Breaking News

ರಾಷ್ಟ್ರೀಯ ಮಟ್ಟದಲ್ಲಿ ದ್ವಿಭಾಷಾ ಪದ್ಧತಿ ಬಗ್ಗೆ ಚಿಂತನೆ ನಡೆದಿತ್ತು: ಮಲ್ಲಿಕಾರ್ಜುನ ಖರ್ಗೆ

Spread the love

ಕಲಬುರಗಿ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದ್ವಿಭಾಷಾ ಪದ್ಧತಿ ಹಾಗೂ ಇವಿಎಂ ನಿಷೇಧ ವಿಷಯವಾಗಿ ಮಹತ್ವದ ಹೇಳಿಕೆ ನೀಡಿದ್ದಾರೆ‌.

ಈ ಕುರಿತು ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ದ್ವಿಭಾಷಾ ಪದ್ಧತಿ ಜಾರಿಗೆ ಸಂಬಂಧಿಸಿದ ಚರ್ಚೆಯನ್ನು ಸ್ವಾಗತಿಸಿದರು. ಇದರ ಜಾರಿಗೆ ಸಂಬಂಧಿಸಿದ ನಿರ್ಧಾರವು ಸರ್ಕಾರ ಮತ್ತು ಇಲಾಖೆಗಳ ವಿಚಾರ ಎಂದು ಹೇಳಿದರು. ತಮಿಳುನಾಡು, ಕೇರಳದಲ್ಲಿ ಈ ವ್ಯವಸ್ಥೆಗೆ ವಿರೋಧವಿದ್ದರೂ ರಾಷ್ಟ್ರೀಯ ಮಟ್ಟದಲ್ಲಿ ದ್ವಿಭಾಷಾ ಪದ್ಧತಿ ಅಳವಡಿಕೆ ಬಗ್ಗೆ ಕಾಂಗ್ರೆಸ್ ಸರ್ಕಾರದ ಕಾಲದಲ್ಲೇ ಚಿಂತನೆ ನಡೆದಿತ್ತು ಎಂದು ಹೇಳಿದರು.

ಇವಿಎಂ ನಿಷೇಧಿಸಿ ಬ್ಯಾಲೆಟ್ ಪೇಪರ್ ಬಳಕೆಗೆ ಕರ್ನಾಟಕ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಶ್ಲಾಘಿಸಿದ ಅವರು, ಕಳೆದ ಚುನಾವಣೆಯಲ್ಲಿ ಇವಿಎಂ ಮೂಲಕ ಮಹಾಮೋಸ ನಡೆದಿದ್ದು, ನಾನೂ ಮತಗಳ್ಳತನಕ್ಕೆ ಬಲಿಯಾದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಅಭಿವೃದ್ಧಿ ಕಾರ್ಯಗಳಿಗೆ ಜನಮನ್ನಣೆ ದೊರೆಯುತ್ತೆ ಎಂಬ ವಿಶ್ವಾಸವಿದ್ದರೂ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ ಎಂದು ಅವರು ವಿಷಾದಿಸಿದರು.

ಕಲಬುರಗಿ ಲೋಕಸಭಾ ಕ್ಷೇತ್ರದ ಹಲವೆಡೆ ತಮಗೆ ಅತಿ ಕಡಿಮೆ ಮತ ಬಂದಿರುವುದನ್ನು ಉಲ್ಲೇಖಿಸಿ, ಬಿಹಾರ, ಕಲಬುರಗಿ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ವೋಟ್ ಚೋರಿ ನಡೆದಿದೆ ಎಂಬ ಶಂಕೆ ವ್ಯಕ್ತಪಡಿಸಿದರು. ಪಾರ್ಲಿಮೆಂಟ್‌ನಲ್ಲಿ, ಪ್ರಧಾನಿ ಮೋದಿಯವರು ಖರ್ಗೆ ಬಹುತ್ ಬಾರ್ ಜಿತ್ರೆ ಅಂತಾ ಹೇಳಿದ್ರು. ಈ ರೀತಿ ಹೇಳಿಕೆ ಹಾಗೂ ನಾನು ಸೋತಿರುವುದು ಇವಿಎಂ ಮೇಲೆ ಬಲವಾದ ಅನುಮಾನ ಮೂಡಿಸಿದೆ ಎಂದು ಹೇಳಿದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ