Breaking News

ಬೆಳಗಾವಿಯಲ್ಲಿ ಶ್ರೀ ಸಮಾದೇವಿ ಜನ್ಮೋತ್ಸವ ಸಂಭ್ರಮ:

Spread the love

ಬೆಳಗಾವಿಯಲ್ಲಿ ಶ್ರೀ ಸಮಾದೇವಿ ಜನ್ಮೋತ್ಸವ ಸಂಭ್ರಮ: ಭಕ್ತಿಭಾವದ ಪಲ್ಲಕ್ಕಿ ಉತ್ಸವಕ್ಕೆ ಅದ್ಧೂರಿ ಚಾಲನೆ!
ಕುಂದಾನಗರಿ ಬೆಳಗಾವಿಯ ಸಮಾದೇವಿ ಗಲ್ಲಿಯಲ್ಲಿ ಜನ್ಮೋತ್ಸವದ ಕಳೆಕಟ್ಟಿದೆ. ಶ್ರೀ ಸಮಾದೇವಿ ಸಂಸ್ಥಾನದ ವಾರ್ಷಿಕ ಮಹೋತ್ಸವದ ಅಂಗವಾಗಿ ಶನಿವಾರ ಸಂಜೆ ದೇವಿಯ ಭವ್ಯ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ದೊರೆತಿದ್ದು, ಇಡೀ ಪ್ರದೇಶ ಭಕ್ತರ ಜಯಘೋಷಗಳಿಂದ ಮೇಳೈಸಿದೆ.
ಬೆಳಗಾವಿಯ ಸಮಾದೇವಿ ಸಂಸ್ಥಾನ, ವೈಶ್ಯವಾಣಿ ಸಮಾಜ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಶ್ರೀ ಸಮಾದೇವಿಯ ವಾರ್ಷಿಕ ಜನ್ಮೋತ್ಸವವು ಅತ್ಯಂತ ಸಡಗರದಿಂದ ಜರುಗುತ್ತಿದೆ. ಶನಿವಾರ ಮುಂಜಾನೆ ದೇವಿಗೆ ಕಾಕಡ ಆರತಿ ಹಾಗೂ ಮಹಾಭಿಷೇಕದೊಂದಿಗೆ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡವು. ಸಂಜೆ ಶ್ರೀ ಸಮಾದೇವಿ ದೇವಸ್ಥಾನದ ಟ್ರಸ್ಟಿಗಳಾದ ಸುರೇಶ್ ಪಿಳಣಕರ್, ಸುಧೀರ್ ಮದಲಿ, ರಾಕೇಶ್ ಕಲಘಟಗಿ ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ಮಹಾಮಂಗಳಾರತಿ ನೆರವೇರಿಸಿ, ದೇವಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ವಿರಾಜಮಾನಗೊಳಿಸಿ ಪ್ರದಕ್ಷಿಣಾ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಜನ್ಮೋತ್ಸವದ ಎರಡನೇ ದಿನವಾದ ನಾಳೆ ಭಾನುವಾರ (ಫೆಬ್ರವರಿ 1) ಬೆಳಿಗ್ಗೆ 6:30ರಿಂದ 11 ಗಂಟೆಯವರೆಗೆ ‘ನವಚಂಡಿಕಾ ಹೋಮ’ ನಡೆಯಲಿದೆ. ತದನಂತರ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಸಾರ್ವಜನಿಕ ಅನ್ನಸಂತರ್ಪಣೆ (ಮಹಾಪ್ರಸಾದ) ಆಯೋಜಿಸಲಾಗಿದೆ. ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ವೈಶ್ಯವಾಣಿ ಯುವ ಸಂಘಟನೆ ಹಾಗೂ ಮಹಿಳಾ ಮಂಡಳಿಯ ಪದಾಧಿಕಾರಿಗಳು ಸಕ್ರಿಯವಾಗಿ ಪಾಲ್ಗೊಂಡಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಸಮಿತಿ ವಿನಂತಿಸಿದೆ.

Spread the love

About Laxminews 24x7

Check Also

ತೀರ್ಥಹಳ್ಳಿಯ ಮಹಿಷಿಯ ಉತ್ತರಾದಿ ಮಠದಲ್ಲಿ ಕಳ್ಳತನ – ಕೆಲವೇ ಗಂಟೆಯಲ್ಲಿ 1 ಕೋಟಿ ಮೌಲ್ಯದ ಚಿನ್ನದ 16 ಹಲಗಾರತಿ ವಶಕ್ಕೆ

Spread the loveಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಹಿಷಿಯ ಉತ್ತರಾದಿ ಮಠದಲ್ಲಿ ನಡೆದ ಕಳ್ಳತನ ಪ್ರಕರಣವನ್ನ ಕೆಲವೇ ಗಂಟೆಯಲ್ಲಿ ಬೇಧಿಸುವಲ್ಲಿ ತೀರ್ಥಹಳ್ಳಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ