Breaking News

ಉಚಿತ ಬಸ್ ಟಿಕೆಟ್ ಕಳೆದುಕೊಂಡು ಪರದಾಡಿದ ಅಜ್ಜಿ

Spread the love

ವೃದ್ದೆಯೊಬ್ಬರು ಸಾರಿಗೆ ಬಸ್‌ನಲ್ಲಿ ಟಿಕೆಟ್ ಕಳೆದುಕೊಂಡು ಪರದಾಡಿದ ಘಟನೆ ನಡೆದಿದೆ. ಸಾರಿಗೆ ಬಸ್ ನಲ್ಲಿ ಕಂಡಕ್ಟರ್ ಕೊಟ್ಟ ಉಚಿತ ಪ್ರಯಾಣ ಟಿಕೆಟ್ ನ್ನು ವೃದ್ಧೆ ಕಳೆದುಕೊಂಡ ಘಟನೆ ವಿಜಯಪುರ ಜಿಲ್ಲೆಯ ಇಂಡಿ – ಚಡಚಣ ಮಾರ್ಗದ ಬಸ್ ನಲ್ಲಿ ನಡೆದಿದೆ‌. ಟಿಕೆಟ್ ಕಳೆದುಕೊಂಡ ಅಜ್ಜಿ ಮತ್ತೊಂದು ‌ಟಿಕೆಟ್ ನೀಡುವಂತೆ ಕಂಡಕ್ಟರ್ ಗೆ ಮನವಿ ಮಾಡಿಕೊಂಡರು. ಆಗ ಕಂಡಕ್ಟರ್ ಟಿಕೆಟ್ ನೀಡಲು ನಿರಾಕರಿಸಿದ್ದಾರೆ‌.
ಅಜ್ಜಿ ಟಿಕೆಟ್ ಎಲ್ಲಿ ಹೋಯ್ತು ಅಂತ ಬಸ್ ತುಂಬಾ ಹುಡುಕಾಟ ನಡೆಸಿದ್ಧಾರೆ. ಇನ್ನೂ ಅಜ್ಜಿ ಹುಡುಕಾಟದ ದೃಶ್ಯವನ್ನು ಸಹ ಪ್ರಯಾಣಿಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಅಜ್ಜಿ ಜೊತೆಗೆ ಸಹ ಪ್ರಯಾಣಿಕರು ಸೀಟ್ ಕೆಳಗೆ ಟಿಕೆಟ್ ಗಾಗಿ ಎಷ್ಟೇ ಹುಡುಕಾಟ ‌ನಡೆಸಿದ್ದರೂ ಟಿಕೆಟ್ ಪತ್ತೆಯಾಗಿಲ್ಲಾ. ಮಹಿಳೆಯರಿಗೆ ಸಾರಿಗೆ ಬಸ್ ನಲ್ಲಿ ಉಚಿತ ಟಿಕೆಟ್ ವಿತರಣೆ ಮಾಡಲಾಗುತ್ತದೆ. ವಿಜಯಪುರ ಜಿಲ್ಲೆ ಇಂಡಿ ತಾ. ಚಡಚಣ ಮಾರ್ಗದ ಬಸ್ ನಲ್ಲಿ ಅಜ್ಜಿಯೊಬ್ಬಳ ಟಿಕೆಟ್ ಗಾಗಿ ಹುಡುಕಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ