತ್ತದೆ.,ಜಂಗಮ ಎನ್ನುವುದು ದರ್ಮಕ್ಕೆ ಸೀಮಿತವಲ್ಲ ದೀಕ್ಷೆ ಪಡೆದವರೆಲ್ಲರೂ ಜಂಗಮರಾಗುತ್ತಾರೆ. ವೀರಶೈವ ಸಿದ್ದಾಂತವನ್ನು ಸರಿಯಾಗಿ ಅರ್ಥೈಸಿಕೊಳ್ಳಿ ಎಂದರು.

ಸಮಾರಂಭದ ವೇದಿಕೆ ಮೇಲೆ ಗುಳೆದಗುಡ್ಡದ ಒಪ್ಪತ್ತೇಶ್ವರಮಹಾಸ್ವಾಮಿಗಳು, ಟೀಕಿನಮಠದ ಮಲ್ಲಿಕಾರ್ಜುನ ದೇಶಿಕರ ಸ್ವಾಮಿಗಳು, ಅನವಾಲದ ಕೈಲಾಸಪತಿ ಸ್ವಾಮಿಗಳು ಸಾನಿದ್ಯ ವಹಿಸಿದ್ದರು, ಸಮಾರಂಭದಲ್ಲಿ ಚರಪಟ್ಟಾಧಿಕಾರ ಸಮಿತಿ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ, ಜಿ.ಎನ್.ಪಾಟೀಲ, ಮಹೇಶ ಅಥಣಿ, ಆಶೋಕ ಸಜ್ಜನ ಬೇವೂರ, ಗುರುಬಸವ ಸೂಳಿಬಾವಿ, ಮಹಾಂತೇಶ ಶೆಟ್ಟರ, ಬಸವರಾಜ ಭಗವತಿ, ಎ.ಎಸ್.ಪಾವಟೆ, ಮಲ್ಲಕಾರ್ಜುನ ಸಾಸನೂರ, ಚಂದ್ರಶೇಖರ ಶೆಟ್ಟರ ಸೇರಿದಂತೆ ಅನೆಕ ಘನ್ಯರು, ಭಕ್ತಾಧಿಗಳು ಭಾಗಬಹಿಸಿದ್ದರು.
ಪೊಟೋ 01 ಹಾನಗಲ್ ಕುಮಾರೇಶ್ವರ ಮಹಾಸ್ವಾಮಿಗಳ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸುವ ಮೂಲಕ ಧಾರ್ಮಿಕ ಚಿಂತನೆ ಸಮಾರಂಭಕ್ಕೆ ಚಾಲನೆ ನೀಡಲಾಯಿತು.
ಪೋಟೋ02 ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳ ಮಾತು.

ಸಂಪನ್ನಗೊಂಡ ಪ್ರಭಾತ ಸಂಚಲನ
ಟೀಕಿನಮಠದ ನೂತನ ಶ್ರೀಗಳ ಚರಪಟ್ಟಾಧಿಕಾರ ಪ್ರಯುಕ್ತ ನಗರದಲ್ಲಿ 22 ದಿನಗಳ ಕಾಲ ಪರ್ಯಂತರವಾಗಿ ಶೃದ್ಧಾಭಕ್ತಿಯಂದ ನಡೆದ ಪ್ರಭಾತ ಪೇರಿ( ಪ್ರಭಾತ ಸಂಚಲನ) ಶುಕ್ರವಾರ ಬೀಳೂರ ಗುರುಬಸವ ನಗರದಲ್ಲಿ ಪ್ರಭಾತ ಸಂಚಲನ ಮಾಡಿ ಭಕ್ತರಿಗೆ ರುದ್ರಾಕ್ಷಿ ದಾರಣೆ ಮಾಡುವ ಮೂಲಕ ಪ್ರಭಾತ ಪೇರಿ ಸಂಪನ್ನಗೊಂಡಿತು.
ಪ್ರಭಾತ ಪೇರಿ ನೇತೃತ್ವ ಸಾನಿಧ್ಯವಹಸಿದ ಚರಂತಿಮಠ ಪ್ರಭುಮಹಾಸ್ವಾಮಿಗಳು, ಗುಳೆಗುಡ್ಡದ ಒಪ್ಪತ್ತೇಶ್ವರ ಸ್ವಾಮಿಗಳು ಮಾತನಾಡಿ ನಗರದ ತುಂಬೆಲ್ಲಾ ಪ್ರಭಾತ ಪೇರಿಯಿಂದ ಹೋಸ ಚೈತನ್ಯ ತುಂಬಿದೆ, ಭಕ್ತರು ಎಂದಿನಂತೆ ಬೆಳಗಿನ ಜಾವ ಬೇಗನೆ ಎದ್ದು ಪೂಜಾ ವಿಧಿ ವಿಧಾನಗಳನ್ನು ಮಾಡುವ ಮೂಲಕ ಧಾರ್ಮಿಕ ಆಚರಣೆಯನ್ನು ನೀರಂತರವಾಗಿಸಿ ತಮ್ಮ ದೈನಂದಿನ ಕಾಯಕವನ್ನು ನಿಷ್ಟೇಯಿಂದ ಮಾಡಿ ದೇವರ ಕೃಪೆಗೆ ಪಾತ್ರರಾಗಿ ಎಂದ ಅವರು ಪ್ರಭಾತ ಪೇರಿಗೆ ಯಶಸ್ವಿಗೆ ಕಾರಣರಾದ ಎಲ್ಲ ಭಕ್ತಾಧಿಗಳಿಗೆ ರುದ್ರಾಕ್ಷಿ ದಾರಣ ಮಾಡುವ ಮೂಲಕ ಆಶೀರ್ವದಿಸಿದರು, ಟೀಕಿನಮಠದ ಮಲ್ಲಿಕಾರ್ಜನ ದೇಶಿಕರ ಸ್ವಾಮಿಗಳು.ಡಾ.ಶಿವಯೋಗಿ ದೇವರು, ಅನವಾಲ ಕೈಲಾಸಪತಿಸ್ವಾಮಿಗಳು, ಸೇರಿದಂತೆ ಅನೇಕ ಪೂಜ್ಯರು, ಗಣ್ಯರು ಭಾಗವಹಿಸಿದ್ದರು.
ಪೋಟೋ 03 ರುದ್ರಾಕ್ಷಿ ಧಾರಣ


Spread the love

About Laxminews 24x7

Check Also

ಮೂರು ಮಕ್ಕಳನ್ನು ಕೊಲೆಗೈದು ವಿಷ ಸೇವಿಸಿದ ತಾಯಿ!

Spread the love ಬಾಗಲಕೋಟೆ: ತಾಯಿಯೊಬ್ಬಳು  ಭಾನುವಾರ ಮೂರು ಮಕ್ಕಳಿಗೆ ನೇಣು ಹಾಕಿ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ  ಯತ್ನಿಸಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ