Breaking News

ದುಬೈನಲ್ಲಿ ಮಿಂಚಿದ ಸದಲಗಾ ಪಟ್ಟಣದ ಡಾ.ಶಿವಶಂಕರ ಮರಜಕ್ಕೆ

Spread the love

ಚಿಕ್ಕೊಡಿ:ಸದಲಗಾ ಪಟ್ಟಣದವರು ಹಾಗೂ ಕೊಲ್ಲಾಪುರ ಸಿದ್ದಗಿರಿ ಕನೇರಿ ಮಠದ ಆಸ್ಪತ್ರೆಯಲ್ಲಿ 12 ವರ್ಷದಿಂದ ತಜ್ಞ ನರ ಶಸ್ತ್ರ ಚಿಕಿತ್ಸಾ ವೈದ್ಯರಾಗಿ ಸೇವೆ ಸಲ್ಲಿಸಿಸುತ್ತಿರುವ ಡಾ.ಶಿವಶಂಕರ ಮರಜಕ್ಕೆ ಅವರು ದುಬೈನಲ್ಲಿ ನಡೆದ ವಿಶ್ವ ನರ ಶಸ್ತ್ರಚಿಕಿತ್ಸಾ ಒಕ್ಕೂಟದ ಸಮ್ಮೇಳನದಲ್ಲಿ ಮೂರು ಪ್ರಬಂಧ ಮಂಡಿಸಿ ನರ ಚಿಕಿತ್ಸಕರ ಮೆಚ್ಚುಗೆಗೆ ಪಾತ್ರರಾದರು.

ದುಬೈನಲ್ಲಿ ನಡೆದ ಮೂರು ದಿನ ನಡೆದ ಸಮ್ಮೇಳನದಲ್ಲಿ ವಿವಿಧ ದೇಶದ 2000ಕ್ಕೂ ಹೆಚ್ಚು ನರ ಶಿಸ್ತ್ರ ಚಿಕಿತ್ಸಕರು ಭಾಗವಹಿಸಿದ ಸಂದರ್ಭದಲ್ಲಿ ಡಾ.ಶಿವಶಂಕರ್ ಮಾರಜಕ್ಕೆ ಅವರು ‘ಮೆದುಳಿನ ಬೈಪಾಸ್ ಶಸ್ತ್ರಚಿಕಿತ್ಸೆ, ‘ಕ್ಲಾಯವಲ್ ಮೆನಿಂಜಿಯೋಮಾಗೆ ಶಸ್ತ್ರಚಿಕಿತ್ಸಾ ಪದ್ಧತಿ’ ಹಾಗೂ ‘ಮ್ಯೂಕೋರ್ಮೈಕೋಸಿಸ್’ ದ ವಿಷಯಗಳ ಪ್ರಬಂಧ ಮಂಡಿಸಿ ಸಮ್ಮೇಳನದಲ್ಲಿ ಮಾರ್ಗದರ್ಶನೆ ನೀಡಿದರು.

ಭಾರತದಲ್ಲಿ ಕೆಲವೇ ಸ್ಥಳದಲ್ಲಿ ಮೆದುಳಿನ ಬೈಪಾಸ್ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಏಕೈಕ ವ್ಯಕ್ತಿ ಡಾ. ಮರಜಕ್ಕೆ ಅವರು ಗ್ರಾಮೀಣ ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂಖ್ಯೆಯ ಮೆದುಳಿನ ಬೈಪಾಸ್ ಶಸ್ತ್ರಚಿಕಿತ್ಸೆಗಳನ್ನು ಮಾಡುವ ಮೂಲಕ ದಾಖಲೆ ಮಾಡಿದ್ದಾರೆ. ಆದ್ದರಿಂದ ಅವರನ್ನು ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಆಹ್ವಾನಿಸಲಾಗಿತ್ತು.ಡಾ.ಮರಜಕ್ಕೆ ಕರ್ನಾಟಕ-ಮಹಾರಾಷ್ಟ್ರದಲ್ಲಿ ತಜ್ಞನರ ಶಸ್ತ್ರಚಿಕಿತ್ಸಾ ವೈದ್ಯರಾಗಿ ಸೇವೆಸಲ್ಲಿಸುತ್ತಿದ್ದು, ಸಾರ್ವಜನಿಕರ ಮನೆಮಾತಾಗಿದ್ದಾರೆ.


Spread the love

About Laxminews 24x7

Check Also

ಶ್ರೀನಗರದಲ್ಲಿ ಹಿಂದೂ ಸಮ್ಮೇಳನ

Spread the loveಬೆಳಗಾವಿ: ಮಹಾಂತೇಶ ನಗರ, ಶ್ರೀನಗರ ಹಾಗೂ ಶಿವಬಸವ ನಗರ ಹಿಂದೂ ಸಮ್ಮೇಳನ ಸಮಿತಿಯಿಂದ ಫೆ.6ರಂದು ಸಂಜೆ 6ಕ್ಕೆ ಶ್ರೀನಗರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ