Breaking News

Daily Archives: ನವೆಂಬರ್ 5, 2026

ನ.10 ರೊಳಗೆ‌ ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿ: ಪಡಿತರ ಚೀಟಿದಾರರಿಗೆ ಸೂಚನೆ

ಬೆಂಗಳೂರು: ಪಡಿತರ ಚೀಟಿದಾರರು ಇ-ಕೆವೈಸಿ (e-KYC) ಮಾಡಿಸಲು ನವೆಂಬರ್ 10 ಕೊನೆಯ ದಿನವಾಗಿದ್ದು, ಬಾಕಿ ಇರುವ ಪಡಿತರ ಚೀಟಿದಾರರು ಕೊನೆಯ ದಿನಾಂಕದೊಳಗೆ ತಪ್ಪದೇ ಇ-ಕೆವೈಸಿ ಮಾಡಿಸಬೇಕೆಂದು ಆಹಾರ, ನಾಗರಿಕ ಪೂರೈಕೆ ಹಾಗೂ ಗ್ರಾಹಕ‌ ವ್ಯವಹಾರಗಳ ಇಲಾಖೆ ತಿಳಿಸಿದೆ.‌ 2,67,64,276 ಪಡಿತರ ಚೀಟಿ ಫಲಾನುಭವಿಗಳು ರಾಜ್ಯದಲ್ಲಿ ಮರು ಇ-ಕೆವೈಸಿ ಮಾಡಿಸಬೇಕಿತ್ತು. ಅವರ ಪೈಕಿ ನವೆಂಬರ್ 3 ರವರೆಗೆ 2,26,30,747 ಫಲಾನುಭವಿಗಳು ಇ-ಕೆವೈಸಿ ಮಾಡಿಸಿದ್ದಾರೆ‌. ಇನ್ನೂ 41,33,529 ಫಲಾನುಭವಿಗಳು ಇ-ಕೆವೈಸಿ ಮಾಡಿಸಬೇಕಿದೆ.‌ ನ.10 …

Read More »

ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪ ಕೇಸ್‌ – ‘ಕೈ’ ನಾಯಕರಿಗೆ ಹೈಕೋರ್ಟ್‌ ಬಿಗ್‌ ರಿಲೀಫ್‌

ಬೆಂಗಳೂರು: ಬಿಜೆಪಿ ಸರ್ಕಾರದ ವಿರುದ್ಧ 40% ಕಮಿಷನ್‌ ಆರೋಪ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕರಿಗೆ ಹೈಕೋರ್ಟ್‌ ಬಿಗ್‌ ರಿಲೀಫ್‌ ಕೊಟ್ಟಿದೆ. ಬಿಜೆಪಿ ಸರ್ಕಾರ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣವನ್ನು ಹೈಕೋರ್ಟ್‌ ರದ್ದು ಮಾಡಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದೆ. ಕೆಪಿಸಿಸಿ ಸಲ್ಲಿಸಿದ್ದ ಅರ್ಜಿಗೂ ಹೈಕೋರ್ಟ್ ಅಸ್ತು ಎಂದಿದೆ. ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಜಾಹೀರಾತು ಪ್ರಕಟಿಸಿತ್ತು. ಬಿಜೆಪಿ ಸರ್ಕಾರವನ್ನು ಶೇ.40 ಕಮಿಷನ್ …

Read More »

ಟ್ರಂಪ್‌ಗೆ ಯುದ್ಧಭೂಮಿಯಲ್ಲಿ ವ್ಯೂಹಾತ್ಮಕ ಸೋಲು, ಚುನಾವಣೆಯಲ್ಲಿ ರಾಜಕೀಯ ಸೋಲು: ಇರಾನ್‌ ಟಕ್ಕರ್‌

ಟೆಹ್ರಾನ್: ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್‌ಗೆ ರಾಜಕೀಯ ಸೋಲಾಗಿದೆ ಎಂದು ಇರಾನ್‌ ಟಾಂಗ್‌ ಕೊಟ್ಟಿದೆ. 2026ರ ಮಧ್ಯಂತರ ಚುನಾವಣೆಗಳಲ್ಲಿ ಡೆಮಾಕ್ರಟಿಕ್ ಪಕ್ಷವು ಐತಿಹಾಸಿಕ ‘ನೀಲಿ ಅಲೆ’ಯ (blue wave) ಮೂಲಕ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್ ಎರಡರ ಮೇಲೂ ನಿಯಂತ್ರಣ ಸಾಧಿಸಿದೆ. ಟ್ರಂಪ್‌ಗೆ ಯುದ್ಧಭೂಮಿಯಲ್ಲಿ ಇರಾನ್ ‘ವ್ಯೂಹಾತ್ಮಕ ಸೋಲು’ ನೀಡಿದೆ. ಹಾಗೆಯೇ, ಅಮೆರಿಕದಲ್ಲಿ ರಾಜಕೀಯ ಸೋಲು ಉಂಟುಮಾಡಿದೆ ಎಂದು ಇರಾನ್‌ನ ಭದ್ರತಾ ಮುಖ್ಯಸ್ಥ ಮೊಹ್ಸೆನ್ ರೆಜಾಯಿ ಚಾಟಿ …

Read More »

ತುಪ್ಪ, ಬೆಣ್ಣೆ, ಪನ್ನೀರ್‌ ಹೊಸ ದರ ಇಂದಿನಿಂದಲೇ ಜಾರಿ – ನಂದಿನಿ ಉತ್ಪನ್ನಗಳ ಪರಿಷ್ಕೃತ ದರ ಪ್ರಕಟ

ಬೆಂಗಳೂರು: ನಂದಿನಿ ಉತ್ಪನ್ನಗಳ ಪರಿಷ್ಕೃತ ದರ ಪಟ್ಟಿಯನ್ನು ಬೆಂಗಳೂರು ಹಾಲು ಒಕ್ಕೂಟ ಪ್ರಕಟಿಸಿದೆ. ಇಂದಿನಿಂದಲೇ ತುಪ್ಪ, ಬೆಣ್ಣೆ, ಪನ್ನೀರ್‌ ಹೊಸ ದರ ಜಾರಿಗೆ ಬರಲಿದೆ. ಹಾಲು, ಮೊಸರಾಯ್ತು ಈಗ ಗ್ರಾಹಕರಿಗೆ ನಂದಿನಿ ಉತ್ಪನ್ನಗಳ ದರ ಬದಲಾವಣೆಯ ಬಿಸಿ ತಟ್ಟಿದೆ. ತುಪ್ಪದ ವಿವಿಧ ಪ್ಯಾಕ್‌ಗಳ ಪರಿಷ್ಕೃತ ದರವನ್ನು ಬೆಂಗಳೂರು ಹಾಲು ಒಕ್ಕೂಟ ಪ್ರಕಟಿಸಿದೆ. ಉತ್ಪನ್ನ : ಪ್ಯಾಕ್ : ಹೊಸ ದರ * ತುಪ್ಪ : 200 ಮಿ.ಲೀ : 95 …

Read More »

ತಿಂಗಳ ಬಸ್‌ಪಾಸ್‌ ದರ ಬರೋಬ್ಬರಿ 300 ರೂ. ಏರಿಕೆ

ಬೆಂಗಳೂರು: ಹಾಲು-ಮೊಸರಿನ ಬೆಲೆ ಏರಿಕೆ ಆಘಾತ ಬೆನ್ನಲ್ಲೇ ರಾಜ್ಯದ ಜನತೆಗೆ ಸರ್ಕಾರ ಬಸ್ ಟಿಕೆಟ್ ಶಾಕ್ ಕೊಟ್ಟಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಪ್ರಯಾಣ ದರ ಗಣನೀಯವಾಗಿ ಹೆಚ್ಚಳ ಮಾಡಲಾಗಿದೆ. ಬಸ್‌ ಟಿಕೆಟ್‌ ದರ ಏರಿಕೆ ಬೆನ್ನಲ್ಲೇ ಮಾಸಿಕ ಬಸ್‌ಪಾಸ್‌ ದರಗಳೂ ಏರಿಕೆಯಾಗಿದೆ. ತಿಂಗಳ ಪಾಸ್‌ಗೆ ಬರೋಬ್ಬರಿ 300 ರೂ. ನಷ್ಟು ಏರಿಕೆ ಮಾಡಲಾಗಿದೆ. 1,200 ರೂ. ಇದ್ದ ತಿಂಗಳ ಪಾಸ್‌ ದರ 1,500 ರೂ.ಗೆ ಹೆಚ್ಚಳ ಮಾಡಲಾಗಿದೆ. ತಿಂಗಳ ವೋಲ್ವೋ …

Read More »

ಬೆಳಗ್ಗೆಯೇ ಮದ್ಯದ ಅಮಲಿನಲ್ಲಿರುವ ಮುಖ್ಯಮಂತ್ರಿಯಿಂದ ಪಂಜಾಬ್ ಅನ್ನು ಡ್ರಗ್ಸ್‌ಮುಕ್ತ ಮಾಡಲು ಸಾಧ್ಯವೇ? – ರಾಹುಲ್‌ ವಾಗ್ದಾಳಿ

ಚಂಡೀಗಢ: ಬೆಳಗ್ಗೆಯ ಮದ್ಯದ ಅಮಲಿನಲ್ಲಿರುವ ಪಂಜಾಬ್‌ ಮುಖ್ಯಮಂತ್ರಿಯಿಂದ ಡ್ರಗ್ಸ್‌ಮುಕ್ತ ಮಾಡಲು ಸಾಧ್ಯವೇ ಎಂದು ಪ್ರಶ್ನಿಸುವ ಮೂಲಕ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಆಪ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯವು ಮಾದಕದ್ರವ್ಯದ ಸಮಸ್ಯೆಯಿಂದ ತತ್ತರಿಸುತ್ತಿರುವಾಗ, ಮುಖ್ಯಮಂತ್ರಿ ಭಗವಂತ್ ಮಾನ್ ಸ್ವತಃ ಮದ್ಯಪಾನ ಮಾಡಿ ಪ್ರತಿ ಸಂಜೆಯೂ ಅದರ ಅಮಲಿನಲ್ಲಿರುತ್ತಾರೆ ಎಂದು ಅವರು ಆರೋಪ ಮಾಡಿದರು. ಪಂಜಾಬ್‌ ವಿಧಾನಸಭೆ ಚುನಾವಣೆಯಲ್ಲಿ  ಸಂಗ್ರೂರ್‌ನಲ್ಲಿ ನಡೆದ ‘ಇನ್ಸಾಫ್ ರ್‍ಯಾಲಿ’ಯಲ್ಲಿ ಪ್ರಚಾರ ಭಾಷಣ ಮಾಡಿದ …

Read More »

ವಿಶ್ವಾದ್ಯಂತ 50 ಸಾವಿರ ಥಿಯೇಟರ್‌ಗಳಲ್ಲಿ ರಾಮಾಯಣ ರಿಲೀಸ್‌ – ರಾವಣನಾಗಿ ಅಬ್ಬರಿಸಿದ ಯಶ್‌

ಜಗತ್ತಿನಾದ್ಯಂತ ಬಹುನಿರೀಕ್ಷೆ ಹುಟ್ಟುಹಾಕಿದ್ದ ಭಾರತೀಯ ಚಿತ್ರರಂಗದ ಮಹೋನ್ನತ ಸಿನಿಮಾ ರಾಮಾಯಣ ಇಂದು ಅದ್ಧೂರಿಯಾಗಿ ತೆರೆಕಂಡಿದೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ಬಾಲಿವುಡ್ ನಟ ರಣಬೀರ್ ಕಪೂರ್ ಕಾಂಬಿನೇಷನ್‌ನ ಈ ಪೌರಾಣಿಕ ಮಹಾಕಾವ್ಯವು ಮೊದಲ ದಿನವೇ ಗಲ್ಲಾಪೆಟ್ಟಿಗೆಯಲ್ಲಿ ಹೊಸ ಇತಿಹಾಸ ಸೃಷ್ಟಿಸುವ ಸೂಚನೆ ನೀಡಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ಪ್ರಭು ಶ್ರೀರಾಮನ ಪಾತ್ರದಲ್ಲಿ ಕಂಗೊಳಿಸಿದ್ದರೆ, ಸೀತೆಯಾಗಿ ಸಾಯಿಪಲ್ಲವಿ(Sai Pallavi) ಮನಮುಟ್ಟುವಂತೆ ಅಭಿನಯಿಸಿದ್ದಾರೆ. ಇನ್ನು ಲಂಕೇಶ್ವರ ರಾವಣನ ಖಡಕ್ ಅವತಾರದಲ್ಲಿ ಕಾಣಿಸಿಕೊಂಡಿರುವ ನಟ …

Read More »

ಪ್ರತಿ ಟನ್ ಕಬ್ಬಿಗೆ 3,600 ರೂ. ದರ ಘೋಷಣೆ

ಬೆಳಗಾವಿ: ಕಳೆದ ಹಲವು ದಿನಗಳಿಂದ ಕಬ್ಬಿನ ದರನಿಗದಿಗಾಗಿ ರೈತರು ನಡೆಸುತ್ತಿದ್ದ ಹೋರಾಟಕ್ಕೆ ಕೊನೆಗೂ ಮಹತ್ವದ ತಿರುವು ಸಿಕ್ಕಿದೆ. ಪ್ರತಿ ಟನ್ ಕಬ್ಬಿಗೆ 3,600 ರೂಪಾಯಿ ದರ ನೀಡಲು ಸಕ್ಕರೆ ಕಾರ್ಖಾನೆ ಮಾಲೀಕರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ  ಘೋಷಿಸಿದ್ದಾರೆ. ಬೆಳಗಾವಿಯಲ್ಲಿ (Belagavi) ರೈತ ಮುಖಂಡರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ನಡೆಸಿದ ಮಹತ್ವದ ಸಭೆಯ ಬಳಿಕ ಸಚಿವರು ಈ ಘೋಷಣೆ ಮಾಡಿದ್ದಾರೆ. ಹಲವು ಸುತ್ತಿನ …

Read More »

ಅರಮನೆ ಖಾಸಗಿ ಸ್ವತ್ತು, ಸರ್ಕಾರದ ಔದಾರ್ಯದಿಂದ ವಾಸವಿಲ್ಲ: ಪ್ರಮೋದಾ ದೇವಿ ಒಡೆಯರ್ ಸ್ಪಷ್ಟನೆ

ಮೈಸೂರು ಅರಮನೆಯ ಮಾಲೀಕತ್ವ, ಅಂಬಾರಿಯ ಬಳಕೆ ಮತ್ತು ದಸರಾ ಸಂದರ್ಭದಲ್ಲಿ ಉಂಟಾದ ಗೊಂದಲಗಳ ಬಗ್ಗೆ ಪ್ರಮೋದಾ ದೇವಿ ಒಡೆಯರ್ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಅರಮನೆ ವಿಚಾರದಲ್ಲಿ ತಮ್ಮ ಕುಟುಂಬದ ಹಕ್ಕುಗಳನ್ನು ಪ್ರತಿಪಾದಿಸಿರುವ ಅವರು, ಅಂಬಾರಿ ಬಳಕೆಗೆ ಸಂಬಂಧಿಸಿದಂತೆ ಸರ್ಕಾರದೊಂದಿಗೆ ಇರುವ ಭಿನ್ನಾಭಿಪ್ರಾಯಗಳ ಬಗ್ಗೆಯೂ ಮಾತನಾಡಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರಮೋದಾ ದೇವಿ ಒಡೆಯರ್, ಮೈಸೂರು ಅರಮನೆ ಖಾಸಗಿ ಸ್ವತ್ತು. ಅರಮನೆ ಕಟ್ಟಿಸಿದ್ದು ಸರ್ಕಾರವಲ್ಲ. ಸರ್ಕಾರದ ಔದಾರ್ಯದಿಂದ ನಾವು ಅರಮನೆಯಲ್ಲಿ ವಾಸಿಸುತ್ತಿಲ್ಲ. …

Read More »

ಹಾಸನಾಂಬೆ ದರ್ಶನಕ್ಕೆ ತಾತ್ಕಾಲಿಕ ಬ್ರೇಕ್

ಹಾಸನ ಅಧಿದೇವತೆ ಹಾಸನಾಂಬೆ ದರ್ಶನೋತ್ಸವ ನಡೆಯುತ್ತಿದ್ದು, ರಾಜ್ಯ, ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಿದ್ದಾರೆ. ಪ್ರತಿ ದಿನ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಆಗಮಿಸಿ ಹಾಸನಾಂಬೆ ತಾಯಿ ದರ್ಶನ ಪಡೆಯುತ್ತಿದ್ದಾರೆ. ಈ ನಡುವೆ ಹಾಸನಾಂಬೆ ದರ್ಶನಕ್ಕೆ ತಾತ್ಕಾಲಿಕ ಬ್ರೇಕ್ ನೀಡಲಾಗಿದೆ. ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬಾ ತಾಯಿ ದರ್ಶನೋತ್ಸವ ನಡೆಯುತ್ತಿದ್ದು, ಅಕ್ಟೋಬರ್ 30 ರಿಂದ ಆರಂಭವಾಗಿದ್ದು, ನವೆಂಬರ್ 10ರವರೆಗೆ ನಡೆಯಲಿದೆ. ಈ ನಡುವೆ ಇಂದು ರಾತ್ರಿಯಿಂದ ನಾಳೆ ಬೆಳಿಗ್ಗೆವರೆಗೆ ದರ್ಶನವನ್ನು …

Read More »