Breaking News

ಸುದೀರ್ಘ ಅವಧಿಯ ಚಂದ್ರಗ್ರಹಣ ಗೋಚರ; ನಭೋ ಮಂಡಲದಲ್ಲಿ ಬೆಂಕಿಚೆಂಡು

Spread the love

ರಾತ್ರಿ 9.56ಕ್ಕೆ ಗ್ರಹಣದ ಸ್ಪರ್ಶಕಾಲ ಆರಂಭವಾಗಿ ಮಧ್ಯರಾತ್ರಿ 1.26ಕ್ಕೆ ಚಂದ್ರನಿಗೆ ಗ್ರಹಣ ಮೋಕ್ಷವಾಯಿತು. ಆರಂಭದಿಂದ ಹಂತಹಂತವಾಗಿ ಚಂದ್ರನನ್ನು ಆವರಿಸಿಕೊಳ್ಳುತ್ತಾ ಭೂಮಿಯ ನೆರಳು ಸಾಗಿತ್ತು. ಸರಿಯಾಗಿ 11 ಗಂಟೆ 21 ನಿಮಿಷಕ್ಕೆ ಚಂದ್ರನನ್ನು ಅರ್ಧಭಾಗ ಆವರಿಸಿಕೊಂಡಿತು.

ಆ ಬಳಿಕ ಸರಿಯಾಗಿ 11 ಗಂಟೆ 42 ನಿಮಿಷಕ್ಕೆ ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದ ಕ್ಷಣ ಬಂದೇಬಿಟ್ಟಿತು. ರಾತ್ರಿ 11.42ರ ವೇಳೆಗೆ ಸಂಪೂರ್ಣ ಗಾಢಕೆಂಪು ಬಣ್ಣಕ್ಕೆ ಚಂದಿರ ತಿರುಗಿದನು.

ಈ ಮೂಲಕ ಸಂಪೂರ್ಣ ಚಂದ್ರಗ್ರಹಣ ಗೋಚರಿಸಿತು.ಕರ್ನಾಟಕದಲ್ಲಿ ಕೋಲಾರದಲ್ಲಿ ಮೋಡ ಅಡ್ಡಿಯಾದರೆ, ಬಹುತೇಕ ಜಿಲ್ಲೆಗಳಲ್ಲಿ ರಕ್ತಚಂದಿರನನ್ನು ಜನ ಕಣ್ತುಂಬಿಕೊಂಡರು.

ಬೆಂಗಳೂರಿನ ನೆಹರೂ ತಾರಾಲಾಯದಲ್ಲಿ ಸಾರ್ವಜನಿಕರಿಗೆ ಟೆಲಿಸ್ಕೋಪ್ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳು, ವಯಸ್ಕರು ಸೇರಿದಂತೆ ನೂರಾರು ಮಂದಿ ದೂರದರ್ಶಕದಲ್ಲಿ ಚಂದಿನ ಅಗ್ನಿರೂಪವನ್ನು ಕುತೂಹಲದಿಂದ ವೀಕ್ಷಿಸಿದರುರಾಯಚೂರಿನ ಉಪವಿಜ್ಞಾನ ಕೇಂದ್ರದಲ್ಲಿ 2 ಟೆಲಿಸ್ಕೋಪ್‌ನಿಂದ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ದಾವಣಗೆರೆಯಲ್ಲಿ ಹೈಸ್ಕೂಲ್‌ಮೈದಾನದಲ್ಲಿ ಬ್ರೇಕ್ ಥ್ರೂ ಸೈನ್ಸ್ ಸೊಸೈಟಿ ವಿದ್ಯಾರ್ಥಿಗಳಿಗೆ ವೀಕ್ಷಣೆಗೆ ವ್ಯವಸ್ಥೆ ಮಾಡಿತ್ತು. ಹಾಸನ, ಶಿವಮೊಗ್ಗ ಸೇರಿ ಬೇರೆ ಬೇರೆ ಜಿಲ್ಲೆಗಳಲ್ಲೂ ಜನ ಖಗೋಳದಲ್ಲಿನ ರಕ್ತಚಂದಿರನ ವಿಸ್ಮಯ ನೋಡಿ ಪುಳಕಿತರಾದರು.ಇನ್ನು ಕೆಲವು ರಾಜ್ಯಗಳಲ್ಲಿ ಮೋಡಗಳ ಕಣ್ಣಾಮುಚ್ಚಾಲೆ ಬಿಟ್ಟರೆ, ಭಾರತದಾದ್ಯಂತ ಬಹುತೇಕ ಕಡೆಗಳಲ್ಲಿ ರಕ್ತಚಂದಿರನ ದರ್ಶನವಾಯಿತು. ದೆಹಲಿ ಮಹಾರಾಷ್ಟ್ರ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ, ಜಮ್ಮುಕಾಶ್ಮೀರ ಹೀಗೆ ಎಲ್ಲೆಡೆ ಬ್ಲಡ್‌ಮೂನ್ ದರ್ಶನವಾಯಿತು. ಕೋಲ್ಕತ್ತಾದಲ್ಲಿ ಶುಭಾಸ್ ಚಂದ್ರಬೋಸ್ ಪ್ರತಿಮೆ ಬಳಿ ಸೆರೆಹಿಡಿದ ಚಂದಿರನ ಚಿತ್ರ ಚಿತ್ತಾಕರ್ಷಕವಾಗಿತ್ತು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ