Breaking News

ಬೆಂಗಳೂರು-ಚೆನ್ನೈ ವಂದೇ ಭಾರತ್ ಸೇವೆ ನಾಳೆಯಿಂದ ಆರಂಭ

Spread the love

ಬೆಂಗಳೂರು ಮಾರ್ಚ್ 13: ಮೈಸೂರು-ಚೆನ್ನೈ ನೂತನ ವಂದೇ ಭಾರತ್‌ ರೈಲು ಮಾರ್ಚ್ 14ರಿಂದ ಎಸ್‌ಎಂವಿಟಿ ಬೆಂಗಳೂರು-ಚೆನ್ನೈ ಸೆಂಟ್ರಲ್‌ ರೈಲ್ವೆ ನಿಲ್ದಾಣದ ನಡುವೆ ವಾಣಿಜ್ಯ ಸಂಚಾರ ಆರಂಭಿಸಲಿದೆ.

ಇದರ ದರವನ್ನು ನೈಋತ್ಯ ರೈಲ್ವೆ ನಿಗಧಿಪಡಿಸಿದೆ.ಸರ್‌ ಎಂ.ವಿಶ್ವೇಶ್ವರಯ್ಯ ಟರ್ಮಿನಲ್‌-ಚೆನ್ನೈ ಸೆಂಟ್ರಲ್ ರೈಲ್ವೆ ನಿಲ್ದಾಣದ ನಡುವೆ (353 ಕಿ.ಮೀ) ಚೇರ್‌ಕಾರ್‌ 985, ಎಕ್ಸಿಕ್ಯೂಟಿವ್‌ ಕ್ಸಾನ್‌ಗೆ 1855 ರೂ..ನಿಗದಿಸಲಾಗಿದೆ.

ಎಸ್‌ಎಂವಿಟಿ-ಕಟ್ಪಾಡಿ ರೈಲ್ವೆ ಸ್ಟೇಷನ್ (223 ಕಿಮೀ) ನಡುವೆ ಚೇರ್‌ಕಾರ್‌ 765 ರೂ, ಎಕ್ಸಿಕ್ಯೂಟಿವ್ ಕ್ಲಾಸ್‌ 1420 ರೂಪಾಯಿ ದರವಿದೆ. ಎಸ್‌ಎಂವಿಟಿ-ಕೃಷ್ಣರಾಜಪುರಂ (5 ಕಿ.ಮೀ) ಚೇರ್‌ಕಾರ್‌ಗೆ 365 ರೂಪಾಯಿ, ಎಕ್ಸಿಕ್ಯೂಟಿವ್ ಕ್ಲಾಸ್‌ಗೆ 690 ನಿಗದಿಸಲಾಗಿದೆ.

ಮೈಸೂರಿನಲ್ಲಿ ನಡೆಯುತ್ತಿರುವ ರೈಲ್ವೆ ನಿರ್ವಹಣಾ ಕಾಮಗಾರಿ ಪೂರ್ಣಗೊಳ್ಳುವವರೆಗೆ ಹೊಸ ವಂದೇ ಭಾರತ್‌ ರೈಲು ಬೆಂಗಳೂರಿನ ಸರ್‌ ಎಂ.ವಿಶ್ವೇಶ್ವರಯ್ಯ ರೈಲ್ವೆ ನಿಲ್ದಾಣದ ನಡುವೆ ಮಾತ್ರ ಸಂಚರಿಸಲಿದೆ.

ಬಳಿಕ ಏಪ್ರಿಲ್ ಐದರಿಂದ ಈ ರೈಲು ಮೈಸೂರಿನವರೆಗೆ ವಿಸ್ತರಣೆಯಾಗಲಿದೆ.ಸದ್ಯ ಓಡುತ್ತಿರುವ ಮೈಸೂರು-ಚೆನ್ನೈ ವಂದೇ ಭಾರತ್‌ ಶೇ.85-90ರಷ್ಟು ಪ್ರಯಾಣಿಕರಿಂದ ಭರ್ತಿ ಆಗುತ್ತಿದೆ.


Spread the love

About Laxminews 24x7

Check Also

ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆ. 1ರಂದು 16ನೇ ಪದವಿ ಪ್ರದಾನ ಸಮಾರಂಭ

Spread the loveಬಾಗಲಕೋಟೆ: ನಗರದ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ 2024–25ನೇ ಸಾಲಿನ ವಿದ್ಯಾರ್ಥಿಗಳಿಗಾಗಿ ೧೬ನೇ ಪದವಿ ಪ್ರದಾನ ಸಮಾರಂಭವನ್ನು ಆಗಸ್ಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ