Breaking News

ಡಿಸಿಸಿ ಬ್ಯಾಂಕ್ ಚುನಾವಣೆ: ಹುಕ್ಕೇರಿ ತಾಲ್ಲೂಕಿನ ಪಿಕೆಪಿಎಸ್ ಮತಕ್ಷೇತ್ರ ಪ್ರತಿನಿಧಿಸುವ ಚುನಾವಣೆ ಮುಂದೂಡಿಕೆ

Spread the love

ಡಿಸಿಸಿ ಬ್ಯಾಂಕ್ ಚುನಾವಣೆ: ಹುಕ್ಕೇರಿ ತಾಲ್ಲೂಕಿನ ಪಿಕೆಪಿಎಸ್ ಮತಕ್ಷೇತ್ರ ಪ್ರತಿನಿಧಿಸುವ ಚುನಾವಣೆ ಮುಂದೂಡಿಕೆ
ಹುಕ್ಕೇರಿ : ಕಾರ್ಮೊಡ ಕತ್ತಲಾದ ಹುಕ್ಕೇರಿ ಕ್ಷೇತ್ರದ ಡಿ ಸಿ ಸಿ ಬ್ಯಾಂಕ ಚುನಾವಣೆ !
ಬೆಳಗಾವಿ ಮದ್ಯವರ್ತಿ ಬ್ಯಾಂಕಿನ ಚುನಾವಣೆ ಅಕ್ಟೋಬರ್ 19 ರಂದು 7 ಸ್ಥಾನಗಳಿಗೆ ಮತದಾನ ಜರುಗಲಿದ್ದು ಸಕಲ ಸುದ್ದತೆ ಮಾಡಿಕೊಳ್ಳಲಾಗಿದೆ ಆದರೆ ಹುಕ್ಕೇರಿ ಕ್ಷೇತ್ರದ ಮತದಾನ ಮುಂದೂಡಲಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ ರೋಷನ್ ಅಧಿಸೂಚನೆ ಹೋರಡಿಸಿದ್ದಾರೆ.
ಹೌದು ಜಾರಕಿಹೋಳಿ ಮತ್ತು ಕತ್ತಿ ಕುಟುಂಬದ ನಡುವೆ ಭಾರಿ ಜಿದ್ದಾ ಜಿದ್ದಿನಿಂದ ಜರುಗಲಿರುವ ಬೆಳಗಾವಿ ಜಿಲ್ಲಾ ಮದ್ಯವರ್ತಿ ಸಹಕಾರಿ ಬ್ಯಾಂಕಿನ ಚುನಾವಣೆ ಈಗ ಮತ್ತೊಂದು ಹಂತ ತಲುಪಿದೆ, ಅಕ್ಟೋಬರ್ 19 ರಂದು ಏಳು ಸ್ಥಾನಗಳಿಗೆ ಮತದಾನ ನಡೆಯಬೆಕಿತ್ತು ಆದರೆ ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶದ ಅನ್ವಯ ಹುಕ್ಕೇರಿ ಕ್ಷೇತ್ರದ ಗ್ರಾಮಿಣ ಕೃಷಿ ಪತ್ತಿನ ಸಹಕಾರಿ ಬ್ಯಾಂಕಿನ ಕ್ಷೇತ್ರದ ಚುನಾವಣೆಗೆ ರೀಟ್ ಅರ್ಜಿ ಧಾಖಲಾದ ಕಾರಣ
ಚುನಾವಣೆಯನ್ನು ಮುಂದಿನ ಆದೇಶದ ವರಗೆ ಮುಂದುಡಲು ನ್ಯಾಯಾಲಯ ಆದೇಶ ನೀಡಿದ್ದರಿಂದ ಬೆಳಗಾವಿ ಜಿಲ್ಲಾಧೀಕಾರಿ ಮಹಮ್ಮದ ರೋಷನ ಅಧಿಸೂಚನೆ ಹೋರಡಿಸಿ ಹುಕ್ಕೇರಿ ಕ್ಷೇತ್ರದ ಚುನಾವಣೆ ಮುಂದೂಡಿದ್ದಾರೆ.
ಇದರಿಂದಾಗಿ ಕಳೆದ ಒಂದು ತಿಂಗಳಿನಿಂದ ಹುಕ್ಕೇರಿ ಕ್ಷೇತ್ರದಲ್ಲಿ ಜಾರಕಿಹೋಳಿ ಮತ್ತು ಕತ್ತಿ ಗುಂಪಿನ ಚುನಾವಣಾ ಹಣಾಹಣಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ .

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ