ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಭೇಟಿ
ಘಟಪ್ರಭಾ ಹಾಗೂ ಚಿಕ್ಕೋಡಿ ಬಲದಂಡೆ ಕಾಲುವೆಗಳ ನವೀರಕಣ ಪ್ರಸ್ತಾವಣೆಗೆ ಅನುಮೊದನೆ ಮನವಿ!!
ಘಟಪ್ರಭಾ ಬಲದಂಡೆ ಕಾಲುವೆ (GRBC) ಹಾಗೂ ಚಿಕ್ಕೋಡಿ ಬಲದಂಡೆ ಕಾಲುವೆ (CBCI)ಗಳನ್ನು ನವೀಕರಣಗೊಳಿಸುವ ನಿಟ್ಟಿನಲ್ಲಿ ಅಂದಾಜು ರೂ. 1722 ಕೋಟಿ ವೆಚ್ಚದ ನೀಲನಕ್ಷೆ ತಯಾರಿಸಿ ರಾಜ್ಯ ಸರ್ಕಾರವು ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಕಳುಹಿಸಿದ ಪ್ರಸ್ತಾವನೆಗೆ ಶೀಘ್ರ ಅನುಮೋದನೆ ನೀಡುವಂತೆ ಶಾಸಕ ರಮೇಶ ಜಾರಕಿಹೊಳಿ ಕೇಂದ್ರ ಸಚಿವ ಸಿ.ಆರ್.ಪಾಟೀಲ ಅವರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡರು
ಘಟಪ್ರಭಾ ಬಲದಂಡೆ ಕಾಲುವೆ (GRBC) ಹಾಗೂ ಚಿಕ್ಕೋಡಿ ಬಲದಂಡೆ ಕಾಲುವೆ (CBCI)ಗಳನ್ನು ನವೀಕರಣಗೊಳಿಸುವ ನಿಟ್ಟಿನಲ್ಲಿ ಅಂದಾಜು ರೂ. 1722 ಕೋಟಿ ವೆಚ್ಚದ ನೀಲನಕ್ಷೆ ತಯಾರಿಸಿ ರಾಜ್ಯ ಸರ್ಕಾರವು ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಕಳುಹಿಸಿದ ಪ್ರಸ್ತಾವನೆಗೆ ಶೀಘ್ರ ಅನುಮೋದನೆ ನೀಡುವಂತೆ ನೀಡುವ ಬಗ್ಗೆ ಕೇಂದ್ರ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಉಪಸ್ಥಿಯಲ್ಲಿ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಅವರನ್ನು ನವ-ದೆಹಲಿಯಲ್ಲಿ ಭೇಟಿ ಮಾಡಿ
ವಿನಂತಿಸಲಾಯಿತು.
ಪ್ರಸ್ತಾಪಿತ ಈ ಕಾಲುವೆಗಳು ಸುಮಾರು ಮೂರು ದಶಕಗಳ ಕಾಲದಷ್ಟು ಹಳೆಯದಾಗಿದ್ದು,
ಇದರಿಂದಾಗಿ ರೈತರು ಹೊಂದಿದ ಜಮೀನುಗಳಿಗೆ ಕಾಲುವೆಗಳಿಂದ ಸಮರ್ಪಕವಾಗಿ ನೀರು ಹರಿದು ಹೋಗದೆ ಇರುವುದರಿಂದ ಸಾಕಷ್ಟು ಕಷ್ಟ ಅನುಭವಿಸುವಂತಾಗಿದೆ. ಈ ಕಾಲುವೆಗಳನ್ನು ನವೀಕರಿಸುವುದರೊಂದಿಗೆ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳಡಿ ಬರುವಂತಹ ಅನೇಕ ಗ್ರಾಮಗಳಲ್ಲಿನ ಲಕ್ಷಾಂತರ ರೈತ ಬಾಂಧವರಿಗೆ ಅವರು ಹೊಂದಿದ ಜಮೀನುಗಳಲ್ಲಿ ಬೆಳೆದ ಬೆಳೆಗಳಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ದೊರೆಯಲಿದೆ ಎಂದು ತಿಳಿಸಲಾಯಿತು.ಪ್ರಸ್ತಾಪಿತ ಈ ಯೋಜನೆಯ ಅಗತ್ಯತೆಯ ಅನುಗುಣವಾಗಿ ಸಲ್ಲಿಸಲಾದ ಪ್ರಸ್ತಾವನೆಗೆ ಶೀಘ್ರ ಅನುಮೋದನೆ ನೀಡುವ ಬಗ್ಗೆ ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ. ಆರ್ ಪಾಟೀಲ ಇವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಶೀಘ್ರ ಕಾರ್ಯಗತಗೊಳ್ಳಲಿರುವ ಬಗ್ಗೆ ಭರವಸೆ ಇದೆ ಎಂದು ಶಾಸಕ ರಮೇಶ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಸದ ಜಗದೀಶ ಶೆಟ್ಟರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು
Laxmi News 24×7