Breaking News

ಸ್ವಾತಂತ್ರ್ಯ ಹೋರಾಟಗಾರರ ತಿಂಗಳ ಗೌರವಧನ ₹4.85 ಕೋಟಿ ಬಾಕಿ ಉಳಿಸಿಕೊಂಡ ರಾಜ್ಯ ಸರ್ಕಾರ

Spread the love

ಬೆಂಗಳೂರು: ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಪಡೆದುಕೊಳ್ಳಲು ಹೋರಾಡಿ ಜೈಲು ಶಿಕ್ಷೆ ಅನುಭವಿಸಿದ ರಾಜ್ಯ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡಲಾಗುವ ಗೌರವಧನವನ್ನು ಹಲವು ತಿಂಗಳಿಂದ‌ ರಾಜ್ಯ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಇದರ‌ ಮೊತ್ತವೇ 4.85 ಕೋಟಿ ರೂಪಾಯಿ ದಾಟಿದೆ.

ರಾಜ್ಯದಲ್ಲಿ 150 ಮಂದಿ ಸ್ವಾತಂತ್ರ್ಯ ಹೋರಾಟಗಾರರು ಮಾಸಿಕ 10 ಸಾವಿರ ರೂಪಾಯಿ ಗೌರವಧನ ಪಡೆಯುತ್ತಿದ್ದಾರೆ. ಮೃತಪಟ್ಟ ಸ್ವಾತಂತ್ರ್ಯ ಯೋಧರ ಶವ ಸಂಸ್ಕಾರಕ್ಕೆ ಸರ್ಕಾರ 4 ಸಾವಿರ ರೂಪಾಯಿ ನೀಡುತ್ತದೆ. ಧಾರವಾಡದಲ್ಲಿ 34, ಬೆಳಗಾವಿಯಲ್ಲಿ 30, ತುಮಕೂರು 15, ಕಲಬುರಗಿಯಲ್ಲಿ 10 ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಒಟ್ಟು 150 ಮಂದಿ ಸ್ವಾತಂತ್ರ್ಯ ಹೋರಾಟಗಾರರು ಗೌರವಧನ ಪಡೆಯುತ್ತಿದ್ದಾರೆ. ಕೆಲ ತಿಂಗಳಿಂದ ಸರ್ಕಾರವು ಮಾಸಾಶನ ನೀಡಿಲ್ಲ. ಇದರಿಂದ 4.85 ಕೋಟಿ ರೂಪಾಯಿ ಗೌರವಧನ ಬಾಕಿ ಉಳಿಸಿಕೊಂಡಿದೆ.

ಕಂದಾಯ ಇಲಾಖೆಯ ಅಧೀನದಲ್ಲಿರುವ ಸಾಮಾಜಿಕ ಭದ್ರತೆ ಹಾಗೂ ಪಿಂಚಣಿಗಳ ನಿರ್ದೇಶನಾಲಯ ಕಳೆದ ಎರಡು ವರ್ಷಗಳಿಂದ ಆಧಾರ್ ಆಧಾರಿತವಾಗಿ ನೇರ ಹಣ ಸಂದಾಯ ಮೂಲಕ ಹೋರಾಟಗಾರರಿಗೆ ಪಿಂಚಣಿ ಪಾವತಿ…
ಈ ಬಗ್ಗೆ ಮಾತನಾಡಿರುವ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, “ರಾಜ್ಯದ ಹಲವು ಜಿಲ್ಲೆಗಳಲ್ಲಿ ಇರುವ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಸಿಕವಾಗಿ ಸಂದಾಯವಾಗಬೇಕಿದ್ದ ಗೌರವಧನ ಬಾಕಿ ಉಳಿಕೊಂಡಿರುವುದು ಗಮನಕ್ಕೆ ಬಂದಿದೆ. ಹಂತ ಹಂತವಾಗಿ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದಾರೆ.

ರಾಜ್ಯ ಸ್ವಾತಂತ್ರ್ಯ ಹೋರಾಟಗಾರರ ಗೌರವಧನ ಬಾಕಿಯಿರುವ ಜಿಲ್ಲಾವಾರು ಮಾಹಿತಿ ಇಲ್ಲಿದೆ

ಜಿಲ್ಲೆ ಬಾಕಿ ಮೊತ್ತ
ಬಾಗಲಕೋಟೆ 33,225
ಬಳ್ಳಾರಿ 1,30,000
ಬೆಳಗಾವಿ 83,34,000
ಬೆಂಗಳೂರು ಗ್ರಾಮಾಂತರ 3,40,000
ಬೆಂಗಳೂರು 59,02000
ಬೀದರ್ 17,17,400
ಚಿಕ್ಕಬಳ್ಳಾಪುರ 5,30,000
ಚಿಕ್ಕಮಗಳೂರು 4,73,333
ಚಿತ್ರದುರ್ಗ 18,14,333
ದಕ್ಷಿಣ ಕನ್ನಡ 6,70,000
ದಾವಣಗೆರೆ 10000
ಧಾರವಾಡ 76,33,124
ಗದಗ 9,20,000
ಹಾಸನ 29,99,000
ಹಾವೇರಿ 10,79,666
ಕೊಡಗು 14,50,000
ಕೋಲಾರ 14,50,000
ಕೊಪ್ಪಳ 3,50,000
ಮಂಡ್ಯ 19,70000
ಮೈಸೂರು 12,00000
ರಾಯಚೂರು 13,0000
ರಾಮನಗರ 90,000
ಶಿವಮೊಗ್ಗ 39,30,000
ತುಮಕೂರು 36,40000
ಉತ್ತರ ಕನ್ನಡ 17,12,546
ವಿಜಯಪುರ 5,13,871
ವಿಜಯನಗರ 9,20,000
ಒಟ್ಟು 4,85,72,498


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ