Breaking News

ಮಾಜಿ ಪ್ರಧಾನಿ ದೇವೇಗೌಡ ಹೊರಡಿಸಿರುವ ಪತ್ರಿಕಾ ಪ್ರಕಟಣೆ.

Spread the love

ಬೆಂಗಳೂರು (ಜೂನ್‌ 25); ರಾಜ್ಯದಲ್ಲಿ ಜೆಡಿಎಸ್‌ ಕಾರ್ಯಕರ್ತರಿಗೆ ಬಿಜೆಪಿ ಸಚಿವರುಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ಮನೆಯ ಎದುರು ಧರಣಿ ನಡೆಸಲು ಮುಂದಾಗಿದ್ದಾರೆ. ಜೂನ್‌.29 ರಂದು ಧರಣಿ ನಡೆಸಲಿರುವುದಾಗಿ ಸ್ವತಃ ಸಿಎಂ ಗೆ ಎಚ್ಚರಿಕೆ ಪತ್ರ ರವಾನಿಸಿದ್ದಾರೆ.ಸಿಎಂ ಗೆ ಪತ್ರ ಬರೆದಿರುವ ದೇವೇಗೌಡ, “ಸಚಿವ ಕೆ.ಸಿ. ನಾರಾಯಣಗೌಡ ಚುನಾವಣಾ ವೈಷಮ್ಯದ ಹಿನ್ನೆಲೆ ಕೆ.ಆರ್ ಪೇಟೆಯ ಜೆಡಿಎಸ್ ಕಾರ್ಯಕರ್ತ ಹೆಚ್.ಟಿ. ಮಂಜು ಎಂಬುವವರಿಗೆ ನಿತ್ಯ ಕಿರುಕುಳ ನೀಡುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡ ಹೊರಡಿಸಿರುವ ಪತ್ರಿಕಾ ಪ್ರಕಟಣೆ.


ಹೆಚ್.ಟಿ ಮಂಜುಗೆ ಸೇರಿದ ಸ್ಟೋನ್ ಕ್ರಷರ್, ಕ್ವಾರಿ ಮೈನಿಂಗ್ ಗೆ ಅಡ್ಡಗಾಲು ಹಾಕುತ್ತಿದ್ದಾರೆ. ಇಲ್ಲಿ ಕ್ವಾರಿ ಮೈನಿಂಗ್ ನಡೆಸಲು ಎಲ್ಲಾ ಇಲಾಖೆಗಳ ಅನುಮತಿ ಇದ್ದರೂ ಕಿರುಕುಳ ನೀಡಲಾಗುತ್ತಿದೆ. ಈ ಕುರಿತು ದೂರು ನೀಡಲು ಮಂಡ್ಯ ಜಿಲ್ಲಾಧಿಕಾರಿಗೆ ಕರೆ ಮಾಡಿದರೂ ಸಹ ಅವರು ಸ್ವೀಕರಿಸಿಲ್ಲ. ಅಲ್ಲದೆ, ಡಿಸಿ ಸಹ ಉದ್ದಟತನದ ಆರೋಪ ಮಾಡುತ್ತಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ