ಕ್ರಿಕೆಟ್ ಮಹೋತ್ಸವ 2025 ಟಿ-10 ಲೆದರ್ ಬಾಲ್ ಕ್ರಿಕೆಟ್ ಪಂದ್ಯ
ಆಲ್ ರೌಂಡರ್ ಆಟಗಾರ ಅಮೇಯ ಮೀಲಿಂದ್ ಭಾತಕಾಂಡೆ ವಿಶೇಷ ಸಾಧನೆ
ಇಂಗ್ಲೆಂಡ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಆಹ್ವಾನಿತರ ಕ್ರಿಕೆಟ್ ಮಹೋತ್ಸವ 2025 ಟಿ-10 ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಳಗಾವಿಯ ಪ್ರತಿಭಾನ್ವಿತ ಆಲ್ ರೌಂಡರ್ ಆಟಗಾರ ಅಮೇಯ ಮೀಲಿಂದ್ ಭಾತಕಾಂಡೆ ಅವರು ತಮ್ಮ ಸ್ಮರಣೀಯ ಆಟದ ಮೂಲಕ ಭಾರತ್ ಬ್ರಿಸ್ಟಲ್ ತಂಡಕ್ಕೆ ಪಾಕಿಸ್ತಾನ್ ಬ್ರಿಸ್ಟೋಲಿಯನ್ಸ್ ವಿರುದ್ಧ ಅದ್ಭುತ ವಿಜಯ ತಂದುಕೊಟ್ಟಿದ್ದಾರೆ.
ಇಂಗ್ಲೆಂಡ್‌ನ ಹಿಂಟನ್ ಚಾರ್ಟರ್ ಹೌಸ್ ಕ್ರಿಕೆಟ್ ಕ್ಲಬ್ ಮೈದಾನದಲ್ಲಿ ನಡೆದ ಅಂತಿಮ ಪಂದ್ಯದಲ್ಲಿ, ಭಾತಕಾಂಡೆ ಕೇವಲ ಬ್ಯಾಟಿಂಗ್‌ನಲ್ಲಿ ಅಬ್ಬರದ ಪ್ರದರ್ಶನ ನೀಡಿ 6 ಸಿಕ್ಸರ್‌ಗಳು ಮತ್ತು 3 ಬೌಂಡರಿಗಳ ಸಹಿತ ಅಜೇಯ 65 ರನ್ ಗಳಿಸಿದ್ದು ಮಾತ್ರವಲ್ಲದೆ, ಬೌಲಿಂಗ್‌ನಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡಿ 2 ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಮೊದಲಿಗೆ ಬ್ಯಾಟಿಂಗ್ ಮಾಡಿದ ಭಾರತ್ ಬ್ರಿಸ್ಟಲ್ ತಂಡ 10 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 105 ರನ್ ಗಳಿಸಿತು. ಪ್ರತಿಯಾಗಿ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ್ ಬ್ರಿಸ್ಟೋಲಿಯನ್ಸ್ ತಂಡ 10 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 90 ರನ್ ಗಳಿಸಲಷ್ಟೇ ಶಕ್ತವಾಯಿತು.
ಅಮೇಯ ಭಾತಕಾಂಡೆ ಅವರಿಗೆ ಅವರ ತಂದೆ ಮಿಲಿಂದ್ ಭಾತಕಾಂಡೆ ಮತ್ತು ತಾಯಿ ಮಧುರಾ ಭಾತಕಾಂಡೆ ಅವರ ಪ್ರೋತ್ಸಾಹ, ಹಾಗೂ ಹಿರಿಯ ಕ್ರಿಕೆಟ್ ತರಬೇತುದಾರ ರವಿಶಂಕರ್ ಮಾಳಶೆಟ್ಟೆ ಮತ್ತು ರಣಜಿ ಕ್ರಿಕೆಟಿಗ ಮಿಲಿಂದ್ ಚವ್ಹಾಣ್ ಅವರ ಮಾರ್ಗದರ್ಶನ ಲಭಿಸಿದೆ.
Laxmi News 24×7