Breaking News

ಗಾಂಜಾ ಬೀಜ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿರುವ ಅಬಕಾರಿ ಅಧಿಕಾರಿಗಳು, ಆತನನ್ನು ಬಂಧಿಸಿ 270ಗ್ರಾಂ ಒಣ ಗಾಂಜಾ ಬೀಜವನ್ನು ಜಪ್ತಿ ಮಾಡಿದ್ದಾರೆ.

Spread the love

ವಿಜಯನಗರ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸಕಲಾಪುರಹಟ್ಟಿ ಕ್ರಾಸ್ ಬಳಿ ಗಾಂಜಾ ಬೀಜ ಮಾರಾಟ ಮಾಡಲು ತೆರಳುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಿದ ಅಬಕಾರಿ ಇಲಾಖೆ ಸಿಬ್ಬಂದಿ ಆತನನ್ನು ಬಂಧಿಸಿ, ಅವನ ಬಳಿ ಇದ್ದ 270ಗ್ರಾಂ ಒಣ ಗಾಂಜಾ ಬೀಜವನ್ನು ಜಪ್ತಿ ಮಾಡಿದ್ದಾರೆ.

ಸಕಲಾಪುರಹಟ್ಟಿಯ ಟಿ. ಬಸವರಾಜ ಬಂಧಿತ ಆರೋಪಿ. ಈತನನ್ನು ಈಗಾಗಲೇ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಬಸವರಾಜನು 270ಗ್ರಾಂನಷ್ಟು ಗಾಂಜಾದ ಒಣ ಬೀಜವನ್ನು ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಲೆಂದು ಸಕಲಾಪುರಹಟ್ಟಿಯಿಂದ ಕಾನಾಹೊಸಹಳ್ಳಿ ಕಡೆಗೆ ತೆರಳುತ್ತಿದ್ದ. ಈ ವೇಳೆ ಅಬಕಾರಿ ಉಪಾಧೀಕ್ಷಕ ಆಂಜನೇಯ, ಅಬಕಾರಿ ನಿರೀಕ್ಷಿಕ ಎ.ಜಿ. ಅಂಬಣ್ಣ ಅವರ ನೇತೃತ್ವದಲ್ಲಿ ಕೂಡ್ಲಿಗಿ ಅಬಕಾರಿ ನಿರೀಕ್ಷಿಕ ಬಸವರಾಜ ಹಾಗೂ ಸಿಬ್ಬಂದಿ ನಾಗರಾಜ ಮತ್ತು ರಾಘವೇಂದ್ರ ಇವರ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ