Breaking News

ಮೊದಲ ಹುತಾತ್ಮ ವೀರ ಜಡಗನ್ನ ಬಾಲಣ್ಣರ ಕಂಚಿನ ಮೂರ್ತಿ ಅನಾವರಣಗೊಳಿಸಿದ ಸಚಿವ ಸತೀಶ್ ಜಾರಕಿಹೊಳಿ

Spread the love

ಮೊದಲ ಹುತಾತ್ಮ ವೀರ ಜಡಗನ್ನ ಬಾಲಣ್ಣರ ಕಂಚಿನ ಮೂರ್ತಿ ಅನಾವರಣಗೊಳಿಸಿದ ಸಚಿವ ಸತೀಶ್ ಜಾರಕಿಹೊಳಿ
ಮುಧೋಳ ನಗರದಲ್ಲಿ ವೀರ ಜಡಗನ್ನ ಬಾಲಣ್ಣರ ಕಂಚಿನ ಮೂರ್ತಿ ಅನಾವರಣ..
ಬ್ರಿಟಿಷರು ಜಡಗಣ್ಣ ಬಾಲಣ್ಣನನ್ನ ನೇಣಿಗೆ ಹಾಕಿದ್ದ ಸ್ಥಳದಲ್ಲಿ ಪುತ್ಥಳಿ ನಿರ್ಮಾಣ..
ನಗರದ ಉತ್ತೂರು ಗೇಟ್ ಬಳಿ ವೀರರ ಹೆಸರಿನಲ್ಲಿ ವೃತ್ತ ನಿರ್ಮಾಣ..
ಕಳೆದ ಮೂರ್ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮೂರ್ತಿ ಅನಾವರಣ..
ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವೀರರಾದ ಜಡಗನ್ನ ಮತ್ತು ಬಾಲಣ್ಣ ಅವರ ಕಂಚಿನ ಪುತ್ಥಳಿಗಳನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಮತ್ತು ಮಾಜಿ ಸಚಿವ ರಾಜುಗೌಡ ನಾಯಕ ಅವರು ಅನಾವರಣಗೊಳಿಸಿದರು.
ಬ್ರಿಟಿಷರು ಜಡಗಣ್ಣ ಮತ್ತು ಬಾಲಣ್ಣ ಅವರನ್ನು ನೇಣಿಗೆ ಹಾಕಿದ್ದ ಸ್ಥಳವಾದ ಮುಧೋಳ ನಗರದ ಉತ್ತೂರು ಗೇಟ್ ಬಳಿ ಈ ಪುತ್ಥಳಿಗಳನ್ನು ಸ್ಥಾಪಿಸುವ ಮೂಲಕ ವೀರರ ಹೆಸರಿನಲ್ಲಿ ಸುಂದರ ವೃತ್ತವನ್ನು ನಿರ್ಮಿಸಲಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸುಮಾರು ೪೦ ಲಕ್ಷ ರೂಪಾಯಿ ವೆಚ್ಚದ ಈ ಮೂರ್ತಿ ಅನಾವರಣ ಕಾರ್ಯಕ್ರಮ ಇಂದು ಪೂರ್ಣಗೊಂಡಿತು.
ಪುತ್ಥಳಿ ಅನಾವರಣದ ನಂತರ ಡಾ. ಅಂಬೇಡ್ಕರ್ ಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಿತು. ಈ ಇಬ್ಬರು ವೀರರು ದೇಶಕ್ಕಾಗಿ ಮಾಡಿದ ತ್ಯಾಗ-ಬಲಿದಾನವನ್ನು ಈ ಪುತ್ಥಳಿಗಳು ನಿರಂತರವಾಗಿ ನೆನಪಿಸುತ್ತವೆ ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ