Breaking News

“ನನ್ನ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಸುಳ್ಳು, ಆಕೆಯಿಂದಲೇ ನನಗೆ ವಂಚನೆಯಾಗಿದೆ..”: ಇವಿಪಿ ಫಿಲ್ಮ್ ಸಿಟಿ ಮಾಲೀಕರಿಂದ ಪ್ರತಿ ದೂರು

Spread the love

ಬೆಂಗಳೂರು: ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಇವಿಪಿ ಫಿಲ್ಮ್ ಸಿಟಿ ಮಾಲೀಕರ ವಿರುದ್ಧ ದೂರು ನೀಡಿದ್ದ ಮಹಿಳಾ ಫ್ಯಾಷನ್ ಡಿಸೈನರ್ ವಿರುದ್ಧ ಪ್ರಕರಣ ದಾಖಲಿಸಿದ್ದು, ತಮ್ಮ ಮೇಲೆ ಬಂದಿರುವ ಆರೋಪ ಸುಳ್ಳು ಎಂದು ಮಾಲೀಕ ಸಂತೋಷ್ ಸ್ಪಷ್ಟನೆ ನೀಡಿದ್ದಾರೆ.

ದೂರುದಾರ ಮಹಿಳೆ ನಗರದ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಕಳೆದ ಅ.14ರಂದು ಇವಿಪಿ ಫಿಲ್ಮ್ ಸಿಟಿ ಮಾಲೀಕ ಸಂತೋಷ್ ರೆಡ್ಡಿ ವಿರುದ್ಧ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ದೂರು ದಾಖಲಿಸಿದ್ದರು. ಈ ಸಂಬಂಧ ನ್ಯಾಯಾಲಯದ ಮೊರೆ ಹೋಗಿದ್ದ ಸಂತೋಷ್ ಎರಡು ದಿನಗಳ ಹಿಂದೆಯಷ್ಟೇ ಜಾಮೀನು ಪಡೆದಿದ್ದಾರೆ. ತಮ್ಮ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಅವರು ಮಾತನಾಡಿದ್ದಾರೆ.

“ತಮ್ಮ ವಿರುದ್ಧ ದೂರು ನೀಡಿದ ಮಹಿಳೆ ಹಾಗೂ ಅವರ ಸಹಚರರಿಂದ ತಾನು ಕೋಟ್ಯಂತರ ರೂಪಾಯಿ ಹಣ ಕಳೆದುಕೊಂಡಿದ್ದೇನೆ. ನನ್ನ ವಿರುದ್ಧ ದೂರು ದಾಖಲಾಗುವ ಕೆಲ ದಿನಗಳ ಹಿಂದೆ ಚೆನ್ನೈ ಪೊಲೀಸರಿಗೆ ಆಕೆಯ ವಿರುದ್ಧ ದೂರು ನೀಡಿದ್ದೆ. ಪೊಲೀಸರು ಎಫ್‌ಐಆರ್ ದಾಖಲಿಸಿ, ಆರೋಪಿತೆ ಬಳಸುತ್ತಿದ್ದ ಬ್ಯಾಂಕ್ ಖಾತೆ ಸ್ಥಗಿತಗೊಳಿಸಿ ತನಿಖೆ ಆರಂಭಿಸಿದ್ದರು” ಎಂದು ಅವರು ತಿಳಿಸಿದ್ದಾರೆ.

“ಪೊಲೀಸರ ವಿಚಾರಣೆ ಆಕೆ ಗೈರಾಗಿದ್ದಳು. ಬದಲಿಗೆ, ಮದ್ರಾಸ್ ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದರು. ಆ ಅರ್ಜಿ ವಜಾಗೊಂಡ ನಂತರ, ತಮ್ಮ ಮೇಲಿನ ವಂಚನೆ ಪ್ರಕರಣದಿಂದ ಗಮನ ಬೇರೆಡೆಗೆ ಸೆಳೆಯಲು ಮತ್ತು ನನ್ನ ಮೇಲೆ ಒತ್ತಡ ಹೇರಲು, ಅ.14ರಂದು ಬೆಂಗಳೂರಿನಲ್ಲಿ ನನ್ನ ವಿರುದ್ಧ ಲೈಂಗಿಕ ಕಿರುಕುಳದ ಸುಳ್ಳು ದೂರು ದಾಖಲಿಸಿದ್ದಾರೆ” ಎಂದು ರೆಡ್ಡಿ ದೂರಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ