Breaking News

ದೇಶದಲ್ಲಿಯೇ ಅತಿ ಹೆಚ್ಚು ಸೈಬರ್ ಅಪರಾಧ ಬೆಂಗಳೂರು ಅಗ್ರಸ್ಥಾನ ಪಡೆದುಕೊಂಡಿದೆ. ಎನ್‌ಸಿಆರ್‌ಬಿ (ರಾಷ್ಟ್ರೀಯ ಅಪರಾಧ ದಾಖ

Spread the love

ಬೆಂಗಳೂರು: ಭಾರತದ ಸಿಲಿಕಾನ್ ವ್ಯಾಲಿ, ಐಟಿ ನಗರಿ ಬೆಂಗಳೂರಿನಲ್ಲಿ 2023ರಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಸೋಮವಾರ ಬಿಡುಗಡೆಗೊಳಿಸಿರುವ 2023ರ ದತ್ತಾಂಶದಲ್ಲಿ ಈ ಮಾಹಿತಿ ಬಹಿರಂಗಗೊಂಡಿದ್ದು, ಈ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನ ಪಡೆದುಕೊಂಡಿದೆ.

ಎನ್‌ಸಿಆರ್‌ಬಿ (ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ) ಬಿಡುಗಡೆಗೊಳಿಸಿರುವ ಅಂಕಿ- ಅಂಶಗಳನ್ವಯ 2023ರಲ್ಲಿ ಬೆಂಗಳೂರಿನಲ್ಲಿ ಒಟ್ಟು 17,631 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. 2022ರಲ್ಲಿ ದಾಖಲಾದ (9,940) ಪ್ರಕರಣಗಳಿಗೆ ಹೋಲಿಸಿದರೆ 77.37%ರಷ್ಟು ಸೈಬರ್ ಅಪರಾಧ ಪ್ರಕರಣಗಳು ಏರಿಕೆಯಾಗಿರುವುದು ಕಂಡು ಬಂದಿದೆ. ಬೆಂಗಳೂರಿನ ನಂತರದ ಸ್ಥಾನವನ್ನು ಹೈದರಾಬಾದ್, ಮುಂಬೈ, ದೆಹಲಿ ಹಾಗೂ ಲಕ್ನೋಗಳು ಪಡೆದಿವೆ.

ಇನ್ನು ಇದೇ ವರ್ಷ ರಾಜ್ಯದಲ್ಲಿ ಮೊದಲಾರ್ಧದಲ್ಲಿ (ಆಗಸ್ಟ್ ಅಂತ್ಯದವರೆಗೆ) ಒಟ್ಟು 9,853 ಸೈಬರ್ ಕ್ರೈಮ್ ಪ್ರಕರಣಗಳು ದಾಖಲಾಗಿವೆ. ಕರ್ನಾಟಕ ರಾಜ್ಯ ಅಪರಾಧ ದಾಖಲೆಗಳ ಅಂಕಿ – ಅಂಶಗಳಲ್ಲಿ ಈ ಮಾಹಿತಿ ಬಹಿರಂಗವಾಗುತ್ತಿದ್ದು, ಬೆಂಗಳೂರಿನಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ.

ನಂತರದಲ್ಲಿ ಬೆಂಗಳೂರು ಗ್ರಾಮಾಂತರ, ವಿಜಯನಗರ, ತುಮಕೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗುತ್ತಿವೆ. 2025ರಲ್ಲಿ (ಆಗಸ್ಟ್ ಅಂತ್ಯದವರೆಗೂ) ರಾಜ್ಯದಲ್ಲಿ ದಾಖಲಾದ ಒಟ್ಟು ಸೈಬರ್ ಅಪರಾಧ ಪ್ರಕರಣಗಳು ಹಾಗೂ ಅವುಗಳ ಪೈಕಿ ಹೆಚ್ಚು ಪ್ರಕರಣ ದಾಖಲಾದ ಜಿಲ್ಲೆಗಳ ವಿವರ ಹೀಗಿದೆ.

ಜನವರಿ (ಹೆಚ್ಚು ಪ್ರಕರಣದ ಜಿಲ್ಲೆಗಳು) ಒಟ್ಟು 1,401 ಪ್ರಕರಣ
ಬೆಂಗಳೂರು 1,057
ಬೆಂಗಳೂರು ಗ್ರಾಮಾಂತರ 47
ವಿಜಯನಗರ 26
ಚಾಮರಾಜನಗರ 20
ಫೆಬ್ರವರಿ (ಹೆಚ್ಚು ಪ್ರಕರಣದ ಜಿಲ್ಲೆಗಳು) ಒಟ್ಟು 1,173 ಪ್ರಕರಣ
ಬೆಂಗಳೂರು 899
ಬೆಂಗಳೂರು ಗ್ರಾಮಾಂತರ 42
ವಿಜಯನಗರ 31
ಶಿವಮೊಗ್ಗ 20
ಮಾರ್ಚ್ (ಹೆಚ್ಚು ಪ್ರಕರಣದ ಜಿಲ್ಲೆಗಳು) ಒಟ್ಟು 1,254 ಪ್ರಕರಣ
ಬೆಂಗಳೂರು 916
ಬೆಂಗಳೂರು ಗ್ರಾಮಾಂತರ 50
ವಿಜಯನಗರ 49
ತುಮಕೂರು 22
ಏಪ್ರಿಲ್ (ಹೆಚ್ಚು ಪ್ರಕರಣದ ಜಿಲ್ಲೆಗಳು) ಒಟ್ಟು 1,005 ಪ್ರಕರಣ
ಬೆಂಗಳೂರು 706
ವಿಜಯನಗರ 34
ಬೆಂಗಳೂರು ಗ್ರಾಮಾಂತರ 33
ರಾಯಚೂರು 19
ಮೇ (ಹೆಚ್ಚು ಪ್ರಕರಣದ ಜಿಲ್ಲೆಗಳು) ಒಟ್ಟು 1,193 ಪ್ರಕರಣ
ಬೆಂಗಳೂರು 875
ಬೆಂಗಳೂರು ಗ್ರಾಮಾಂತರ 46
ವಿಜಯನಗರ 31
ತುಮಕೂರು 23
ಜೂನ್ (ಹೆಚ್ಚು ಪ್ರಕರಣದ ಜಿಲ್ಲೆಗಳು) ಒಟ್ಟು 1,246 ಪ್ರಕರಣ
ಬೆಂಗಳೂರು 867
ಬೆಂಗಳೂರು ಗ್ರಾಮಾಂತರ 37
ವಿಜಯನಗರ 46
ಉಡುಪಿ 29
ಜುಲೈ (ಹೆಚ್ಚು ಪ್ರಕರಣದ ಜಿಲ್ಲೆಗಳು) ಒಟ್ಟು 1,317 ಪ್ರಕರಣ
ಬೆಂಗಳೂರು 942
ಉಡುಪಿ 37
ವಿಜಯನಗರ 32
ಬೆಂಗಳೂರು ಗ್ರಾಮಾಂತರ 28
ಆಗಸ್ಟ್ (ಹೆಚ್ಚು ಪ್ರಕರಣದ ಜಿಲ್ಲೆಗಳು) ಒಟ್ಟು 1,264 ಪ್ರಕರಣ
ಬೆಂಗಳೂರು 862
ವಿಜಯನಗರ 33
ತುಮಕೂರು 28
ಚಾಮರಾಜನಗರ 27

ಸೈಬರ್ ವಂಚನೆಗೊಳಗಾಗದಿರಲು ಪೊಲೀಸರು ನೀಡಿರುವ ಸಾಮಾನ್ಯ ಸೂಚನೆಗಳು:

  • ಯಾವುದೇ ಅನುಮಾನಾಸ್ಪದ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವುದು ಸೂಕ್ತವಲ್ಲ.
  • ಸಾಮಾಜಿಕ ಜಾಲತಾಣ ಸೇರಿದಂತೆ ಇತರ ಖಾತೆಗಳಿಗೆ ಕ್ಲಿಷ್ಟಕರವಾದ ಪಾಸ್‌ವರ್ಡ್, 2-ಫ್ಯಾಕ್ಟರ್ ಅಥೆಂಟಿಕೇಷನ್ ಇರಿಸುವುದು ಉತ್ತಮ.
  • ನಿಗದಿತವಾಗಿ ಸಾಫ್ಟ್‌ವೇರ್ / ಆ್ಯಪ್‌ಗಳನ್ನು ಅಪ್ಡೇಟ್‌ಗೊಳಿಸಿ. ಬ್ಯಾಂಕ್ ಖಾತೆಯಲ್ಲಿನ ಹಣಕಾಸು ವ್ಯವಹಾರದ ಬಗ್ಗೆ ಪರಾಮರ್ಶಿಸುತ್ತೀರಿ.
  • ಮೊಬೈಲ್ ಹಾಗೂ ಆನ್‌ಲೈನ್‌ ಹಣಕಾಸು ವ್ಯವಹಾರದ ಬಗ್ಗೆ ಎಚ್ಚರವಿರಲಿ.
  • ಸಾರ್ವಜನಿಕ ವೈ-ಫೈ ಬಳಸುವಾಗ ಎಚ್ಚರವಿರಲಿ.
  • ವೈಯಕ್ತಿಕ ಮಾಹಿತಿ, ದಾಖಲೆಗಳನ್ನು ಗೌಪ್ಯವಾಗಿರಿಸಿಕೊಳ್ಳಿ.
  • ಉತ್ತಮ ಆ್ಯಂಟಿ ವೈರಸ್ ಸಾಫ್ಟ್‌ವೇರ್‌ಗಳನ್ನು ಬಳಸಿ, ಹಾಗೂ ನಿಗದಿತವಾಗಿ ಅಪ್ಡೇಟ್ ಮಾಡಿ.
  • ಯಾವುದೇ ವಂಚನೆಗಳಾದಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ಅಥವಾ ರಾಷ್ಟ್ರೀಯ ಸೈಬರ್ ಕ್ರೈಂ ಸಹಾಯವಾಣಿ (1930) ಸಂಪರ್ಕಿಸಿ.

‘ಗೋಲ್ಡನ್​ ಅವರ್’: ಸೈಬರ್ ವಂಚಕರು ಡಿಜಿಟಲ್ ಅರೆಸ್ಟ್, ಗಿಫ್ಟ್ ಆಫರ್, ಕ್ರೆಡಿಟ್ ಕಾರ್ಡ್ ಪಾಸ್‌ವರ್ಡ್ ಚೇಂಜ್, ಕೆವೈಸಿ ಅಪ್ಡೇಟ್ ಸೋಗಿನಲ್ಲಿ ಎಸ್ಎಂಎಸ್ ಅಥವಾ ಕರೆಗಳ ಮೂಲಕ ಹಣ ದೋಚುತ್ತಾರೆ. ಅಂತಹ ಸಂದರ್ಭಗಳಲ್ಲಿ ವಂಚನೆಗೊಳಗಾದ ನಂತರದ ಒಂದು ಗಂಟೆಯ ಅವಧಿಯನ್ನು ‘ಗೋಲ್ಡನ್​ ಅವರ್’ ಎನ್ನಲಾಗುತ್ತದೆ.

ಗೋಲ್ಡನ್​ ಅವರ್​ ಅವಧಿಯಲ್ಲಿ ರಾಷ್ಟ್ರೀಯ ಸೈಬರ್​ ಕ್ರೈಮ್​ ಸಹಾಯವಾಣಿ 1930ಗೆ ಕರೆ ಮಾಡಿ ಮಾಹಿತಿ ನೀಡುವುದರಿಂದ ಕೆಲವೇ ನಿಮಿಷಗಳಲ್ಲಿ ಆ ಮಾಹಿತಿಯನ್ನು ಆಧರಿಸಿ ಹಣ ವರ್ಗಾವಣೆಯಾದ ಖಾತೆ ಅಥವಾ ವ್ಯಾಲೆಟ್‌ ಪತ್ತೆಹಚ್ಚಿ ಅದರಲ್ಲಿರುವ ಹಣವನ್ನು ತಡೆಹಿಡಿಯುವ (Freeze) ಅವಕಾಶ ಹೆಚ್ಚಿರುತ್ತದೆ. ಮತ್ತು ತನಿಖಾ ಸಂಸ್ಥೆಗಳು ತ್ವರಿತವಾಗಿ ವಂಚಕೆ ಖಾತೆಯನ್ನು ಪತ್ತೆ ಹಚ್ಚಿ, ಸ್ಥಗಿತಗೊಳಿಸಲು ಸಾಧ್ಯವಾಗುತ್ತದೆ. ಸಾರ್ವಜನಿಕರು ಗೋಲ್ಡನ್​ ಅವರ್​ ಮಹತ್ವ ತಿಳಿದಿರಬೇಕು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ವಿವರಿಸಿದರು.

ಇತ್ತೀಚಿಗೆ ಸಂಸದ ಡಾ.ಕೆ.ಸುಧಾಕರ್‌ ಅವರ ಪತ್ನಿ ಡಾ. ಪ್ರೀತಿ ಸುಧಾಕರ್ ಅವರಿಗೆ ಬಂಧನದ ಬೆದರಿಕೆಯೊಡ್ಡಿ ವಂಚಿಸಲಾಗಿದ್ದ 14 ಲಕ್ಷ ರೂ ಹಣವನ್ನು ಮರಳಿ ಹಿಂದಿರುಗಿಸುವಲ್ಲಿ ಬೆಂಗಳೂರು ಪಶ್ಚಿಮ ವಿಭಾಗದ ಸೈಬರ್ ಕ್ರೈಮ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ವಂಚನೆಗೊಳಗಾದ ಒಂದು ಗಂಟೆಯೊಳಗೆ (ಗೋಲ್ಡನ್ ಅವರ್) ರಾಷ್ಟ್ರೀಯ ಸೈಬರ್ ಕ್ರೈಮ್ ಸಹಾಯವಾಣಿಗೆ ದೂರು ದಾಖಲಿಸುವ ಮೂಲಕ ವಂಚಕರ ಖಾತೆಗೆ ಸಂದಾಯವಾಗಿದ್ದ ಹಣವನ್ನು ಯಶಸ್ವಿಯಾಗಿ ಹಿಂಪಡೆಯಲಾಗಿತ್ತು.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ