Breaking News

‘ಕನ್ನಡೇತರ ವ್ಯಕ್ತಿಯನ್ನು ಮೈಸೂರು ಸ್ಯಾಂಡಲ್ ಸೋಪ್ ಬ್ರ್ಯಾಂಡ್ ಅಂಬಾಸಿಡರ್ ಮಾಡಿ ಕನ್ನಡಿಗರನ್ನು ದೂರವಿಟ್ಟಿದ್ದಾರೆ’: ರಮ್ಯಾ

Spread the love

ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಯಮಿತ (ಕೆಎಸ್​ಡಿಎಲ್) ಸಂಸ್ಥೆಯ ಪ್ರಚಾರಕ್ಕೆ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯನ್ನಾಗಿ ನೇಮಿಸಿಕೊಳ್ಳಲಾಗಿದೆ. ಆದರೆ, ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧಗಳು ವ್ಯಕ್ತವಾಗುತ್ತಿವೆ. ಕರುನಾಡಿನ ಖ್ಯಾತ ಉತ್ಪನ್ನಕ್ಕೆ ಕನ್ನಡೇತರ ನಟಿಯನ್ನು ಬ್ರ್ಯಾಂಡ್​ ಅಂಬಾಸಿಡರ್​ ಮಾಡಿರೋದು ಬಹುತೇಕರ ಆಕ್ರೋಶಕ್ಕೂ ಕಾರಣವಾಗಿದೆ. ಕನ್ನಡ ಚಿತ್ರರಂಗದ ಖ್ಯಾತ ನಟಿ ರಮ್ಯಾ ಕೂಡಾ ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ನಟಿ ರಮ್ಯಾ ಎಕ್ಸ್​ ಪೋಸ್ಟ್​​: ”ಕೆಎಸ್‌ಡಿಎಲ್ ಪುನರುಜ್ಜೀವನಗೊಳಿಸುವ ಉದ್ದೇಶವನ್ನು ಶ್ಲಾಘಿಸುತ್ತೇನೆ. ಆದರೆ, ಅದನ್ನು ಕಾರ್ಯಗತಗೊಳಿಸುವಿಕೆಯು ವಾಸ್ತವವಾಗಿಲ್ಲ. ವ್ಯವಹಾರದ ದೃಷ್ಟಿಕೋನದಿಂದ ನೋಡಿದರೂ, ವಿಶೇಷವಾಗಿ ಕಂಪನಿಯು ಕ್ಷೀಣಿಸುತ್ತಿರುವಾಗ, ಮೈಸೂರು ಸ್ಯಾಂಡಲ್ ಸೋಪ್ ಐಕಾನಿಕ್ ಆಗಿದ್ದು, ದೊಡ್ಡ ಪರಂಪರೆ ಹೊತ್ತೊಯ್ಯುತ್ತದೆ. ಅದಕ್ಕೆ ಬ್ರ್ಯಾಂಡ್ ಅಂಬಾಸಿಡರ್​​ ಅಗತ್ಯವಿಲ್ಲ (ಅಮುಲ್, ಆಪಲ್, ಡವ್, ಅಮೆಜಾನ್)”.’ಉತ್ತರದ ಗ್ರಾಹಕರನ್ನು ಸೆಲೆಯಲು ಕನ್ನಡೇತರ ವ್ಯಕ್ತಿಯನ್ನು ಬ್ರ್ಯಾಂಡ್ ಅಂಬಾಸಿಡರ್​ ಆಗಿ ತೆಗೆದುಕೊಳ್ಳುವ ಮೂಲಕ ಅವರು ತಮ್ಮದೇ ಆದ ಜನರನ್ನು, ಅಂದರೆ ತಮ್ಮ ಮೂಲ ನಿಷ್ಠಾವಂತ ಗ್ರಾಹಕ ನೆಲೆಯಾದ ಕನ್ನಡಿಗನನ್ನು ದೂರವಿಟ್ಟಿದ್ದಾರೆ. ನಾವು ನಮ್ಮ ಕನ್ನಡದ ಹೆಮ್ಮೆಯನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಈ ಸಮಯದಲ್ಲಿ ಈ ಪ್ರಯತ್ನ ನಮ್ಮನ್ನೇ ಸೋಲಿಸುತ್ತದೆ”.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ