Breaking News

ಕಬ್ಬು ಬೆಳೆಗಾರರ ಹೋರಾಟ ಅಂತ್ಯ – ಜಿಲ್ಲಾಧಿಕಾರಿ ಆನಂದ ಕೆ. ಮಧ್ಯಸ್ಥಿಕೆಯಿಂದ ಪರಿಹಾರ

Spread the love

ಕಬ್ಬು ಬೆಳೆಗಾರರ ಹೋರಾಟ ಅಂತ್ಯ – ಜಿಲ್ಲಾಧಿಕಾರಿ ಆನಂದ ಕೆ. ಮಧ್ಯಸ್ಥಿಕೆಯಿಂದ ಪರಿಹಾರ
ವಿಜಯಪುರದಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಕಬ್ಬು ಬೆಳೆಗಾರರ ಧರಣಿ ಹೋರಾಟ ಇಂದು ಅಂತ್ಯ ಕಂಡಿದೆ. ಜಿಲ್ಲಾಧಿಕಾರಿ ಆನಂದ ಕೆ. ಅವರ ಮಧ್ಯಸ್ಥಿಕೆಯಿಂದ ಹೋರಾಟಗಾರರು ಧರಣಿ ಕೈಬಿಟ್ಟಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ, ದರ ನಿಗಧಿ ಸಂಬಂಧಿಸಿದ ಆದೇಶದ ಪ್ರತಿಯನ್ನು ರೈತರಿಗೆ ನೀಡಲಾಯಿತು. ಡಿಸಿ ಆನಂದ ಕೆ. ಅವರು ಸ್ವತಃ ಆದೇಶವನ್ನು ಓದಿ ರೈತರಿಗೆ ವಿವರಿಸಿದರು. ಆದೇಶದಲ್ಲಿ “ರಿಕವರಿ ನೋಡದೆ ಪ್ರತಿ ಟನ್‌ಗೆ 100 ರೂಪಾಯಿ ರೈತರ ಖಾತೆಗೆ ನೇರ ಜಮೆಯಾಗಬೇಕು” ಎಂಬ ಸ್ಪಷ್ಟ ಉಲ್ಲೇಖವಿದ್ದು, ಈ ಅಂಶವನ್ನು ರೈತರಿಗೆ ಮನವರಿಕೆ ಮಾಡಲಾಯಿತು. ರಿಕವರಿ ಆಧಾರದಲ್ಲಿ 3200 ರೂ. ದರ ಅನ್ವಯವಾಗುವುದೆಂಬ ವಿಷಯಕ್ಕೂ ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿ ಹೇಳಿದರು – “ಹಿಂದಿನ ವರ್ಷಕ್ಕಿಂತ ಈ ಬಾರಿ ಹೆಚ್ಚುವರಿ ದರ ದೊರೆಯಲಿದೆ”. ಜಿಲ್ಲಾಧಿಕಾರಿಯ ವಿವರಣೆ ಮತ್ತು ಆದೇಶದ ಪ್ರತಿಯನ್ನು ಸ್ವೀಕರಿಸಿದ ಬಳಿಕ, ರೈತರು ಒಪ್ಪಿಗೆ ಸೂಚಿಸಿ ಧರಣಿಯನ್ನು ಹಿಂಪಡೆದರು.
ಈ ಮೂಲಕ ವಿಜಯಪುರ ಜಿಲ್ಲೆಯಲ್ಲಿ ಕಬ್ಬು ದರದ ಕುರಿತಿದ್ದ ಗೊಂದಲ ಮತ್ತು ಹೋರಾಟಕ್ಕೆ ಕೊನೆ ಬಿದ್ದಿದೆ.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ