ಹಾಸನ: ಈ ಥರ ಪರಿಸ್ಥಿತಿ ಯಾವ ತಂದೆ ತಾಯಿಗೂ ಬರಬಾರದು..!. ನನ್ನ ಮಗನಿಗೋಸ್ಕರವೇ ಈ ಜಾಗ ಮಾಡಿದ್ದು,, ಇದೇ ಜಾಗದಲ್ಲಿ ನನ್ನ ಮಗ ಮಲಗುತ್ತಿದ್ದ. ಈಗ ಇಲ್ಲೇ ಮಲಗಿಸಿದ್ದೇನೆ.. ಯಾರಿಗೂ ಈ ಪರಿಸ್ಥಿತಿ ಬೇಡ ಎಂದು ತಂದೆ ಗೋಳಾಡಿದ್ದಾರೆ.
ಹೌದು, ಈ ಘಟನೆ ನಡೆದು ಮೂರು ದಿನ ಕಳೆದಿದೆ. ಆದರೆ ಹೆತ್ತವರ ಆಕ್ರಂದನ ಕಿಂಚಿತ್ತೂ ಕಡಿಮೆಯಾಗಿಲ್ಲ. ಮಗನ ನೆನೆದು ಗೋಳಿಡುತ್ತಿರುವ ದೃಶ್ಯ ಮನಕಲಕುವಂತಿದೆ.