Breaking News

ಬೆಳಗಾವಿಯಲ್ಲಿ ಪ್ರವಾಹ: ಹಲವು ಗ್ರಾಮಗಳು ಜಲಾವೃತ,

Spread the love

ಬೆಳಗಾವಿ, ಜುಲೈ 28: ಜಿಲ್ಲೆಯಲ್ಲಿ 7 ನದಿಗಳಿಂದ ಪ್ರವಾಹ(flood)ಪರಿಸ್ಥಿತಿ ನಿರ್ಮಾಣವಾಗಿದೆ. 40 ಗ್ರಾಮಗಳಲ್ಲಿ ನದಿಗಳ ಪ್ರವಾಹದಿಂದ ಜನರು ಅತಂತ್ರವಾಗಿದ್ದಾರೆ. ಘಟಪ್ರಭಾ ನದಿ (Ghataprabha River) ಸೃಷ್ಟಿಸಿರುವ ಅವಾಂತರಕ್ಕೆ ಈಗ ಜನ ತತ್ತರಿಸಿ ಹೋಗಿದ್ದಾರೆ. ತನ್ನ ಪಾತ್ರವನ್ನ ಬಿಟ್ಟು ಹರಿಯುತ್ತಿರುವ ನದಿ ಊರಿಗೆ ಊರನ್ನೇ ತನ್ನ ಒಡಲಿಗೆ ಹಾಕಿಕೊಂಡಿದೆ. ಸೇತುವೆ, ದೇವಸ್ಥಾನ, ಬ್ಯಾಂಕ್ ಮತ್ತು ಮನೆಗಳು ಹೀಗೆ ಎಲ್ಲವೂ ಜಲಾವೃತವಾಗಿವೆ.

ಬೆಳಗಾವಿಯಲ್ಲಿ ಪ್ರವಾಹ: ಹಲವು ಗ್ರಾಮಗಳು ಜಲಾವೃತ, ಬಿದಿಗೆ ಬಿದ್ದ 1 ಸಾವಿರಕ್ಕೂ ಹೆಚ್ಚು ಕುಟುಂಬಗಳು

ಪ್ರವಾಹದಿಂದ ಬಿದಿಗೆ ಬಿದ್ದ 1 ಸಾವಿರಕ್ಕೂ ಹೆಚ್ಚು ಕುಟುಂಬಗಳು

ಗೋಕಾಕ್, ನಿಪ್ಪಾಣಿ, ಅಥಣಿ, ಮೂಡಲಗಿ, ಹುಕ್ಕೇರಿ, ಕಾಗವಾಡ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಹದ ಎಫೆಕ್ಟ್ ಉಂಟಾಗಿದೆ. ಜಿಲ್ಲೆಯಲ್ಲಿ ಈವರೆಗೆ 41 ಸಂಪರ್ಕ ಸೇತುವೆಗಳು ಜಲಾವೃತವಾಗಿವೆ. 40 ಗ್ರಾಮಗಳಲ್ಲಿ ನದಿಗಳ ಪ್ರವಾಹದಿಂದ ಜನರು ಅತಂತ್ರಕೊಳಗಾಗಿದ್ದು, ಪ್ರವಾಹಕ್ಕೆ ಸಿಲುಕಿದ್ದ 1 ಸಾವಿರಕ್ಕೂ ಹೆಚ್ಚು ಕುಟುಂಬಗಳು ಬೀದಿಗೆ ಬಿದ್ದಿವೆ. ಮೂರುವರೆ ಸಾವಿರ ಸಂತ್ರಸ್ತರಿಗೆ ಕಾಳಜಿ ಕೇಂದ್ರಗಳಲ್ಲಿ ಆರೈಕೆ ಮಾಡಲಾಗುತ್ತಿದೆ. ಸಂಬಂಧಿಕರ ಮನೆ, ಜಮೀನಿನಲ್ಲಿ 1800 ಸಂತ್ರಸ್ತರು ಸುರಕ್ಷಿತವಾಗಿದ್ದಾರೆ. ಇನ್ನು ಜಿಲ್ಲೆಯಲ್ಲಿ ಈಗಾಗಲೇ 20 ಕಾಳಜಿ ಕೇಂದ್ರ ತೆರೆಯಲಾಗಿದೆ.


Spread the love

About Laxminews 24x7

Check Also

2 ವರ್ಷಗಳಿಂದ ಆರಂಭವಾಗದ ಶುದ್ಧ ನೀರಿನ ಘಟಕಗಳು

Spread the loveಹಾವೇರಿ: ನಗರದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿ ಎಂದು ಶಾಸಕರ ಅನುದಾನದಲ್ಲಿ ಆರು ಶುದ್ಧ ಕುಡಿಯುವ ನೀರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ