Breaking News

ಅರಸಾಳು ಬಳಿ ರೈಲ್ವೆ ಹಳಿ ಮೇಲೆ ಬಿದ್ದ ಮರ; ಮಾರ್ಗ ಮಧ್ಯೆ ನಿಂತ ತಾಳಗುಪ್ಪ-ಬೆಂಗಳೂರು ರೈಲು

Spread the love

ಶಿವಮೊಗ್ಗ: ಅರಸಾಳು ಬಳಿ ರೈಲ್ವೇ ವಿದ್ಯುತ್ ಲೈನ್ ಹಾಗೂ ಹಳಿ ಮೇಲೆ ಮರವೊಂದು ಮುರಿದು ಬಿದ್ದಿದೆ. ಇದರಿಂದ ತಾಳಗುಪ್ಪದಿಂದ ಬೆಂಗಳೂರಿಗೆ ತೆರಳುತ್ತಿದ್ದ ರೈಲು ಮಾರ್ಗ ಮಧ್ಯೆ ನಿಂತಿದೆ. ಇದರಿಂದಾಗಿ ಹಬ್ಬವನ್ನು ಮುಗಿಸಿ ಬೆಂಗಳೂರಿಗೆ ತೆರಳುತ್ತಿದ್ದ ನೂರಾರು ಪ್ರಯಾಣಿಕರು ತೀವ್ರ ಪರದಾಡುವಂತಾಗಿದೆ.

​ಬೆಳಿಗ್ಗೆ 5:20ಕ್ಕೆ ಸರಿಯಾಗಿ ತಾಳಗುಪ್ಪದಿಂದ ಹೊರಟಿದ್ದ ರೈಲು, ನಿಗದಿಯಂತೆ ಬೆಳಿಗ್ಗೆ 07 ಗಂಟೆಗೆ ಶಿವಮೊಗ್ಗ ಹಾಗೂ ಮಧ್ಯಾಹ್ನ 12 ಗಂಟೆಗೆ ಬೆಂಗಳೂರು ನಗರವನ್ನು ತಲುಪಬೇಕಾಗಿತ್ತು. ಆದರೆ, ಅರಸಾಳು ಬಳಿ ರೈಲ್ವೇ ವಿದ್ಯುತ್ ಲೈನ್ ಹಾಗೂ ಹಳಿ ಮೇಲೆ ಮರ ಬಿದ್ದಿದ್ದು, ವಿದ್ಯತ್‌ ಸಂಪರ್ಕ ಕಡಿತಗೊಂಡು ರೈಲು ಆನೆಕೆರೆ ಮತ್ತು ನೆವಟೂರು ಗ್ರಾಮಗಳ ಮಧ್ಯಭಾಗದಲ್ಲಿ ನಿಂತಿದೆ.

ರೈಲು ಮಧ್ಯದಲ್ಲಿ ನಿಂತಿದ್ದರಿಂದ ಹಬ್ಬಗಳ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದ ಜನರು, ರಜೆ ಮುಗಿಸಿ ಮತ್ತೆ ಬೆಂಗಳೂರಿನತ್ತ ಮುಖ ಮಾಡಿದ್ದರು. ರೈಲು ಹಠಾತ್ತಾಗಿ ಮಾರ್ಗಮಧ್ಯೆ ನಿಂತಿರುವ ಕಾರಣ, ಕಚೇರಿಗಳಿಗೆ ತೆರಳಬೇಕಿದ್ದ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ತೀವ್ರ ತೊಂದರೆಗೆ ಸಿಲುಕಿದ್ದಾರೆ. ನಿಗದಿತ ಸಮಯಕ್ಕೆ ತಲುಪಲಾಗದೆ ಪ್ರಯಾಣಿಕರು ಕಂಗಾಲಾಗಿದ್ದಾರೆ.

ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಹಾಗೂ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಳಿಯ ಮೇಲಿರುವ ಮರವನ್ನು ತೆರವುಗೊಳಿಸುವ ಕಾರ್ಯಾಚರಣೆ ಸಾಗುತ್ತಿದ್ದು, ಸಂಪೂರ್ಣವಾಗಿ ಮರ ತೆರವು ಮಾಡಲು ಇನ್ನೂ ಕನಿಷ್ಠ ಒಂದು ಗಂಟೆ ಕಾಲಾವಕಾಶ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಡೀಸೆಲ್‌ ಎಂಜಿನ್‌ ವ್ಯವಸ್ಥೆ
ರೈಲಿಗೆ ಡಿಸೇಲ್ ಎಂಜಿನ್ ವ್ಯವಸ್ಥೆ ಮಾಡಲಾಗಿದೆ. ಡಿಸೇಲ್ ಇಂಜಿನ್ ಮೂಲಕ ಕುಂಸಿಯ ವರೆಗೂ ರೈಲು ಬರಲಿದೆ. ಬಳಿಕ ವಿದ್ಯುತ್ ಸಂಪರ್ಕದಿಂದ ಪುನಃ ರೈಲು ಸಂಚಾರಿಸಲಿದೆ.


Spread the love

About Laxminews 24x7

Check Also

2 ವರ್ಷದಿಂದ ಆ ಹುಡುಗ ಜೈಲಲ್ಲಿದ್ದಾನೆ, KPSC, ನೈಸ್‌ ವಿಷಯ ಬಂದಾಗ ಮೊಬೈಲ್‌ ಸಿಕ್ಕಿದ್ದು ಹೇಗೆ? – ಡಿಕೆಶಿ ವಿರುದ್ಧ ಹೆಚ್‌ಡಿಕೆ ವಾಗ್ದಾಳಿ

Spread the loveಹಾಸನ: ಎರಡು ವರ್ಷದಿಂದ ಆ ಹುಡುಗ (ಪ್ರಜ್ವಲ್‌ ರೇವಣ್ಣ) ಜೈಲಲ್ಲಿದ್ದಾನೆ. ಬಿಡದಿ, ಕೆಪಿಎಸ್‌ಸಿ , ನೈಸ್ ವಿಷಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ