Breaking News

ಫೋನ್‌ಪೇ, ಗೂಗಲ್ ಪೇ, ಪೇಟಿಎಂ ಬಳಕೆದಾರರಿಗೆ ಪ್ರಮುಖ ಸುದ್ದಿ

Spread the love

ಬೆಂಗಳೂರು (ಮೇ. 24): ತಂತ್ರಜ್ಞಾನವು (Technology) ನಮ್ಮ ಜೀವನವನ್ನು ಎಷ್ಟು ಸುಲಭಗೊಳಿಸಿದೆಯೋ, ಅಷ್ಟೇ ಅಪಾಯಗಳನ್ನೂ ಒಡ್ಡುತ್ತಿದೆ. ಇಂಟರ್ನೆಟ್ ಪ್ರವೇಶ ಹೆಚ್ಚಳದ ನಂತರ ಬಂದಿರುವ ದೊಡ್ಡ ಬದಲಾವಣೆಯೆಂದರೆ ಹಣದ ವಹಿವಾಟುಗಳಲ್ಲಿ. ಈಗ ನೀವು ಯಾರಿಗಾದರೂ ಹಣವನ್ನು ಕಳುಹಿಸಲು ಅಥವಾ ಅಂಗಡಿಯಿಂದ ಏನಾದರು ಖರೀದಿಸಿದರೆ ಹೆಚ್ಚಿನ ಜನರು ಆನ್‌ಲೈನ್‌ನಲ್ಲಿ ಪಾವತಿಗಳನ್ನು ಮಾಡುತ್ತಾರೆ. ಪ್ರತಿಯೊಂದು ಸ್ಥಳದಲ್ಲೂ ವಿಭಿನ್ನ ಜನರು ಆನ್‌ಲೈನ್ ಪಾವತಿಗಳನ್ನು ಆಶ್ರಯಿಸುತ್ತಿದ್ದಾರೆ. ನೀವು ಸಹ ಆನ್‌ಲೈನ್ ಪಾವತಿಗಳನ್ನು ಮಾಡುತ್ತಿದ್ದರೆ ನಿಮಗೆ ಒಳ್ಳೆಯ ಸುದ್ದಿ ಇದೆ. ಈಗ ನಿಮ್ಮ ಡಿಜಿಟಲ್ ಪಾವತಿ ಇನ್ನಷ್ಟು ಸುರಕ್ಷಿತವಾಗಲಿದೆ.

ಇತ್ತೀಚಿನ ದಿನಗಳಲ್ಲಿ, ಡಿಜಿಟಲ್ ಪಾವತಿಗಳಲ್ಲಿ ವಂಚನೆಯ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಟೆಲಿಕಾಂ ಕಂಪನಿಗಳಿಂದ ಹಿಡಿದು ಸರ್ಕಾರದವರೆಗೆ ಎಲ್ಲರೂ ಸೈಬರ್ ಅಪರಾಧ ಮತ್ತು ಆನ್‌ಲೈನ್ ವಂಚನೆಯನ್ನು ತಡೆಗಟ್ಟಲು ಹೊಸ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ನೀವು ಪೇಟಿಎಂ, ಫೋನ್​ಪೇ, ಗೂಗಲ್ ಪೇ ಮತ್ತು BHIM ನಂತಹ UPI ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದರೆ ನಿಮಗೆ ಒಳ್ಳೆಯ ಸುದ್ದಿ ಇದೆ. ಈಗ ನಿಮ್ಮ ಆನ್‌ಲೈನ್ ಪಾವತಿ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ. ಸೈಬರ್ ಅಪರಾಧಿಗಳು ಇನ್ನು ಮುಂದೆ ನಿಮ್ಮ ಹಣವನ್ನು ಕದಿಯಲು ಸಾಧ್ಯವಾಗುವುದಿಲ್ಲ.

ಡಿಜಿಟಲ್ ಪಾವತಿಗಳನ್ನು ಸುರಕ್ಷಿತವಾಗಿಡಲು ದೂರಸಂಪರ್ಕ ಇಲಾಖೆಯು ಹೊಸ ಭದ್ರತಾ ಕವಚವನ್ನು ಸಿದ್ಧಪಡಿಸಿದೆ. ಈ ಹೊಸ ಭದ್ರತಾ ಕವಚದ ಹೆಸರು ಹಣಕಾಸು ವಂಚನೆ ಅಪಾಯ ಸೂಚಕ (Financial Fraud Risk Indicator). ದೂರಸಂಪರ್ಕ ಇಲಾಖೆ ಪರಿಚಯಿಸಿರುವ ಈ ಹೊಸ ಉಪಕರಣದ ಕೆಲಸವೆಂದರೆ ವಂಚನೆಯಲ್ಲಿ ಭಾಗಿಯಾಗಿರಬಹುದಾದ ಅಥವಾ ಭಾಗಿಯಾಗಿರುವ ಮೊಬೈಲ್ ಸಂಖ್ಯೆಗಳನ್ನು ಗುರುತಿಸುವುದು


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ