Breaking News

ಹಿಂದು ಮುಸ್ಲಿಂ ಎಂದು ಬಡೆದಾಡಿಕೊಳ್ಳುವ ಇಂದಿನ ದಿನಗಳಲ್ಲಿ ಗ್ರಾಮಸ್ಥರಿಂದ ಭಾವೈಕ್ಯತೆಯಿಂದ ಮೊಹರಂ ಆಚರಣೆ

Spread the love

ಗ್ರಾಮಸ್ಥರಿಂದ ಭಾವೈಕ್ಯತೆಯಿಂದ ಮೊಹರಂ ಆಚರಣೆ
ಹಿಂದು ಮುಸ್ಲಿಂ ಎಂದು ಬಡೆದಾಡಿಕೊಳ್ಳುವ ಇಂದಿನ ದಿನಗಳಲ್ಲಿ ಜಾಗೃತ ಫಾತಿಮಾ ದರ್ಗಾದಲ್ಲಿ ಭಾವೈಕತೆಯ ಮೊಹರಂ ಹಬ್ಬವನ್ನು ಗ್ರಾಮಸ್ಥರೆಲ್ಲರೂ ಕೂಡಿಕೊಂಡು ಶೃದ್ಧಾ ಭಕ್ತಿಯಿಂದ ಕುಣ್ಣಿದು ಕುಪ್ಪಳಿಸಿ ಆಚರಿಸಿದರು ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ
ಹೌದು ಇದು ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಹಿಂದೂ ಮುಸ್ಲಿಂ ಬಾಂಧವರು ಭಾವೈಕ್ಯತೆ ಮತ್ತು ಶ್ರದ್ಧೆಯಿಂದ ಆಚರಿಸುತ್ತಾರೆ ಪ್ರತಿವರ್ಷದಂತೆ ಈ ಬಾರಿಯೂ ಅತ್ಯಂತ ಭಕ್ತಿಭಾವದಿಂದ ಗ್ರಾಮದ ಹಿಂದೂ ಮುಸ್ಲಿಂ ಬಾಂಧವರು ಮೊಹರಂ ಹಬ್ಬವನ್ನು ಆಚರಿಸುತ್ತಾರೆ.
ಗ್ರಾಮದಲ್ಲಿ ಪ್ರತಿಷ್ಠಾಪಿಸಿರುವ ಫಂಜಾಗಳ ಮೆರವಣಿಗೆ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಹಲಗಾದ ಹಜರತ್ ಬೀಬಿ ಫಾತಿಮಾ ದರ್ಗಾದ ಮುಂಭಾಗದಲ್ಲಿ ಸೇರುತ್ತವೆ. ಫಂಜಾಗಳ ಮೆರವಣಿಗೆಯಲ್ಲಿ ಭಾಗವಹಿಸುವ ಹಿಂದು ಮುಸ್ಲಿಂ ಬಾಂಧವರು ವಾಧ್ಯ ಮೇಳಗಳು ಚಿಕ್ಕ ಪುಟ್ಟ ಮಕ್ಕಳನ್ನು ಕೈಯಲ್ಲಿ ಹಿಡಿದುಕೊಂಡು ನೃತ್ಯ ಮಾಡುವರು ಕೈಯಲ್ಲಿ ಚಬಕಾ ಹಿಡಿದುಕೊಂಡು ಕಾಲಿಗೆ ಬಡಿದುಕೊಳ್ಳುವ ಯುವಕರು ನೋಡುಗರ ಕಣ್ಣು ಸೇಳೆಯುವಂತಿರುತ್ತದೆ. ಹಲಗಾದ ಗ್ರಾಮಸ್ಥರೆಲ್ಲರೂ ಸೇರಿಕೊಂಡು ಆಚರಿಸುವ ಭಾವೈಕತೆಯ ಮೊಹರಂ ಹಬ್ಬ ಮತ್ತೊಬ್ಬರಿಗೆ ಮಾದರಿಯಾಗಿದೆ.
ಹಲಗಾದ ಮೊಹರಂ ಐತಿಹಾಸಿಕವಾಗಿದ್ದು, ಹಿಂದೂ ಮುಸ್ಲಿಂ ಭಾಂದವರ ಏಕತೆಯ ಪ್ರತೀಕವಾಗಿದೆ. ನೂರಾರು ವರ್ಷಗಳಿಂದ ಇಲ್ಲಿ ಹಿಂದೂ ಮುಸ್ಲಿಂ ಬಾಂಧವರು ಕೂಡಿಕೊಂಡು ಆಚರಿಸುತ್ತಾರೆ. ಇದು ಜಾಗೃತ ದೇವಸ್ಥಾನವಾಗಿದ್ದು, ಸಂಪೂರ್ಣ ಭಾರತದಲ್ಲಿ ಪ್ರಸಿದ್ಧವಾಗಿದೆ. ಹಿಂದೂ ಮುಸ್ಲಿಂ ಬೇಧಭಾವವಿರುವವರಿಗೆ ಹಲಗಾದ ಮೊಹರಂ ಏಕತೆಯ ಸಂದೇಶವನ್ನು ನೀಡುತ್ತದೆ. ಮೊಹರಂನಲ್ಲಿ ಮಜ್ನು ನೃತ್ಯ ಅತ್ಯಂತ ಮಹತ್ವದ್ದಾಗಿದೆ. ಗ್ರಾಮದಲ್ಲಿ ಮೆರವಣಿಗೆ ನಡೆಸಿ, ಹಲಗೆ ವಾದನದ ತಾಳಕ್ಕೆ ತಕ್ಕಂತೆ ಕುಣಿಯುವುದು ಪೂರ್ವಜರ ಪರಂಪರೆಯಾಗಿದೆ.
ಇದನ್ನು ಈಗೀನ ಯುವಪೀಳಿಗೆಯೂ ಮುಂದುವರೆಸಿದ್ದು, ಭವಿಷ್ಯದ ಪೀಳಿಗೆಯೂ ಅದನ್ನು ಮುಂದುವರೆಸಿಕೊಂಡು ಹೋಗಬೇಕೆಂಬುದು ಗ್ರಾಮಸ್ಥರ ಆಸೆಯಾಗಿದೆ.

Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ