Breaking News

ಚನ್ನಮ್ಮನ ಕಿತ್ತೂರು | ಬಸ್ ಪಲ್ಟಿ: 10 ಜನರಿಗೆ ಗಾಯ

Spread the love

ನ್ನಮ್ಮನ ಕಿತ್ತೂರು: ಹುಬ್ಬಳ್ಳಿಯಿಂದ ಬೆಳಗಾವಿಗೆ ಹೊರಟಿದ್ದ ಸಾರಿಗೆ ಸಂಸ್ಥೆಯ ತಡೆರಹಿತ ರಾಜಹಂಸ ಬಸ್ ತಾಲ್ಲೂಕಿನ ತಿಮ್ಮಾಪುರ ಬಳಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದು 10 ಪ್ರಯಾಣಿಕರಿಗೆ ಗಾಯಗಳಾಗಿವೆ.

ಹೆದ್ದಾರಿ ಬದಿಗಿರುವ ಕಬ್ಬಿಣದ ತಡೆ ಸರಳುಗಳನ್ನು ಕಿತ್ತುಕೊಂಡು ಸರ್ವೀಸ್ ರಸ್ತೆಗೆ ಬಂದು ಬಸ್ ಬಿದ್ದಿದೆ.

ಚನ್ನಮ್ಮನ ಕಿತ್ತೂರು | ಬಸ್ ಪಲ್ಟಿ: 10 ಜನರಿಗೆ ಗಾಯ

ಭಾರಿ ಸಪ್ಪಳವಾಗಿದ್ದರಿಂದ ತಿಮ್ಮಾಪುರ ಗ್ರಾಮಸ್ಥರು ಧಾವಿಸಿ ಬಂದು ವಾಹನದಲ್ಲಿ ಸಿಕ್ಕಿ ಬಿದ್ದಿದ್ದ ಪ್ರಯಾಣಿಕರನ್ನು ಹೊರತೆಗೆಯುವಲ್ಲಿ ನೆರವಾದರು.

ಗಾಯಾಳುಗಳನ್ನು ಇಲ್ಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಸಿಪಿಐ ಮಲಕಾಜಪ್ಪ ಡಪ್ಪೀನ್, ಎಸ್‌ಐ ಪ್ರವೀಣ ಗಂಗೋಳ ಸ್ಥಳ ಪರಿಶೀಲನೆ ನಡೆಸಿದರು. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ