Breaking News

ನಮ್ಮ ಸಂಸ್ಕøತಿ ನಮ್ಮ ಹೆಮ್ಮೆ ಶಾಸಕ ವಿಶ್ವಾಸ ವೈದ್ಯ

Spread the love

ಯರಗಟ್ಟಿ : ಸಮೀಪದ ಮುನವಳ್ಳಿ ಪಟ್ಟಣದಲ್ಲಿ ನಾಡಹಬ್ಬ ಮಹೋತ್ಸವದ ಅಂಗವಾಗಿ ಸಾಯಂಕಾಲ ಜರುಗಿದ ಡಾನ್ಸ್ ಮುನವಳ್ಳಿ ಡಾನ್ಸ್ ನೃತ್ಯ ಸ್ಪರ್ಧೆ, ಕಾಮಿಡಿ ಶೋ, ಲವ್ ಏ ರಿಯಾ ಚಲನಚಿತ್ರದ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆ ಸಮಾರಂಭದ ಉದ್ಘಾಟನೆಯನ್ನು ಶಾಸಕ ವಿಶ್ವಾಸ ವಸಂತ ವೈದ್ಯ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕಲಾವಿದರಲ್ಲಿರುವ ಪ್ರತಿಭೆ ಅನಾವರಣಗೊಳ್ಳಲು, ಸಾಧನೆ ಮಾಡಿದ ಸಾಧಕರನ್ನು ಪ್ರೋತ್ಸಾಹಿಸಲು ಇಂಥ ವೇದಿಕೆಗಳು ಅವಕಾಶ ಕಲ್ಪಿಸುತ್ತವೆ ಎಂದರು.

 

ಸಾನಿಧ್ಯವನ್ನು ಶ್ರೀ ಮುರುಘೆಂದ್ರ ಸ್ವಾಮೀಜಿಯವರು ವಹಿಸಿದ್ದರು. ಸವದತ್ತಿ ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ರವೀಂದ್ರ ಯಲಿಗಾರ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಂ.ಆರ್.ಗೋಪಶೆಟ್ಟಿ, ನಿಂಗನಗೌಡ ಮಲಗೌಡ್ರ, ಸೋಮಶೇಖರ ಯಲಿಗಾರ, ಸವದತ್ತಿ ಎ.ಪಿ.ಎಂ.ಸಿ. ಅಧ್ಯಕ್ಷ ಚಂದ್ರಶೇಖರ ಪೂಜೇರ(ಜಂಬ್ರಿ) ಸಿ.ಬಿ.ಬಾಳಿ, ಅಶೋಕಗೌಡ ಪಾಟೀಲ, ಡಿ.ಡಿ.ಟೋಪೋಜಿ, ವೀರಯ್ಯಶಾಸ್ತ್ರಿ ಹೊರಕೇರಿಮಠ, ವೀರೇಶ ಬ್ಯಾಹಟ್ಟಿ, ಪ್ರಕಾಶ ನಲವಡೆ, ನಾಗರಾಜ ಗೋಪಶೆಟ್ಟಿ, ಭವರಲಾಲ ಮೇವಾಡ, ಮಲ್ಲಿಕಾರ್ಜುನ ರಡ್ರಟ್ಟಿ, ಶಿವಾಜಿ ಎಸ್.ಮಾನೆ, ಸುರೇಶ ಜಾವೂರ, ಶ್ರೀಶೈಲ ಹಂಜಿ, ಕೇಶವ ಭಂಡಾರಿ, ಬಿ.ಬಿ.ನಾವಲಗಟ್ಟಿ, ಗುರುರಾಜ ಬೆಳವಲಗಿಡದ ಸೇರಿದಂತೆ ನಾಡಹಬ್ಬ ಉತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು ಇದ್ದರು. ರಘು ಆಚಾರ್ಯ ತಂಡದವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಜರುಗಿತು.


Spread the love

About Laxminews 24x7

Check Also

ಬಸವ‌ ಸಂಸ್ಕೃತಿ ಯಾತ್ರೆ ಹೆಸರಲ್ಲಿ ಸಮಾಜ ಒಡೆಯೋ ಕೆಲಸ ಮಾಡುತ್ತಿದ್ದಾರೆ

Spread the love ಬಸವ‌ ಸಂಸ್ಕೃತಿ ಯಾತ್ರೆ ಹೆಸರಲ್ಲಿ ಸಮಾಜ ಒಡೆಯೋ ಕೆಲಸ ಮಾಡುತ್ತಿದ್ದಾರೆ ಬಸವಣ್ಣನ ಹೆಸರಲ್ಲಿ ಕೆಲವರಿಂದ ಸಮಾಜ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ