ಗದಗದಲ್ಲಿ ಸಾರಿಗೆ ನೌಕರರ ಮುಷ್ಕರ ಎಫೆಕ್ಟ್: ಖಾಲಿ ಮೈದಾನದಂತಾದ ಬಸ್ ನಿಲ್ದಾಣದಲ್ಲಿ ಕ್ರಿಕೆಟ್ ಮ್ಯಾಚ್
ಗದಗ : ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಸಾರಿಗೆ ನೌಕರರು ಬಸ್ ಮುಷ್ಕರಕ್ಕೆ ಮುಂದಾಗಿದ್ದಾರೆ. ಹೀಗಾಗಿ, ನಗರದಲ್ಲಿ ಸಂಚಾರ ವ್ಯತ್ಯಯವಾಗಿದೆ. ಇದೀಗ ಬಸ್ಗಳಿಲ್ಲದೆ ಖಾಲಿ ಮೈದಾನದಂತಾಗಿದ್ದ ಬಸ್ ನಿಲ್ದಾಣದಲ್ಲಿಯೇ ಹೋಟೆಲ್, ಅಂಗಡಿಯಲ್ಲಿ ಕೆಲಸ ಮಾಡುವ ಹುಡುಗರು ಕ್ರಿಕೆಟ್ ಆಡಿ ಎಂಜಾಯ್ ಮಾಡಿದ್ದಾರೆ.
ಬಸ್ ಮೇಲೆ ಕಲ್ಲು ತೂರಾಟ: ಹುಬ್ಬಳ್ಳಿಯಿಂದ ಹೊಸಪೇಟೆಗೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್‌ನ ಮೇಲೆ ಅನಾಮಿಕ ವ್ಯಕ್ತಿಗಳು ಕಲ್ಲು ಎಸೆದ ಘಟನೆ ಹುಬ್ಬಳ್ಳಿ ಬೈಪಾಸ್ ಬಳಿ ನಡೆದಿದೆ. ಈ ದಾಳಿಯಿಂದ ಬಸ್‌ನ ಮುಂಭಾಗದ ಗಾಜು ಜಖಂಗೊಂಡಿದ್ದು, ಪ್ರಯಾಣಿಕರ ಸುರಕ್ಷತೆಗೆ ಧಕ್ಕೆಯಾಗಿಲ್ಲವಾದರೂ ಘಟನೆಯಿಂದ ಆತಂಕ ಉಂಟಾಗಿದೆ.KA33 F0516 ನೋಂದಣಿ ಸಂಖ್ಯೆಯ ಹೊಸಪೇಟೆ ಡಿಪೋಗೆ ಸೇರಿದ ಈ ಬಸ್, ಗದಗ ಬಸ್ ನಿಲ್ದಾಣದಲ್ಲಿ ತಾತ್ಕಾಲಿಕವಾಗಿ ನಿಲುಗಡೆಗೊಂಡಿದ್ದು, ಪ್ರಯಾಣಿಕರನ್ನು ಅಲ್ಲಿ ಇಳಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ನೀಡಿದ ಬಸ್ ಚಾಲಕ ರವಿ, ‘ಮುಸುಕುದಾರಿಗಳು ಕಲ್ಲು ಎಸೆದಿದ್ದಾರೆ. ಒಂದು ವೇಳೆ ಗಾಜಿನ ತುಂಡುಗಳು ಒಡೆದು ಒಳಗೆ ಬಂದಿದ್ದರೆ, ನಮಗೆ ಗಾಯವಾಗುತ್ತಿತ್ತು’ ಎಂದು ತಿಳಿಸಿದ್ದಾರೆ.
Laxmi News 24×7