Breaking News

ದರ್ಶನ್​​ಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಕೋರ್ಟ್​ ಹಾಲ್​​​ಗೆ ನುಗ್ಗಿದ ಅಪರಿಚಿತ ವ್ಯಕ್ತಿ,

Spread the love

ಬೆಂಗಳೂರು, (ಸೆಪ್ಟೆಂಬರ್ 03): ಚಿತ್ರದುರ್ಗದ  ರೇಣುಕಾಸ್ವಾಮಿ ಕೊಲೆ ಕೇಸಿನ (Renukaswamy Murder Case) ಆರೋಪಿಗಳಾದ ನಟ ದರ್ಶನ್ (Darshan)  ಸೇರಿದಂತೆ 17 ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕೆಂದು ಕೋರಿ ಅಪರಿಚಿತ ವ್ಯಕ್ತಿಯೊಬ್ಬರು ಅರ್ಜಿ ಹಿಡಿದು ಕೋರ್ಟ್ ಹಾಲ್​ ಗೆ ನುಗ್ಗಿರುವ ಘಟನೆ ನಡೆದಿದೆ. 

ಹೌದು… ಬೆಂಗಳೂರಿನ (Bengaluru) ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ನನ್ನು ದರ್ಶನ್​ನನ್ನು ಈ ಹಿಂದೆ ಇದ್ದ ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡುವ ಸಂಬಂಧ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ಇಂದು

(ಸೆಪ್ಟೆಂಬರ್ 03) ಬೆಂಗಳೂರಿನ 64ನೇ ಸೆಷನ್​ ಕೋರ್ಟ್ ವಿಚಾರಣೆ ನಡೆಸುವ ವೇಳೆ ಅಪರಿಚಿತವ ವ್ಯಕ್ತಿ ನುಗ್ಗಿ ಬಂದಿದ್ದಾನೆ. ಇದರಿಂದ ಕೆಲ ಕಾಲ ಗೊಂದಲಕ್ಕೆ ಕಾರಣವಾಯಿತು.ಬೆಂಗಳೂರಿನ 64ನೇ ಸೆಷನ್​ ಕೋರ್ಟ್​ ಗೆ ಅರ್ಜಿ ಸಲ್ಲಿಸಲಾಗಿದ್ದು, ಇಂದು(ಸೆಪ್ಟೆಂಬರ್ 03) ಸಹ ವಾದ-ಪ್ರತಿವಾದ ನಡೆದಿದ್ದ ವೇಳೆ ಅನಾಮಿಕ

ವ್ಯಕ್ತಿಯೋರ್ವ, ಕೈಯಲ್ಲಿ ಅರ್ಜಿಯೊಂದನ್ನು ಹಿಡಿದುಕೊಂಡು  ಕೋರ್ಟ್ ಹಾಲ್​ ನೊಳಗೆ ನುಗ್ಗಿದ್ದು, ದರ್ಶನ್​​ ಆ್ಯಂಡ್​ ಗ್ಯಾಂಗ್​​ಗೆ ಜಾಮೀನು ನೀಡಬಾರದು. ಅವರಿಗೆ ಮರಣ ದಂಡನೆ ನೀಡಬೇಕೆಂದು ನ್ಯಾಯಾಧೀಶರ ಮುಂದೆ ಮನವಿ ಮಾಡಿಕೊಂಡಿದ್ದಾನೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ