ಸತೀಶ ಶುಗರ್ಸ ಕಬ್ಬು ನುರಿಸುವ ಹಂಗಾಮಿಗೆ ರಾಹುಲ್ ಜಾರಕಿಹೊಳಿ ಚಾಲನೆ
ಬೆಳಗಾವಿ: ಹುಣಶ್ಯಾಳ ಪಿ.ಜಿ. ಸತೀಶ್ ಶುಗರ್ಸ ಲಿಮಿಟೆಡ್ ಸಕ್ಕರೆ ಕಾರ್ಖಾನೆಯ ಸನ್ 2025-26 ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಕಾರ್ಖಾನೆಯ ನಿರ್ದೇಶಕರು, ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ, ಬೆಳಗಾವಿಯ ನಿರ್ದೇಶಕರಾದ ರಾಹುಲ್ ಜಾರಕಿಹೊಳಿ ಅವರು ಇಂದು ಚಾಲನೆ ನೀಡಿದರು.
ಈ ವೇಳೆ ಯುವ ನಾಯಕ ರಾಹುಲ್ ಜಾರಕಿಹೊಳಿ ಮಾತನಾಡಿ, ಪ್ರಸಕ್ತ ಸಾಲಿನ ಹಂಗಾಮಿನಲ್ಲಿ ಅಧಿಕ ಪ್ರಮಾಣದಲ್ಲಿ ಕಬ್ಬು ನುರಿಸಿ, ಕಾರ್ಖಾನೆಯನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸುತ್ತೇವೆ. ಅಲ್ಲದೇ ಹೊಸ ಹಂಗಾಮು ಕಬ್ಬು ಬೆಳೆಗಾರರಿಗೆ ಸಮೃದ್ಧಿ ಮತ್ತು ಸಿಹಿತನ ತಂದುಕೊಡಲಿ ಎಂದು ಶುಭ ಹಾರೈಸಿದರು.
ಕಾರ್ಖಾನೆಯ ಚೇರಮನ್ ಮತ್ತು ಮುಖ್ಯ ಹಣಕಾಸಿನ ಅಧಿಕಾರಿ ಪ್ರದೀಪಕುಮಾರ ಇಂಡಿ ಮಾತನಾಡಿ, ಪ್ರಸಕ್ತ 2025-26 ರ ಹಂಗಾಮಿನಲ್ಲ್ಲಿ 15 ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸುವ ಗುರಿ ಹೊಂದಿದ್ದೇವೆ ಮತ್ತು ಕಬ್ಬು ಪೂರೈಸಿದ ರೈತರಿಗೆ ಸರ್ಕಾರ ನಿಗದಿಪಡಿಸಿದಂತೆ ಕಬ್ಬಿನ ಬಿಲ್ಲನ್ನು ಸಂದಾಯ ಮಾಡಲಾಗುವುದು ಎಂದು ತಿಳಿಸಿದರು.
ಕಾರ್ಖಾನೆಗೆ ಕಬ್ಬು ಪೂರೈಸುವ ಸಮಸ್ತ ರೈತ ಬಾಂಧವರು ಪ್ರಸಕ್ತ ಹಂಗಾಮಿನಲ್ಲಿ ಉತ್ತಮ ಗುಣಮಟ್ಟದ ಕಬ್ಬನ್ನು ಪೂರೈಸಿ ಕಾರ್ಖಾನೆಯ ಪ್ರಗತಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಪ್ರಗತಿಪರ ರೈತರಾದ ಬಿ.ಎಚ್.ರೆಡ್ಡಿ, ಮಹಾದೇವ ಪತ್ತಾರ, ಬಸವರಾಜ ಮಾಳೇದವರ, ಸಿದ್ದಪ್ಪ ಹಂಜಿ,ಅಜ್ಜಪ್ಪ ಗಿರಡ್ಡಿ ಹಾಗೂ ಇತರ ಪ್ರಗತಿಪರ ರೈತರು ಮತ್ತು ಹಿರಿಯ ಉಪಾಧ್ಯಕ್ಷರುಗಳಾದ ಪಿ.ಡಿ. ಹಿರೇಮಠ, ಎಲ್.ಆರ್. ಕಾರಗಿ, ಉಪಾಧ್ಯಕ್ಷರುಗಳಾದ ಡಿ.ಆರ್.ಪವಾರ, ವಿ.ಎಮ್ ತಳವಾರ, ಎ.ಎಸ್. ರಾಣಾ, ಪ್ರಧಾನ ವ್ಯವಸ್ಥಾಪಕರುಗಳಾದ ಎಂ.ಬಿ. ಸಸಾಲಟ್ಟಿ, ಮಹೇಶ ಜಿ.ಆರ್ ಮತ್ತು ಕಾರ್ಖಾನೆಯ ಕಾರ್ಮಿಕರು, ಸಿಬ್ಬಂದಿ ವರ್ಗ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
Laxmi News 24×7