ಬೈಕ್‌ನಲ್ಲಿ ಅವಿತುಕೊಂಡಿದ್ದ ಉರಗವನ್ನು ರಕ್ಷಣೆ ಮಾಡಿರುವ ಘಟನೆ ವಿಜಯಪುರ ನಗರ್ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ನಡೆದಿದೆ.
ಉರಗ ಪ್ರೇಮಿ ಉಮೇಶ ಎಂಬುವರು ಉರಗವನ್ನು ರಕ್ಷಣೆ ಮಾಡಿದರು. ಇನ್ನೂ ಜಿಲ್ಲಾಡಳಿತ ಕಚೇರಿಯ ಆವರಣದಲ್ಲಿ ನಿಲ್ಲಿಸಿದ ಬೈಕ್‌ನಲ್ಲಿ ಹಾವು ಅವಿತುಕೊಂಡಿತ್ತು. ತಕ್ಷಣವೇ ಬೈಕ್‌ನಲ್ಲಿದ ಹಾವನ್ನು ಉಮೇಶ ಹೊರಗಡೆಗೆ ಜಾಗೃತವಾಗಿ ತೆಗೆದಿದ್ದಾನೆ. ಅಲ್ಲದೇ, ಇದೇ ವೇಳೆಯಲ್ಲಿ
ಉರಗ ರಕ್ಷಕ ಉಮೇಶ ಹಾವನ್ನು ಖಾಲಿ ಡಬ್ಬದಲ್ಲಿ ತೆಗೆದುಕೊಂಡು ನಗರದ ಹೊರವಲಯದಲ್ಲಿರುವ ಪ್ರದೇಶದಲ್ಲಿ ಬಿಟ್ಟು ಬಂದಿದ್ದಾರೆ
ಇವರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
Laxmi News 24×7