ಶಾರ್ಟ್ ಸರ್ಕೀಟ್’ನಿಂದ ಸುಟ್ಟು ಕರಕಲಾದ ಹೊಟೇಲ್…!!!
ಬೆಳಗಾವಿಯ ಗೋವಾವೇಸ್’ನಲ್ಲಿ ಶಾರ್ಟ್ ಸರ್ಕೀಟ್’ನಿಂದ “ಹೋಟೆಲ್ ಒಂದು ಅಗ್ನಿಗಾಹುತಿಯಾಗಿ ಲಕ್ಷಾಂತರ ರೂಪಾಯಿಗಳ ನಷ್ಟವಾಗಿದೆ.
ಬೆಳಗಾವಿಯ ಗೋವಾವೇಸ್‌ನಲ್ಲಿ ಇರುವ “ಹೋಟೆಲ್ ಅನುಗ್ರಹ”ನಲ್ಲಿ ಕಳೆದ ರಾತ್ರಿ 2 ಗಂಟೆ ಸುಮಾರಿಗೆ ಶಾರ್ಟ್ ಸರ್ಕಿಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ಹೋಟೆಲ್‌ನ ಫರ್ನಿಚರ್ ಸುಡುತ್ತಿರುವ ಶಬ್ದದಿಂದ ಎಚ್ಚರಗೊಂಡ ಸ್ಥಳೀಯ ನಿವಾಸಿಗಳು ತಕ್ಷಣ ಹೋಟೆಲ್ ಮಾಲೀಕರಾದ ಸುಧಾಕರ್ ಪುಜಾರಿ ಅವರಿಗೆ ಮಾಹಿತಿ ನೀಡಿದರು. ಅಲ್ಲದೇ, ಅಗ್ನಿಶಾಮಕ ದಳವನ್ನು ಸಂಪರ್ಕಿಸಿದರು.
ಅಗ್ನಿಶಾಮಕ ದಳಕ್ಕೆ ಮಾಹಿತಿ ದೊರಕುತ್ತಿದ್ದಂತೆಯೇ, ಸಿಬ್ಬಂದಿಗಳು ನೀರಿನ ಟ್ಯಾಂಕರ್‌ಗಳೊಂದಿಗೆ ತಕ್ಷಣ ಸ್ಥಳಕ್ಕೆ ಧಾವಿಸಿ ಬಹಳ ಶ್ರಮಪಟ್ಟು ಬೆಂಕಿಯನ್ನು ನಂದಿಸಿದರು. ಆದರೆ, ಅಲ್ಲಿಯ ವರೆಗೆ ಬೆಂಕಿಯ ಕೆನ್ನಾಲಿಗೆಗೆ ಹೋಟೆಲ್‌ನ ಟೇಬಲ್, ಖುರ್ಚಿ, ಕೌಂಟರ್ ಹಾಗೂ ಇತರ ಎಲ್ಲಾ ಫರ್ನಿಚರ್, ಹೋಟೆಲ್‌ನ, ಎಲೆಕ್ಟ್ರಿಕ್ ವೈಯರಿಂಗ್ ಎಲ್ಲವೂ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದವು.
ಮಧ್ಯರಾತ್ರಿ ಈ ಅವಘಡ ಸಂಭವಿಸಿದ್ದರಿಂದ ಹೋಟೆಲ್‌ನಲ್ಲಿ ಯಾರೂ ಇರಲಿಲ್ಲ. ಇದರಿಂದಾಗಿ ದೊಡ್ಡ ಅನಾಹುತ ತಪ್ಪಿದಂತಾಗಿದೆ.
ಮಾಹಿತಿಯನ್ನು ನೀಡಿದ ಹೋಟೆಲ್ ಮಾಲಿಕ ಸುಧಾಕರ್ ಪುಜಾರಿ ಅವರು ಬೆಂಕಿ ಅವಘಡದಿಂದ ಲಕ್ಷಾಂತರ ರೂಪಾಯಿಗಳ ನಷ್ಟವಾಗಿದೆ ಎಂದು ತಿಳಿಸಿದ್ದಾರೆ. ಕಳೆದ 25 ವರ್ಷಗಳಿಂದ ಹೋಟೆಲ್ ಉದ್ಯೋಗವನ್ನು ಮಾಡುತ್ತಿದ್ದು, ಈ ಅವಘಡದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದಾಗಿ ತಿಳಿಸಿದ್ದಾರೆ.
Laxmi News 24×7