Breaking News

“ಮುರಗುಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ವನಮಹೋತ್ಸವ”

Spread the love

ಮುರಗುಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ವನಮಹೋತ್ಸವ”

ಅಥಣಿ ಮತಕ್ಷೇತ್ರದ ಮುರಗುಂಡಿಯಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆ, ಸರ್ಕಾರಿ ಪ್ರೌಢಶಾಲೆ ಮುರಗುಂಡಿ, ಪ್ರಾದೇಶಿಕ ಅರಣ್ಯ ವಲಯ ಅಥಣಿ, ಹಾಗೂ ಗ್ರಾಮ ಪಂಚಾಯತ ಮುರಗುಂಡಿಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ವನಮಹೋತ್ಸವ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ ಕೊಡೆ (ಛತ್ರಿ) ವಿತರಣಾ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವದರ ಮೂಲಕ ಉದ್ಘಾಟಿಸಿದೆ.

160ಕ್ಕೂ ಹೆಚ್ಚು ಶಾಲಾ ಮಕ್ಕಳು ಸಸಿಗಳನ್ನ ದತ್ತು ಪಡೆದು ಅದರ ಸಂರಕ್ಷಣೆ ಹಾಗೂ ಪೊಷಣೆ ಮಾಡುವುದರ ಮೂಲಕ ಪರಿಸರ ಸಂರಕ್ಷಣೆಯ ಕುರಿತು ಪ್ರತಿಯೊಬ್ಬರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ,ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸುತ್ತಿದ್ದಾರೆ ಗಿಡ-ಮರಗಳ ಪೊಷಣೆ ಮಾಡುವುದರ ಮೂಲಕ ಪರಿಸರದ ಸಮತೋಲನ ಕಾಪಾಡುವಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವದು ಹೆಮ್ಮೆಯ ಸಂಗತಿಯಾಗಿದೆ.

ಈ ಸಂದರ್ಭದಲ್ಲಿ ಶ್ರೀಮತಿ ಅಶ್ವಿನಿ ಕಾಟಕರ ಗ್ರಾ,ಪಂ, ಅಧ್ಯಕ್ಷರು ಮುರಗುಂಡಿ,ಶ್ರೀ ಮಕಬುಲ ನದಾಫ್ ಅಧ್ಯಕ್ಷರು SDMC ಮುರಗುಂಡಿ,ಮಾಜಿ ಜಿ,ಪಂ, ಸದಸ್ಯರಾದ ಶ್ರೀ ವಿನಾಯಕ ಬಾಗಡಿ,ಶ್ರೀ ಬರಮಾ ಮಗಾಡಿ,ಶ್ರೀ ಮಹಾದೇವ ಕೋರಿ,ಶ್ರೀ ರಮೇಶ ಕುಸನಾಳೆ, ಸದಸ್ಯರು ಗ್ರಾ,ಪಂ,ಮುರಗುಂಡಿ,ಶೀ ರಾಜು ಗುಡೊಡಗಿ ಅಥಣಿ ಪುರುಸಬೆ ಸದಸ್ಯರು,ಕ್ಷೇತ್ರಶಿಕ್ಷಣಾಧಿಕಾರಿಗಳಾದ ಶ್ರೀ ಮುಂಜೆ,ಅರಣ್ಯಾಧಿಕಾರಿಗಳಾದ ಶ್ರೀ ರಾಕೇಶ ಅರ್ಜುನವಾಡ, AEE ZP ಅಧಿಕಾರಿಗಳಾದ ಶೀ ಈರಣ್ಣ ವಾಲಿ ಹಾಗೂ ಮಾದ್ಯಮ ಮಿತ್ರರು ಮತ್ತು ಶಾಲಾ ಶಿಕ್ಷಕರು,ಶಿಕ್ಷಕಿಯರು ಹಾಗೂ ಮುದ್ದು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ