Breaking News

ನಕಲಿ ಯೋಗ ಕೇಂದ್ರ ಮಷೀನ್ ತಯಾರಿಸಿದ ಆರೋಪ ಐವರ ವಿರುದ್ಧ ಪ್ರಕರಣ ದಾಖಲಿಸಿದ ಮಹಿಳೆ!!!

Spread the love

ನಕಲಿ ಯೋಗ ಕೇಂದ್ರ ಮಷೀನ್ ತಯಾರಿಸಿದ ಆರೋಪ
ಐವರ ವಿರುದ್ಧ ಪ್ರಕರಣ ದಾಖಲಿಸಿದ ಮಹಿಳೆ!!!
ನಕಲಿ ಯೋಗ ಕೇಂದ್ರ ಮಷೀನ್ ತಯಾರಿಸಿದ ಆರೋಪ
ಐವರ ವಿರುದ್ಧ ಪ್ರಕರಣ ದಾಖಲಿಸಿದ ಮಹಿಳೆ!!!
ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ತಮ್ಮ ಮಷೀನಿನ ನಕಲು ಮಾಡಿ ಮೋಸ ಮಾಡಿದ ಆರೋಪ
ಒಂಭತ್ತು ವರ್ಷದ ಹಿಂದೆ ತಮ್ಮ ಯೋಗಾ ಕೇಂದ್ರದಲ್ಲಿ ಬಂದು ಚಿಕಿತ್ಸೆ ಪಡೆದು, ಅದರ ಫೋಟೋ ತೆಗೆದುಕೊಂಡು ಹೋಗಿ ಅಂತಹದ್ದೇ ಯಂತ್ರವನ್ನು ತಯಾರಿಸಿ ಬೇರೆಡೆ ಯೋಗಾ ಕೇಂದ್ರವನ್ನು ಆರಂಭಿಸಿರುವ ದೂರನ್ನು ಮಹಿಳೆಯೋರ್ವಳು ನೀಡಿದ್ದಾಳೆ.
ಬೆಳಗಾವಿಯ ಭಾಗ್ಯನಗರದ 7ನೇ ಕ್ರಾಸ್’ನ ರಹಿವಾಸಿ ಉಷಾ ಅಭಯ್ ಕೇಸ್ತಿ ಎಂಬುವವರು ರಾಜಾರಾಮ ಬಾಚಿಕರ, ರಾಜು ಕೋತಂಬರಿಕರ, ಮೋಹನ್ ಖಾಂಡೇಕರ, ಮೋಹನ್ ಲಾಡ್ ಮತ್ತು ಗುರುಪ್ರಸಾದ ಪಾವುಸ್ಕರ್ ಎಂಬುವವರ ವಿರುದ್ಧ ಬೆಳಗಾವಿ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಉಷಾ ಕೇಸ್ತಿ ಯೋಗ ಸಹಾಯಕರಾಗಿದ್ದು 2019ರಲ್ಲಿ ಕೆಲವರು ಅವರ ಯೋಗ ಕೇಂದ್ರಕ್ಕೆ ಬಂದು ಚಿಕಿತ್ಸೆ ಪಡೆದಿದ್ದರು. ಚಿಕಿತ್ಸೆಗೆ ಮೆಚ್ಚಿ ಚಿಕಿತ್ಸೆ ಪಡೆದುಕೊಂಡ ಯಂತ್ರಣ ಉದ್ದಳತೆಯನ್ನು ಮತ್ತು ಮಾಹಿತಿಯನ್ನು ಪಡೆದುಕೊಂಡು, ಅಂತಹದ್ದೇ ಯಂತ್ರವನ್ನು ತಯಾರಿಸಿದ್ದಾರೆ. ಉಷಾ ಅವರು 20 ವರ್ಷ ಅಧ್ಯಯನ ನಡೆಸಿ ಈ ಯಂತ್ರವನ್ನು ತಯಾರಿಸಿದ್ದಾರೆ. ಆದರೇ, ಇದರ ಮೂಲವನ್ನೇ ಬಳಸಿ ಭಾಗ್ಯನಗರದ ಎರಡನೇ ಕ್ರಾಸ್’ನಲ್ಲಿ ಜುಲೈ 18, 2025 ರಂದು ಯೋಗ ಹೆಲ್ತ್ ಫಿಟನೇಸ್ ಎಂಬ ಕೇಂದ್ರವನ್ನು ಆರಂಭಿಸಿದ್ದಾರೆ. ತಮ್ಮಂತಹದ್ದೇ ನಕಲಿ ಯಂತ್ರವನ್ನು ತಯಾರಿಸಿ ತಮಗೆ ವಿಶ್ವಾಸಘಾತ ಮಾಡುವುದರೊಂದಿಗೆ ಜನರಿಗೆ ಮೋಸ ಮಾಡಿರುವುದಾಗಿ ಉಷಾ ಆರೋಪಿಸಿದ್ದಾರೆ. ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ನಿರೀಕ್ಷಕ ಪರಶುರಾಮ್ ಪುಜೇರಿ ತಪಾಸಣೆ ಕೈಗೊಂಡಿದ್ದಾರೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ