ಮಾಜಿ ಸಚಿವ ಶ್ರೀಮಂತ ಪಾಟೀಲ್ ಇವರ ಜನ್ಮದಿನ ನಿಮಿತ್ಯ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ 4000 ಜನ ಉಚ್ಚಾರಿಸಿಕೊಂಡರು.
ಜನ್ಮದಿನ ನಿಮಿತ್ಯ ಮಾತ್ರಕೆ ಇಟ್ಟುಕೊಂಡು ನೆರೆಯ ಸಾಂಗ್ಲಿ ಜಿಲ್ಲೆಯ ಹೆಸರಾಂತ ನಂದಾದೀಪ ನೇತ್ರಾಲಯ,
ಸೇವಾಸದನ,
ಉಷಕಾಲ, ಆಸ್ಪತ್ರೆಗಳ ಖ್ಯಾತ ವೈದ್ಯರ ನೇತೃತ್ವದಲ್ಲಿ ಸುಮಾರು ನಾಲ್ಕು ಸಾವಿರ ಜನರ ಆರೋಗ್ಯ ತಪಾಸಣೆ ಮಾಡುವುದಂಧಿಗೆ ಉಪಚಾರಿಸುವ ಸೇವೆ ನೀಡಲಾಗಿದೆ. ಅನೇಕ ಬಡ ಕುಟುಂಬಗಳಿಗೆ ಆರೋಗ್ಯ ಉಚ್ಚಾರದ ವ್ಯವಸ್ಥೆ ಒದಗಿ ಬಂದಿದ್ದರಿಂದ ನನಗೆ ಸಂತೋಷ ತಂದಿದೆ ಎಂದು ಮಾಜಿ ಸಚಿವ ಶ್ರೀಮಂತ ಪಾಟೀಲರು ಹೆಮ್ಮೆಯಿಂದ ಹೇಳಿಕೊಂಡರು.
ಶನಿವಾರ ರಂದು ಕೆಂಪವಾಡದ ಅಥಣಿ ಫಾರ್ಮರ್ಸ್ ಸಕ್ಕರೆ ಕಾರ್ಖಾನೆಯಲ್ಲಿ 71ನೇ ಜನುಮದಿನ ನಿಮಿತ್ಯವಾಗಿ ನೇತ್ರ ತಪಾಸನೆ, ಹೃದಯದ ಕಾಯಿಲೆ, ಕ್ಯಾನ್ಸರ್ ರೋಗಿ ಮುಂತಾದ ರೋಗಿಗಳ ಆರೋಗ್ಯ ತಪಾಸಣೆ ಮಾಡುವುದೊಂದಿಗೆ ಉಚಿತ ಉಪಚಾರ ಸೇವೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಗಡಿಗ್ರಾಮಗಳಿಂದ ಅನೇಕ ಬಡ ಕುಟುಂಬದ ರೋಗಿಗಳು ಇದರ ಲಾಭ ಪಡೆದುಕೊಂಡರು. ಕೆಲ ಕಾಯಿಲೆಗಳ ಮೇಲೆ ಸ್ಥಳಕ್ಕೆ ಆರೋಗ್ಯ ನಿಧಾನ ಪಡಿಸಿ ಉಚ್ಚರಿಸುವ ವ್ಯವಸ್ಥೆ ಸಾಂಗ್ಲಿ ಆಸ್ಪತ್ರೆಯಲ್ಲಿ ನೀಡಲಾಗುವುದು ಎಂದು ವೈದ್ಯರು ಹೇಳಿದರು.
ಕಳೆದ 20 ವರ್ಷಗಳಿಂದ ನಿರಂತರವಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಹಮ್ಮಿಕೊಂಡು ಅನೇಕ ಕುಟುಂಬಗಳಿಗೆ ನೆರವಾಗಿದೆ. ಕೆಲ ಕುಟುಂಬಗಳ ಸೇವೆ ನೀಡಲು ನಾನು ಖುದ್ದಾಗಿ ಹಣಭರಿಸಿ ಉಚ್ಚಾರ ನೀಡಿದ್ದೇನೆ.ಇದೇ ನನಗೆ ಸಂತೋಷ ತಂದಿದೆ ಎಂದು ಶ್ರೀಮಂತ ಪಾಟೀಲರು, ಹಾಗೂ ಅವರ ಸುಪುತ್ರ ಶ್ರೀನಿವಾಸ್ ಪಟೇಲ್, ಯೋಗೇಶ್ ಪಾಟೀಲ್ ಹೇಳಿದರು.
ಮಾಜಿ ಸಚಿವ ಶ್ರೀಮಂತ ಪಾಟೀಲರನ್ನು ಸನ್ಮಾನಿಸಲು ಮಾಜಿ ಸಚಿವ ಹಾಗೂ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಮಾಜಿ ಶಾಸಕ ಮಹೇಶ್ ಕುಮ್ಟಳಿ, ಆಗಮಿಸಿದರು ಇವರು ಶ್ರೀಮಂತ ಪಾಟೀಲರನ್ನು ಸನ್ಮಾನಿಸಿ ಶತಾಯುಶ್ವ ಆಗಲಿ ಎಂದು ಶುಭ ಹಾರೈಸಿದರು.
ಇಲ್ಲಿಗೆ ಹಮ್ಮಿಕೊಂಡ ಉಚಿತ ಶಿಬಿರಗಳ ವ್ಯವಸ್ಥೆ ಬಗ್ಗೆ ವೀಕ್ಷಣೆ ಮಾಡಿ ಸಂತಸ ವ್ಯಕ್ತಪಡಿಸಿದರು.
ಕೆಲ ಮಾಧ್ಯಮದವರು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಇವರನ್ನು ಕೃಷ್ಣಾ ನದಿಯ ನೀರಿನ ಬಗ್ಗೆ ವಿಚಾರಿಸಿದಾಗ ನಾವು ಶೀಘ್ರದಲ್ಲಿ ಮಹಾರಾಷ್ಟ್ರ ಸಿಎಂ ದೇವೇಂದ್ರಪಡಮೇಶ್ ಇವರನ್ನು ಭೇಟಿಯಾಗಿ ನದಿಯಲ್ಲಿ ನೀರಹರಿಸುವುದಾಗಿ ಭರವಸೆ ನೀಡಿದರು.
ಬೆಳಿಗ್ಗೆ ಸಕ್ಕರೆ ಕಾರ್ಖಾನೆಯ ಹಿರಿಯ ಅಧಿಕಾರಿ ಎಲ್ ಆರ್ ಲಟಕೆ ಇವರ ನೇತೃತ್ವದಲ್ಲಿ ಕೇಕ ಕತ್ತರಿಸಿ ಅವರ ಸುಪುತ್ರರಾದ ಶ್ರೀನಿವಾಸ್ ಯೋಗೇಶ್ ಸುಶಾಂತ್ ಮತ್ತು ಹಿರಿಯ ಅಧಿಕಾರಿಗಳು ಶ್ರೀಮಂತ ಪಾಟೀಲರನ್ನು ಸನ್ಮಾನಿಸಿ ಆಶೀರ್ವಾದ ಪಡೆದುಕೊಂಡರು.
ಸೇವಾ ಸದನ ಆಸ್ಪತ್ರೆಯ ಮುಖ್ಯಸ್ಥರಾದ ಶೈಲಜಾ ಪಾಟೀಲ, ಗೋವಿಂದ ಜೋಶಿ, ಕಿಶೋರ್ ಬಿರಾದಾರ, ಇವರು ಮಾಹಿತಿ ನೀಡುವಾಗ 40 ಜನ ಸಿಬ್ಬಂದಿಗಳನ್ನು ತೆಗೆದುಕೊಂಡು ಈ ಶಿಬಿರದಲ್ಲಿ ಪಾಲ್ಗೊಂಡು ಸುಮಾರು ಒಂದು ಸಾವಿರ ಜನರ ಮೇಲೆ ಉಚಿತ ಉಚ್ಚಾರ ಹಾಗೂ ಆರೋಗ್ಯ ತಪಾಸಣೆ ಮಾಡಲಾಗಿದೆ ಎಂದರು.
ಖ್ಯಾತ ವೈದ್ಯರಾದ ಉಮೇಶ್ ಬಿರಾದಾರ್ ಕೌಸುಬ್ ವೈದ್ಯ ಸಂದೀಪ್ ಹಿಡನ್ ಇವರು ಆರೋಗ್ಯ ತಪಾಸಣೆ ಮಾಡಿದರು.
ಸಮಾರಂಭದಲ್ಲಿ ಮಾಜಿ ಸಚಿವ ಶ್ರೀಮಂತ ಪಾಟೀಲರ ಆಪ್ತ ಕಾರ್ಯಕರ್ತರಾದ ದಾದಾ ಪಾಟೀಲ್, ರಾಜೇಂದ್ರ ಪೋಥದಾರ್, ಅಪಾಸಾಹೇಬ ಅವತಾಡೆ, ನಾನಾ ಸಾಹೇಬ್ ಅವತಾಡೆ ನ್ಯಾಯವಾದಿ ಅಭಯಕುಮಾರ್ ಅಕಿವಾಟೆ, ಶಿವಾನಂದ ಪಾಟೀಲ್,ಉತ್ಕರ್ಷ್ ಪಾಟೀಲ್, ಆರ್ ಎಂ ಪಾಟೀಲ್, ಮೆಹಬೂಬ್ ಮುಲ್ಲಾ, ಸುಧಾಕರ್ ಭಗತ್, ತಮ್ಮನ್ನ
ಪಾರಶೆಟ್ಟಿ, ಅರುಣ ಗಣೇಶವಾಡಿ, ಬೊಮ್ಮನ್ನ ಚೊಗುಲೆ, ಪ್ರಮೋದ್ ಹೊಸೂರೆ, ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿ ಶಿಬಿರ ಯಶಸ್ವಿ ಗೊಳಿಸಿದರು.
Laxmi News 24×7