Breaking News

ಏರ್ ಶೋಗೆ ಮಾಂಸ ಮಾರಾಟ ನಿಷೇಧ?

Spread the love

ಬೆಂಗಳೂರು, ಜನವರಿ 27: ಏರೋ ಇಂಡಿಯಾ (Aeroindia) ವತಿಯಿಂದ ಯಲಹಂಕದಲ್ಲಿ ನಡೆಯುವ 2025ನೇ ಸಾಲಿನ ಏರ್ ಶೋಗೆ (Air Show) ಸಿದ್ಧತೆ ಭರದಿಂದ ಸಾಗಿದೆ. ಎರಡು ವರ್ಷಗಳಿಗೊಮ್ಮೆ ನಡೆಯುವ ಏರ್ ಶೋಗೆ ಕೌಂಟ್ ದಿನಗಣನೆ ಆರಂಭವಾಗಿದೆ. ಫೆಬ್ರವರಿ 10 ರಿಂದ 14ರವರೆಗೆ ನಡೆಯುವ ಅಂತರರಾಷ್ಟ್ರೀಯ ಏರ್ ಶೋವನ್ನು ನೋಡಲು ಬೆಂಗಳೂರು ಜನ ಕಾತುರರಾಗಿದ್ದಾರೆ. ಏರ್ ಶೋಗೆ ಸಕಲ ತಯಾರಿ ನಡೆಯುತ್ತಿದೆ. ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವ ಕಣ್ತುಂಬಿಕೊಳ್ಳೋಕೆ ಸಿಟಿಮಂದಿ ಕಾತುರರಾಗಿದ್ದಾರೆ.

ಅಂತರರಾಷ್ಟ್ರೀಯ ಏರ್‌ ಶೋ ನಡೆಯುವ ಯಲಹಂಕ ವಾಯುನೆಲೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾಂಸ ಮಾರಾಟವನ್ನ ನಿಷೇಧ ಮಾಡಲಾಗುತ್ತೆ. ಅದರಂತೆ, ಈ ಬಾರಿ ಕೂಡ ಬೃಹತ್​ ಬೆಂಗಳೂರು ಮಹಾನಗರ ಪಾಲೀಕೆ (BBMP) ಯಲಹಂಕ ವಲಯದ ಏರ್‌ಪೋರ್ಸ್‌ ಸ್ಟೇಷನ್‌ನಿಂದ 13 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಾಂಸ ಮಾರಾಟದ ಉದ್ಯಮಗಳನ್ನು 26 ದಿನ ಮುಚ್ಚುವಂತೆ ಆದೇಶ ಹೊರಡಿಸಿದೆ. ಪಾಲಿಕೆ ನಿಮಯ ಉಲ್ಲಂಘನೆ ಮಾಡಿದರೇ ಬಿಬಿಎಂಪಿ ಕಾಯ್ದೆ 2020 ಮತ್ತು ಏರ್ ಕ್ರಾಫ್ಟ್ ರೂಲ್ಸ್ 1937 ಪ್ರಕಾರ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತೆ ಎಚ್ಚರಿಕೆ ನೀಡಿತ್ತು. ಎಚ್ಚರಿಕೆ ನಂತರವೂ ವ್ಯಾಪಾರಿಗಳು ಮಾಂಸ ಮಾರಾಟ ಮಾಡುತ್ತಿದ್ದಾರೆ.

ಮಾಂಸ ಮಾರಾಟ ನಿಷೇಧ ಏಕೆ?

ಯಲಹಂಕದ ಸುತ್ತಮುತ್ತಲಿನ ಪ್ರದೇಶದಲ್ಲಿ ಮಾಂಸ ಮಾರಾಟ ಮಾಡುವುದರಿಂದ ಪಕ್ಷಿಗಳ ಹಾರಾಟ ಹೆಚ್ಚಾಗುತ್ತೆ. ಇದರಿಂದ ಏರ್ ಶೋ ಸಂದರ್ಭದಲ್ಲಿ ಯುದ್ಧ ವಿಮಾನಗಳ ಹಾರಾಟಕ್ಕೆ ಸಮಸ್ಯೆಯಾಗುತ್ತೆ ಎಂದು ಪಾಲಿಕೆ ಈ ಆದೇಶ ಹೊರಡಿಸಿದೆ. ಪಾಲಿಕೆಯ ಆದೇಶಕ್ಕೆ ಮಾಂಸ ಮಾರಾಟ ವ್ಯಾಪಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಮಾಂಸದ ಅಂಗಡಿಗಳು, ಮಾಂಸಾಹಾರ ಹೊಟೇಲ್​ಗಳು ಎಂದಿನಂತೆ ಕಾರ್ಯನಿರ್ವಹಿಸ್ತಿವೆ. ಇತ್ತ ಬಾಗಲೂರು ಮುಖ್ಯರಸ್ತೆಯಲ್ಲೂ ಮಟನ್, ಚಿಕನ್ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದ್ದಯ, ಪಾಲಿಕೆಯ ಆದೇಶ ಬರೀ ಪತ್ರಕ್ಕೆ ಮಾತ್ರ ಸೀಮಿತವಾಯ್ತ ಎಂಬ ಪ್ರಶ್ನೆ ಉದ್ಭವಿಸಿದೆ. ಯಲಹಂಕ ಸುತ್ತಮುತ್ತ ಎತ್ತರದ ಕಟ್ಟಡಗಳ ಮೇಲೆ ಕ್ರೇನ್ ಬಳಸಿ ಕೆಲಸ ಮಾಡುವುದಕ್ಕೂ ಕೂಡ ಪಾಲಿಕೆ ನಿಷೇಧ ಹೇರಿದೆ.


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ