Breaking News

ಕಾಲ್ತುಳಿತ ಪ್ರಕರಣ: ಸಿಎಂ, ಡಿಸಿಎಂ, ಗೃಹ ಸಚಿವರು ರಾಜೀನಾಮೆ ನೀಡಬೇಕು – ಭಾಸ್ಕರ್ ರಾವ್

Spread the love

ಮೈಸೂರು: ಆರ್​ಸಿಬಿ ಸಂಭ್ರಮಾಚರಣೆ ದುರಂತದಲ್ಲಿ 11 ಜನರ ಸಾವಿನ ಬಗ್ಗೆ ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಮೈಸೂರಿನಲ್ಲಿ ನಿವೃತ್ತಿ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಹೇಳಿಕೆ ನೀಡಿದ್ದಾರೆ.

ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ನಿವೃತ್ತಿ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್, ಆರ್​​ಸಿಬಿ ಸಂಭ್ರಮಾಚರಣೆ ದುರಂತದಲ್ಲಿ 11 ಮಂದಿ ಸಾವು ಪ್ರಕರಣ ಸಿಎಂ, ಡಿಸಿಎಂ ಹಾಗೂ ಗೃಹ ಸಚಿವರು, ಸಂಬಂಧಪಟ್ಟವರು ರಾಜೀನಾಮೆ ನೀಡಬೇಕು. ಈ ಸಾವುಗಳಿಗೆ ಇವರೇ ನೇರ ಹೊಣೆ. ನಿಮ್ಮ ಕೈಯಲ್ಲಿ‌ 11 ಜನರ ಸಾವಿನ ರಕ್ತವಿದೆ. ಇದೊಂದು ಖಾಸಗಿ ಕಾರ್ಯಕ್ರಮವಲ್ಲ. ಇದೊಂದು‌ ಚೀಪ್‌ರೇಟ್ ಗಿಮಿಕ್ ಕಾರ್ಯಕ್ರಮದಲ್ಲಿ ಅವರ ಮಕ್ಕಳು, ಮೊಮ್ಮಕ್ಕಳಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ ಎಂದು ಕಿಡಿಕಾರಿದರು.

ಚೀಪ್ ರೇಟ್ ಗಿಮಿಕ್ ಕಾರ್ಯಕ್ರಮ: ಐಪಿಎಲ್ ಮ್ಯಾಚ್ ಗೆದ್ದಿರುವುದನ್ನು ವಿಜೃಂಭಣೆಯಿಂದ ಆಚರಿಸಬೇಕಿತ್ತು. ರಾಜ್ಯ ಸರ್ಕಾರ ಒತ್ತಡಕ್ಕೆ ಮಣಿದು ತರಾತುರಿಯಲ್ಲಿ ಮಾಡಿದ್ದು ಸರಿಯಲ್ಲ. ಆರ್​​ಸಿಬಿ ಹೆಸರಿನಲ್ಲಿ ಕನ್ನಡಿಗರು ಇರುವುದು ಇಬ್ಬರೇ ಆದರೂ ಕನ್ನಡಿಗರ ಭಾವನೆ ಹೆಚ್ಚಾಗಿದೆ. ಆರ್​​ಸಿಬಿ ಟೀಂ ಹೈಜಾಕ್ ಮಾಡಿಕೊಳ್ಳಲು ಸರ್ಕಾರ ಯತ್ನಿಸಿದೆ. ಡಿಪಿಆರ್ ಅನುಮತಿ ಪಡೆಯದೇ ಕಾರ್ಯಕ್ರಮ ನಡೆಸಿದ್ದಾರೆ. ಇದು ಬೆಟ್ಟಿಂಗ್​​ನಿಂದ ಗೆದ್ದು ಬಂದಿದ್ದಾರಾ ಎಂಬ ಅನುಮಾನ ಮೂಡುತ್ತದೆ. ಇವರೇನು ಹಣ ಹೂಡಿದ್ರಾ? ಎಂದು ಪ್ರಶ್ನಿಸಿದರು.

ಪರಸ್ಪರ ಹೊಂದಾಣಿಕೆ ಇಲ್ಲದ್ದೇ ಇಷ್ಟಕ್ಕೆಲ್ಲ ಕಾರಣ: ಬೆಂಗಳೂರಿನಲ್ಲಿ‌ ಏಳು ಏಜೆನ್ಸಿಗಳದ್ದೂ ತಪ್ಪಿದೆ. ಪರಸ್ಪರ ಒಬ್ಬರಿಗೊಬ್ಬರು ಹೊಂದಾಣಿಕೆ ಇಲ್ಲದೆ ಕಾರ್ಯಕ್ರಮ ಮಾಡಿದ್ದರಿಂದ ಯಡವಟ್ಟಾಗಿದೆ. ಬೆಂಗಳೂರಿನಲ್ಲಿ ರಾತ್ರಿಯಿಡೀ ಸಂಭ್ರಮ ನಡೆಸಿ ಮರುದಿನ ಕಾರ್ಯಕ್ರಮ ನಡೆಸಿದ್ದು ತಪ್ಪು. ನೂರು ಆಂಬ್ಯುಲೆನ್ಸ್, ಸ್ಟ್ರೆಚರ್, ಹಗ್ಗ, ಕ್ರೌಡ್ ಕಟ್ಟಿಂಗ್ ಉಪಕರಣ ಇಟ್ಟುಕೊಳ್ಳಬೇಕು. ಇಂಟೆಲಿಜೆನ್ಸ್ ಫೇಲ್ ಆದ‌ ಮೇಲೆ ಕಾನೂನು ಸುವ್ಯವಸ್ಥೆ ಆದ್ರೂ ಕಾರ್ಯನಿರ್ವಹಿಸಬೇಕಿತ್ತು. ಆರ್​ಸಿಬಿ ತಂಡ ಕರ್ನಾಟಕ ಮತ್ತು ಭಾರತ ತಂಡವಲ್ಲ. ಇದೊಂದು ಖಾಸಗಿ ಕ್ಲಬ್. ಹರಾಜು ಹಾಕಿ ಖರೀದಿಸಿರುವ ತಂಡ. ನಾವು ಸಮವಸ್ತ್ರ ಹಾಕಿದ ಮೇಲೆ ದೊರೆ ವಿರುದ್ಧ ಮಾತನಾಡಲ್ಲ. ದೊರೆ ಕೊಟ್ಟ ತೀರ್ಮಾನವೇ ಅಂತಿಮ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಭಾಸ್ಕರ್ ರಾವ್ ಪರೋಕ್ಷ ವಾಗ್ದಾಳಿ ನಡೆಸಿದರು.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ