Breaking News

ಅಥಣಿ ಮಕ್ಕಳಿಗಿಲ್ಲ ಮೂಲ ಸೌಕರ್ಯ;ಕುಡಿಯಲು ನೀರಿಲ್ಲ,

Spread the love

ಅಥಣಿ ಮಕ್ಕಳಿಗಿಲ್ಲ ಮೂಲ ಸೌಕರ್ಯ;ಕುಡಿಯಲು ನೀರಿಲ್ಲ, ಬಯಲಲ್ಲೆ ಶೌಚ
ಶಾಲೆ ಪ್ರಾರಂಭಗೊಂಡು ತಿಂಗಳುಗಳು ಗತಿಸಿದರು ಗ್ರಾಮೀಣ ಭಾಗದ ಬಹುತೇಕ ಶಾಲೆಗಳಲ್ಲಿ ಮೂಲ ಸೌಕರ್ಯ ಮರೀಚಿಕೆಯಾಗಿದ್ದು, ಮಕ್ಕಳ ಕಲಿಕೆಗೆ ಸಮಸ್ಯೆಯಾಗಿ ಪರಿಣಮಿಸಿದೆ.
ಹೌದು,, ಹೀಗೆ ಕೈಯಲ್ಲಿ ಬಾಟಲಿ ಹಿಡಿದು ನಿಂತಿರೋ ಮಕ್ಕಳು, ಶೌಚಾಲಯವಿಲ್ಲದೆ ಬಯಲಿನತ್ತ ಸಾಗುತ್ತಿರುವ ಎದೆಯತ್ತರಕ್ಕೆ ಬೆಳೆದಿರೋ ಬಾಲಕಿಯರು, ವಿದ್ಯಾಭ್ಯಾಸಕ್ಕೆ ಬಂದಿರೋ ಮಕ್ಕಳು ಮೂಲಭೂತ ಸೌಕರ್ಯ ಕೊರತೆಯಲ್ಲೇ ಶಾಲೆ ಕಲಿಯುವಂತಾಗಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕೊಕಟನೂರ ಗ್ರಾಮ ಪಂಚಾಯತ ವ್ಯಾಪ್ತಿಯ ಗುಂಡದಖೋಡಿ ತೋಟದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ ಇದು, ಸುಮಾರು 54 ವಿದ್ಯಾರ್ಥಿಗಳ ಸಂಖ್ಯಾ ಬಲವಿದ್ದ ಶಾಲೆಗೆ ಸ್ಥಳೀಯ ಗ್ರಾಮ ಪಂಚಾಯತ ಹಾಗೂ ಶಿಕ್ಷಣ ಇಲಾಖೆ ಮೂಲ ಸೌಕರ್ಯ
ಒದಗಿಸುವಲ್ಲಿ ವಿಳಂಬ ತೋರಿದೆ. ಮಕ್ಕಳಿಗೆ ಕುಡಿಯಲು ನೀರಿಲ್ಲದೆ ಮಕ್ಕಳು ಸಮೀಪದ ಟ್ಯಾಂಕ್ ಬೋರ್‌ವೆಲ್‌ ಮನೆಗಳಿಂದ ಬಾಟಲ್‌ ಮೂಲಕ ನೀರು ಒಯ್ಯಬೇಕಿದೆ.ವಿಶಾಲವಾದ ಶಾಲಾ ಮೈದಾನವಿದ್ದರೂ ಅಭಿವೃದ್ಧಿ ಕೊರತೆ ಕಂಡು ಬಂದಿದೆ. ಮಕ್ಕಳು ನಾಟಿ ಮಾಡಿದ ಶಶಿಗಳಿಗೂ ಜಾನುವಾರುಗಳ ಹಾವಳಿ ಇಟ್ಟಿವೆ.
ಶೀಘ್ರವೆ ನಮಗೆ ಮೂಲ ಭೂತ ಸೌಕರ್ಯ ಒದಗಿಸಿ ಎಂದು ಮಕ್ಕಳು ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ.

Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ