Breaking News

ದಾವಣಗೆರೆ | ಸನ್ಯಾಸತ್ವ ಸ್ವೀಕರಿಸಿದ ಇಂಜಿನಿಯರಿಂಗ್ ವಿದ್ಯಾರ್ಥಿನಿ

Spread the love

ದಾವಣಗೆರೆ: ನಗರದ  ಚೌಕಿಪೇಟೆಯ 26 ವರ್ಷದ ಯುವತಿಯೊಬ್ಬರು ಸಂಸಾರ ತೊರೆದು ಸನ್ಯಾಸತ್ವ ಸ್ವೀಕರಿಸಿದ್ದಾರೆ.

ಮುಖೇಶ್ ಕುಮಾರ್ ಹಾಗೂ ಸುನೀತಾ ಅವರ ಪುತ್ರಿ ಆಂಚಲ್ ಕುಮಾರಿ (26) ಜೈನ ಧೀಕ್ಷೆ ಪಡೆದಿದ್ದಾರೆ. ಅವರು ಖಾಸಗಿ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಓದುತ್ತಿದ್ದರು. ಅಲ್ಲದೇ ಕಾಲೇಜಿನಲ್ಲಿ ಟಾಪರ್ ಆಗಿದ್ದರು. ಇಂದು (ಫೆ.6) ಸೂರತ್‌ನಲ್ಲಿ ಅವರು ಸನ್ಯಾಸ ಧೀಕ್ಷೆ ಪಡೆದಿದ್ದಾರೆ.

ಯುವತಿಯ ಆಯ್ಕೆಯನ್ನು ಕುಟುಂಬಸ್ಥರು ಸಹ ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಇತ್ತೀಚಿಗೆ ಆಂಚಲ್ ಕುಮಾರಿಯವರು ಆಧ್ಯಾತ್ಮದ ಕಡೆ ವಾಲಿದ್ದರು. ಸಂಸಾರ ಸುಖಃ ಜೀವನಕ್ಕಿಂತ ಸನ್ಯಾಸತ್ವದ ಜೀವನವೇ ಶ್ರೇಷ್ಠ ಎಂದು ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ.


Spread the love

About Laxminews 24x7

Check Also

ಕಗ್ಗಂಟಾಗಿದ್ದ ದಾವಣಗೆರೆ, ಬಾಗಲಕೋಟೆಗೆ ಕಾಂಗ್ರೆಸ್ ಅಭ್ಯರ್ಥಿಗಳು ಫೈನಲ್! ಇವರಿಗೆ ಟಿಕೆಟ್ ಕೊಡೋದು ಕನ್ಫರ್ಮ್

Spread the loveಪಚುನಾವಣೆ ದಿನಾಂಕ  ಘೋಷಣೆಯಾದಾಗಿನಿಂದಲೂ ದಾವಣಗೆರೆ ದಕ್ಷಿಣ ಮತ್ತು ಬಾಲಕೋಟೆಯಲ್ಲಿ ಚುನಾವಣಾ ರಂಗು ಹೆಚ್ಚಾಗಿದೆ. ದಾವಣಗೆರೆ ದಕ್ಷಿಣ ಮತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ