Breaking News

ಬೆಂಗಳೂರಿನ 12 ಆರ್​​ಟಿಒ ಕಚೇರಿಗಳ ಮೇಲೆ ಲೋಕಾಯುಕ್ತರ ದಾಳಿ

Spread the love

ಬೆಂಗಳೂರು: ವ್ಯಾಪಕ ಭ್ರಷ್ಟಾಚಾರದ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ್ ಅವರ ನೇತೃತ್ವದ ತಂಡ ನಗರದಲ್ಲಿನ 12 ಪ್ರಾದೇಶಿಕ ಸಾರಿಗೆ ಕಚೇರಿಗಳ (ಆರ್​ಟಿಓ) ಮೇಲೆ ದಾಳಿ ನಡೆಸಿದೆ.

ಬೆಂಗಳೂರಿನಲ್ಲಿ ಆರ್​​ಟಿಓ ಕಚೇರಿಗಳಲ್ಲಿ ನಿರಂತರ ಅವ್ಯವಹಾರ ಹಾಗೂ ಅಕ್ರಮ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನೆಲೆ, ಗೌಪ್ಯ ಮಾಹಿತಿ ಆಧರಿಸಿ ಬುಧವಾರ ಖುದ್ದು ಲೋಕಾಯುಕ್ತ ನ್ಯಾಯಮೂರ್ತಿಗಳು ಆರ್​​ಟಿಓ ಕಚೇರಿಗಳಿಗೆ ತೆರಳಿ ಪರಿಶೀಲನೆ ನಡೆಸಿದರು.

ಜಯನಗರ ಹಾಗೂ ರಾಜಾಜಿನಗರದ ಆರ್​​ಟಿಓ ಕಚೇರಿಗಳಿಗೆ ಲೋಕಾಯುಕ್ತರು ತೆರಳಿ ತಪಾಸಣೆ‌ ನಡೆಸಿದರು.‌ ಉಪ ಲೋಕಾಯುಕ್ತ ಕೆ ಎನ್‌ ಫಣೀಂದ್ರ ಅವರು ಯಶವಂತಪುರ ಆರ್​​ಟಿಓ ಕಚೇರಿ ಮೇಲೆ ದಾಳಿ‌ ನಡೆಸಿ ಪರಿಶೀಲನೆ ನಡೆಸಿದರು.‌ ಜೊತೆಗೆ ಯಲಹಂಕ, ಇಂದಿರಾನಗರ, ಕೆ ಆರ್ ಪುರ, ಹೆಚ್​ಎಸ್​ಆರ್ ಲೇಔಟ್ ಸೇರಿ ನಗರದ 12 ಪ್ರಾದೇಶಿಕ ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.

ಪರಿಶೀಲನೆ ವೇಳೆ‌, ಅಧಿಕಾರಿಗಳು ಹಾಗೂ ಸಿಬ್ಬಂದಿ ವಾಹನದ ದಾಖಲಾತಿ ನೀಡದೇ ವಿಳಂಬ ಧೋರಣೆ, ಹೊಸ ನೋಂದಣಿ ಮಾಡಿಸದೇ ಬಾಕಿ ಉಳಿಸಿಕೊಂಡಿರುವುದು, ಸ್ಥಳೀಯ ಏಜೆಂಟರೊಂದಿಗೆ ಸಿಬ್ಬಂದಿ ಭಾಗಿಯಾಗಿ ಅವ್ಯವಹಾರದಲ್ಲಿ ಶಾಮೀಲು ಸೇರಿದಂತೆ ವಿವಿಧ ರೀತಿಯ ಅಕ್ರಮ ಎಸಗಿರುತ್ತಿರುವುದು ಕಂಡು ಬಂದಿದೆ ಎಂದು ಲೋಕಾಯುಕ್ತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿ ಮದುವೆ – ಲಾಡ್ಜ್‌ನಲ್ಲಿ ಹೆಂಡತಿಯನ್ನು ಉಸಿರುಗಟ್ಟಿಸಿ ಕೊಂದು ಗಂಡ ಪರಾರಿ

Spread the loveಚಿಕ್ಕಬಳ್ಳಾಪುರ: ಪತ್ನಿಯನ್ನು ಲಾಡ್ಜ್‌ಗೆ  ಕರೆದುಕೊಂಡು ಬಂದ ಪತಿ, ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ