Breaking News

ಖಾನಾಪೂರಕ್ಕೆ ತಟ್ಟದ ಬಂದ್ ಬಿಸಿ ಸಾರಿಗೆ ನೌಕರರ ಮುಷ್ಕರದ ನಡುವೆಯೂ ಸುಗಮ ಸಂಚಾರ!!!

Spread the love

ಖಾನಾಪೂರಕ್ಕೆ ತಟ್ಟದ ಬಂದ್ ಬಿಸಿ
ಸಾರಿಗೆ ನೌಕರರ ಮುಷ್ಕರದ ನಡುವೆಯೂ ಸುಗಮ ಸಂಚಾರ!!!
ಖಾನಾಪೂರಕ್ಕೆ ತಟ್ಟದ ಬಂದ್ ಬಿಸಿ
ಸಾರಿಗೆ ನೌಕರರ ಮುಷ್ಕರದ ನಡುವೆಯೂ ಸುಗಮ ಸಂಚಾರ
ಪ್ರಯಾಣಿಕರಿಗೆ ತೊಂದರೆಯಾಗದಂತೆ ಗಮನ
ಡಿಪೋ ಮ್ಯಾನೇಜರ್ ಮಾಹಿತಿ
ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರದಿಂದ ಅನೇಕ ಕಡೆಗಳಲ್ಲಿ ಬಸ್ ಸಂಚಾರ ಅಸ್ತವ್ಯಸ್ತವಾಗಿರುವಾಗಲೂ ಖಾನಾಪೂರ ತಾಲೂಕಿನಲ್ಲಿ ಬಸ್ ಸಂಚಾರ ಸಹಜವಾಗಿ ನಡೆಯುತ್ತಿದೆ.
ಖಾನಾಪೂರ ಬಸ್ ಡಿಪೋದ ವತಿಯಿಂದ ನಿತ್ಯದಂತೆ ಬಸ್‌ಗಳು ನಿರಂತರವಾಗಿ ಸಂಚರಿಸುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರು ತಮ್ಮ ದಿನಚರಿಯ ಪ್ರಯಾಣ ನಿರ್ವಿಘ್ನವಾಗಿ ಮುಂದುವರೆಸುತ್ತಿದ್ದಾರೆ.
“ನಮ್ಮ ಡಿಪೋ ವ್ಯಾಪ್ತಿಯಲ್ಲಿನ ಎಲ್ಲಾ ಬಸ್‌ಗಳು ಯಾವುದೇ ಅಡಚಣೆ ಇಲ್ಲದೆ ಸಂಚರಿಸುತ್ತಿವೆ. ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗದಂತೆ ನಾವು ಮುಂಚಿತವಾಗಿ ತಯಾರಿ ಮಾಡಿಕೊಂಡಿದ್ದೇವೆ,” ಎಂದು ಖಾನಾಪೂರ ಡಿಪೋ ಮ್ಯಾನೇಜರ್ ಹೇಳಿದ್ದಾರೆ.
ಮುಷ್ಕರದ ಸಾಧ್ಯತೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಖಾನಾಪೂರ ಬಸ್ ಡಿಪೋ ಮುಂದೆ ಪೊಲೀಸ್ ಭದ್ರತೆ ಕೂಡಾ ನಿಯೋಜಿಸಲಾಗಿದೆ. ಇದರಿಂದ ಯಾವುದೇ ಅವ್ಯವಸ್ಥೆ ಉಂಟಾಗದಂತೆ ನೋಡಿಕೊಳ್ಳಲಾಗಿದೆ. ಖಾನಾಪೂರದಲ್ಲಿ ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ, ನಾಗರಿಕರು ತಮ್ಮ ಕೆಲಸಗಳಿಗಾಗಿ ಹಾಗೂ ಪ್ರವಾಸಿಗರು ತಮ್ಮ ಗಮ್ಯಸ್ಥಾನಗಳತ್ತ ಸುಗಮವಾಗಿ ಸಾಗುತ್ತಿರುವುದು ಕಂಡುಬರುತ್ತಿದೆ..

Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ