Breaking News

ಛಲವಿದ್ದರೆ ಏನೆಲ್ಲ ಸಾಧಿಸಬಹುದು’ ಎನ್ನುವುದಕ್ಕೆ ಮೂಡಲಗಿ ರೈತ ಹೊನ್ನಪ್ಪ ಸಾವಳಗೆಪ್ಪ ಬೂದಿಹಾಳ ಮಾದರಿ

Spread the love

ಮೂಡಲಗಿ: ‘ಮನಸ್ಸಿದ್ದರೆ ಏನೆಲ್ಲ ಮಾಡಬಹುದು, ಛಲವಿದ್ದರೆ ಏನೆಲ್ಲ ಸಾಧಿಸಬಹುದು’ ಎನ್ನುವುದಕ್ಕೆ ಮೂಡಲಗಿ ತಾಲ್ಲೂಕಿನ ಖಾನಟ್ಟಿ ಗ್ರಾಮದ ಯುವ ರೈತ ಹೊನ್ನಪ್ಪ ಸಾವಳಗೆಪ್ಪ ಬೂದಿಹಾಳ ಮಾದರಿಯಾಗಿದ್ದಾರೆ.

2008ರಲ್ಲಿ ಬಿಎ ಪದವಿ ಮುಗಿಸಿ ನೌಕರಿ ದೊರೆಯದಿದ್ದಾಗ ಒಂದೇ ಆಕಳು ಸಾಕಿ ಹೈನುಗಾರಿಕೆ ಆರಂಭಿಸಿ ಹೊನ್ನಪ್ಪ ಅವರ ಹೊಲದಲ್ಲಿ ಇಂದು 20ಕ್ಕೂ ಅಧಿಕ ಎಚ್‌ಎಫ್‌ ತಳಿಯ ಹಸುಗಳು ಇವೆ.

ಪ್ರತಿ ದಿನ ಬೆಳಿಗ್ಗೆ 100 ಲೀಟರ್‌, ಸಂಜೆ 100 ಲೀಟರ್‌ ಹೀಗೆ ನಿತ್ಯ 200 ಲೀಟರ್‌ ಹಾಲು ಉತ್ಪಾದಿಸಿ ಗ್ರಾಮದಲ್ಲಿಯೇ ಅತಿ ಹೆಚ್ಚು ಹಾಲು ಉತ್ಪಾದಿಸುವ ರೈತ ಎನ್ನುವ ಹೆಗ್ಗಳಿಕೆ ಹೊಂದಿದ್ದಾರೆ. 2022-23ನೇ ಸಾಲಿನಲ್ಲಿ ಬೆಳಗಾವಿಯ ಕೆಎಂಎಫ್‌ ಕೊಡಮಾಡಿರುವ ಇಡೀ ಬೆಳಗಾವಿ ಜಿಲ್ಲೆಯಲ್ಲಿ ‘ಅತಿ ಹೆಚ್ಚು ಹಾಲು ಉತ್ಪಾದನೆ ಮಾಡಿರುವ ರೈತ’ ಎನ್ನುವ ಪ್ರಶಸ್ತಿಗೂ ಭಾಜನರಾಗಿದ್ದಾರೆ.


Spread the love

About Laxminews 24x7

Check Also

ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆ. 1ರಂದು 16ನೇ ಪದವಿ ಪ್ರದಾನ ಸಮಾರಂಭ

Spread the loveಬಾಗಲಕೋಟೆ: ನಗರದ ಬಸವೇಶ್ವರ ಇಂಜಿನಿಯರಿಂಗ್ ಕಾಲೇಜಿನ 2024–25ನೇ ಸಾಲಿನ ವಿದ್ಯಾರ್ಥಿಗಳಿಗಾಗಿ ೧೬ನೇ ಪದವಿ ಪ್ರದಾನ ಸಮಾರಂಭವನ್ನು ಆಗಸ್ಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ