Breaking News

ಎಪ್ಪತ್ತೊಂದನೆ ಗಣರಾಜ್ಯೋತ್ಸವದ ಪ್ರಯುಕ್ತ76 ಶೌರ್ಯ ಪದಕ

Spread the love

ನವದೆಹಲಿ, ಜ.25- ಎಪ್ಪತ್ತೊಂದನೆ ಗಣರಾಜ್ಯೋತ್ಸವದ ಪ್ರಯುಕ್ತ ಪೊಲೀಸ್ ಶೌರ್ಯ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, ಜಮ್ಮು-ಕಾಶ್ಮೀರದ 108 ಪೊಲೀಸರಿಗೆ ಶೌರ್ಯ ಪ್ರಶಸ್ತಿ ಲಭಿಸಿವೆ.  ಸಿಆರ್‌ಪಿಎಫ್‌ ಎರಡನೆ ಸ್ಥಾನದಲ್ಲಿದ್ದು, ಒಟ್ಟು 76 ಶೌರ್ಯ ಪದಕಗಳನ್ನು ಗಳಿಸಿವೆ.

ಕಾಶ್ಮೀರದ ಪೊಲೀಸರ ಪೈಕಿ ಮೂವರಿಗೆ ರಾಷ್ಟ್ರಪತಿ ಪೊಲೀಸ್ ಶೌರ್ಯ ಪದಕಗಳನ್ನು (ಪಿಪಿಎಂಜಿ) ನೀಡಲಾಗಿದೆ. ಇವರಲ್ಲಿ ಒಬ್ಬರಿಗೆ ಮರಣೋತ್ತರವಾಗಿ ಈ ಪದಕ ಘೋಷಿಸಲಾಗಿದೆ. ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿದ ಕಾಶ್ಮೀರ ಪೊಲೀಸರಿಗೆ ಈ ಪದಕಗಳು ಲಭಿಸಿವೆ

76 ಪದಕಗಳೊಂದಿಗೆ ಎರಡನೆ ಸ್ಥಾನದಲ್ಲಿರುವ ಸಿಆರ್‍ಪಿಎಫ್ ಕೂಡ ಭಯೋತ್ಪಾದನೆ ನಿಗ್ರಹದಲ್ಲಿ ಗಣನೀಯ ಕಾರ್ಯಾಚರಣೆ ನಡೆಸಿದೆ. ಛತ್ತೀಸ್‍ಗಢದ ಪೊಲೀಸರಿಗೆ ಒಟ್ಟು 33 ಶೌರ್ಯ ಪದಕಗಳನ್ನು ಘೋಷಿಸಲಾಗಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ