Breaking News

ಜಗತ್ತಿನಲ್ಲೇ ಪುರಾತಣವಾದ ನಮ್ಮ ದೇಶದ ಸಂಸ್ಕೃತಿ ಇತಿಹಾಸವನ್ನು ಉಳಿಸುವ ಕಾರ್ಯಗಳಾಬೇಕು; ಶಾಸಕ ಆಸೀಫ್ ಸೇಠ್

Spread the love

ಜಗತ್ತಿನಲ್ಲೇ ಪುರಾತಣವಾದ ನಮ್ಮ ದೇಶದ ಸಂಸ್ಕೃತಿ ಇತಿಹಾಸವನ್ನು ಉಳಿಸುವ ಕಾರ್ಯಗಳಾಬೇಕು; ಶಾಸಕ ಆಸೀಫ್ ಸೇಠ್
ಸ್ಫೂರ್ತಿ ಅಸೋಸಿಯೇಷನ್’ನಿಂದ ಭಾವಗೀತ ಗಾಯನ; ಕಾರ್ತಿಕೋತ್ಸವ
ಭಾವಗೀತ ಗಾಯನ; ಕಾರ್ತಿಕೋತ್ಸವ
ಸ್ಫೂರ್ತಿ ಅಸೋಸಿಯೇಷನ್’ನಿಂದ ಆಯೋಜನೆ
ನಮ್ಮ ದೇಶದ ಸಂಸ್ಕೃತಿ ಇತಿಹಾಸವನ್ನು ಉಳಿಸುವ ಕಾರ್ಯಗಳಾಬೇಕು
ಶಾಸಕ ಆಸೀಫ್ ಸೇಠ್ ಅಭಿಪ್ರಾಯ
ಬೆಳಗಾವಿಯ ಸ್ಫೂರ್ತಿ ಸೋಷಿಯಲ್ ವೆಲ್’ಫೇರ್ ಅಸೋಸಿಯೇಷನ್’ನ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಹಾಗೂ ಭಾವಗೀತೆ ಗಾಯನ ಸ್ಪರ್ಧೆ ಮತ್ತು ಕಾರ್ತಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಇಂದು ಮಂಗಳವಾರ ಬೆಳಗಾವಿಯ ಮಹಾಂತೇಶ್ ನಗರದಲ್ಲಿರುವ ಮಹಾಂತ್ ಭವನದಲ್ಲಿ ಬೆಳಗಾವಿಯ ಸ್ಫೂರ್ತಿ ಸೋಷಿಯಲ್ ವೆಲ್’ಫೇರ್ ಅಸೋಸಿಯೇಷನ್’ನ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಹಾಗೂ ಭಾವಗೀತೆ ಗಾಯನ ಸ್ಪರ್ಧೆ ಮತ್ತು ಕಾರ್ತಿಕೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅಧ್ಯಕ್ಷೆ ಜ್ಯೋತಿ ಭಾವಿಕಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉತ್ತರ ಶಾಸಕ ಆಸೀಫ್ ಸೇಠ್, ಸಂಗೀತ ಪ್ರಾಧ್ಯಾಪಕರಾದ ಡಾ. ಸುನೀತಾ ಪಾಟೀಲ್ ಉಪಸ್ಥಿತರಿದ್ಧರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಉತ್ತರ ಶಾಸಕ ಆಸೀಫ್ ಸೇಠ್ ಅವರು, ಜಗತ್ತಿನಲ್ಲೇ ಅತಿ ಪುರಾತಣ ಸಂಸ್ಕೃತಿ ನಮ್ಮ ದೇಶಕ್ಕಿದೆ. ನಮ್ಮ ದೇಶ ಮತ್ತು ರಾಜ್ಯದ ಸಂಸ್ಕೃತಿಯನ್ನು ಯಾವತ್ತೂ ಉಳಿಸಿ ಬೆಳೆಸುವ ಕಾರ್ಯಗಳಾಗಬೇಕು. ಮುಂದಿನ ಬಾರಿ ಬೃಹತ್ತಾದ ಸಾಮಾಜೀಕ ಸಾಂಸ್ಕೃತಿಕ ಉಪಕ್ರಮ ಆಯೋಜಿಸುವುದಾದರೇ, ತಮ್ಮ ಸಹಕಾರವಿದೆ ಎಂದರು.
ಜ್ಯೋತಿ ಭಾವಿಕಟ್ಟಿ ಅವರು 11 ವರ್ಷದಿಂದ ತಮ್ಮ ಸಂಸ್ಥೆ ಕಾರ್ಯಕ್ರಮವನ್ನು ಆಯೋಜಿಸುತ್ತ ಬಂದಿದೆ. ಎಲ್ಲ ಮಹಿಳಾ ಮಂಡಳಗಳ ಸಹಯೋಗದಿಂದ ಮುಂಬರುವ ದಿನಗಳಲ್ಲಿ ಸಾಮೂಹಿಕ ವಿವಾಹವನ್ನು ಆಯೋಜಿಸುವ ಉದ್ಧೇಶವನ್ನು ಹೊಂದಿದ್ದೇವೆ. ನಮ್ಮ ಮಹಿಳಾ ಮಂಡಳಕ್ಕೆ ಜಾಗೆಯನ್ನು ನೀಡಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು. 
ರೇಷ್ಮಾ ನೇರ್ಲಿ, ಲತಾ ಕರಡಿಗುದ್ದಿ, ಗೀತಾ ಮಲ್ಲಾಪೂರ, ಪ್ರೇಮಾ ದೇಶನೂರ, ಉಷಾ ಶೆಟ್ಟರ್, ಅಂಜನಾ ಹಿರೇಮಠ, ಸವಿತಾ ಕಳಸಣ್ಣವರ, ಅಶ್ವಿನಿ ಪಾಟೀಲ್, ನಿಶಾ ಝೋಂಡ್, ಶ್ವೇತಾ ಪಾಟೀಲ್, ಅನೀತಾ ಚಟ್ಟೇರ್ ಸೇರಿದಂತೆ ಇನ್ನುಳಿದವರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ