Breaking News

Daily Archives: ಅಕ್ಟೋಬರ್ 30, 2026

ಕರ್ನಾಟಕದಲ್ಲಿ SIR ಪ್ರಕ್ರಿಯೆ ಸಮರ್ಪಕವಾಗಿ ನಡೆದಿದೆ: ಸತೀಶ್ ಜಾರಕಿಹೊಳಿ

ಬೆಂಗಳೂರು: ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ಸಮರ್ಪಕವಾಗಿ ನಡೆದಿದೆ, ಇತರ ರಾಜ್ಯಗಳಲ್ಲಿಯೂ ಇದೇ ರೀತಿಯಲ್ಲಿ ಆಗಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ  ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ಸಮರ್ಪಕವಾಗಿ ನಡೆದಿದೆ. ಆದರೆ ನಮ್ಮ ಆಕ್ಷೇಪ ಇರೋದು ಬೇರೆ ರಾಜ್ಯಗಳ ಬಗ್ಗೆ. ಇತರ ರಾಜ್ಯಗಳಲ್ಲಿಯೂ ಇದೇ ರೀತಿಯಲ್ಲಿ ಪ್ರಕ್ರಿಯೆ ನಡೆಯಬೇಕು ಎಂಬುದು ನಮ್ಮ ಆಶಯ ಎಂದಿದ್ದಾರೆ. ಶಿಫ್ಟ್ ಆಗಿದ್ದವರು ಇದ್ದಾರೆ, ಸತ್ತವರು ಇದ್ದಾರೆ. ಎರಡು ಹೆಸರು ಇದ್ದವರು ಇದ್ದಾರೆ. …

Read More »

ಫುಟ್‌ಪಾತ್‌ ಮೇಲೆ ವಾಹನ ಚಲಾಯಿಸುವ ಮುನ್ನ ಎಚ್ಚರ – ರೂಲ್ಸ್‌ ಬ್ರೇಕ್‌ ಮಾಡಿದ್ರೆ 500 ಅಲ್ಲ, 5 ಸಾವಿರ ದಂಡ

ಬೆಂಗಳೂರು: ಫುಟ್‌ಪಾತ್‌ಗಳ ಮೇಲೆ ವಾಹನಗಳನ್ನ ಚಲಾಯಿಸುವವರಿಗೆ ಬ್ರೇಕ್‌ ಹಾಕಲು 500 ರೂ. ಇದ್ದ ದಂಡವನ್ನು 5000 ರೂ.ಗೆ ಹೆಚ್ಚಿಸಲು ಇಲಾಖೆ ಮುಂದಾಗಿದೆ ಎಂದು ಸಾರಿಗೆ ಸಚಿವ ಭೈರತಿ ಸುರೇಶ್‌  ತಿಳಿಸಿದ್ದಾರೆ. ರಸ್ತೆ ನಿಯಮಗಳನ್ನು ಕಠಿಣಗೊಳಿಸುವುದರ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವಿಚಾರದ ಕುರಿತು ಸಾರಿಗೆ ಇಲಾಖೆ ಮತ್ತು ಗೃಹ ಇಲಾಖೆ ಸೇರಿ ಚರ್ಚೆ ಮಾಡಿದ್ದೇವೆ. ಎಲ್ಲರೂ ಸೇರಿ ಒಮ್ಮತದ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ. ಜನಗಳು ಓಡಾಡುವ ಫುಟ್‌ಪಾತ್‌ ಮೇಲೆ ದ್ವಿಚಕ್ರ …

Read More »

MLC ಚುನಾವಣೆ ಸೋತಿದ್ದಕ್ಕೆ ಸಿಎಂ ಹಾಲಿನ ದರ ಏರಿಕೆ ನಿರ್ಧಾರ ಮಾಡಿದಂತೆ ಕಾಣಿಸ್ತಿದೆ – ವಿಜಯೇಂದ್ರ

ಹಾಸನ: ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಕಾಂಗ್ರೆಸ್‌ಗೆ ಮರ್ಮಾಘಾತವಾಗಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಸೋತಿರುವ ಪರಿಣಾಮವಾಗಿ ರಾಜ್ಯದ ಮುಖ್ಯಮಂತ್ರಿಗಳು ಹಾಲಿನ ದರ ಎಂಟು ರೂ. ಏರಿಕೆ ನಿರ್ಧಾರ ಮಾಡಿದಂತೆ ಕಾಣುತ್ತಿದೆ ಎಂದು ಬಿಜೆಪಿ  ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ  ಹೇಳಿದ್ದಾರೆ. ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿನ ದಿಂಡಿಘಟ್ಟ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಚುನಾವಣೆ ಫಲಿತಾಂಶ ಕಾಂಗ್ರೆಸ್‌ಗೆ ಮರ್ಮಾಘಾತವಾಗಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಸೋತಿರುವ ಪರಿಣಾಮವಾಗಿ ರಾಜ್ಯದ ಮುಖ್ಯಮಂತ್ರಿಗಳು ಹಾಲಿನ ದರ ಎಂಟು …

Read More »

ಸ್ಟಿಂಗ್‌ ಆಪರೇಷನ್‌ ಕೇಸ್‌ ಮುಚ್ಚಿಹಾಕಿ ಅಂತಾ ಕಾಂಗ್ರೆಸ್‌ ಹೈಕಮಾಂಡ್‌ ಸಿಎಂಗೆ ಹೇಳಿದೆ: ಆರ್‌. ಅಶೋಕ್‌

ಬೆಂಗಳೂರು: ಸಿದ್ರಾಮಯ್ಯ ಸ್ಟಿಂಗ್‌ ಆಪರೇಷನ್‌ ಕೇಸನ್ನ ಮುಚ್ಚಹಾಕಿ ಅಂತಾ ಕಾಂಗ್ರೆಸ್‌ ಹೈಕಮಾಂಡ್‌ ಮುಖ್ಯಮಂತ್ರಿಗಳಿಗೆ ಹೇಳಿದೆ. ಅದರಂತೆ ಕೇಸ್‌ ಮುಚ್ಚಿಹಾಕುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.‌ ಅಶೋಕ್‌ ಆರೋಪಿಸಿದ್ದಾರೆ. ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್‌ ಕೇಸಲ್ಲಿ ಸಿದ್ದರಾಮಯ್ಯಗೆ ಸಿಸಿಬಿ ಕ್ಲೀನ್ ಚಿಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಇದನ್ನ ಮುಚ್ಚಿ ಹಾಕಿ ಅಂತಾ ಹೇಳಿದ್ದಾರೆ. ಅದರಂತೆ ಮುಚ್ಚಿಹಾಕ್ತಿದ್ದಾರೆ, ಪೊಲೀಸರು ಕೂಡ ರಿಯಾಲಿಟಿ ಮುಚ್ಚಿಹಾಕ್ತಿದ್ದಾರೆ. 2012ರಲ್ಲಿ ಮಾಡಿದ ವಿಡಿಯೋ ಅಂತ …

Read More »

ಎಲ್‌ಎಸಿ ಗಡಿ ಉಲ್ಲಂಘನೆ ಹೊಸದೇನಲ್ಲ – ಅರುಣಾಚಲ ಸಿಎಂ ಪೆಮಾ ಖಂಡು

ಇಟಾನಗರ: ಅರುಣಾಚಲ ಪ್ರದೇಶದ ವಾಸ್ತವ ನಿಯಂತ್ರಣ ರೇಖೆ ಬಳಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ನಡೆಯುತ್ತಿರುವ ಶೀಥಲ ಸಮರದ ಕುರಿತು ಅರುಣಾಚಲ ಪ್ರದೇಶದ ಸಿಎಂ ಪೆಮಾ ಖಂಡು  ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಗಡಿಯಲ್ಲಿ ಉಲ್ಲಂಘನೆಗಳು ನಡೆಯುತ್ತಿರುವುದು ಹೊಸದೇನಲ್ಲ. ಆದ್ರೆ ಪ್ರಸ್ತುತ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದೆ ಎಂದು ಹೇಳಿದ್ದಾರೆ. ಇಲ್ಲಿನ ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಸಮಾವೇಶದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೀನಾ ಮೆಕ್‌ಮೋಹನ್‌ ರೇಖೆಯನ್ನು ಮಾನ್ಯ ಮಾಡುವುದಿಲ್ಲ. ಹೀಗಾಗಿ …

Read More »

ಹಾಲಿನ ದರ ಆಯ್ತು ಶೀಘ್ರವೇ ಬಸ್‌ ದರ ಏರಿಕೆ – ಎಷ್ಟು ಏರಿಕೆಯಾಗಬಹುದು?

ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗಷ್ಟೇ ಹಾಲಿನ ದರ ಹೆಚ್ಚಳವಾಗಿ ಸಾಮಾನ್ಯ ಜನರ ಜೇಬಿಗೆ ಕತ್ತರಿ ಬಿದ್ದ ಬೆನ್ನಲ್ಲೇ, ಇದೀಗ ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಏರಿಕೆಯ ಬಿಸಿ ತಟ್ಟಲು ಸಜ್ಜಾಗಿದೆ. ನವೆಂಬರ್ ಮೊದಲ ವಾರದಲ್ಲೇ ಸಾರಿಗೆ ಇಲಾಖೆ ಪ್ರಯಾಣ ದರ ಪರಿಷ್ಕರಣೆ ಮಾಡುವ ಸಾಧ್ಯತೆ ದಟ್ಟವಾಗಿದೆ. ನವೆಂಬರ್ 3 ರಂದು ಸಾರಿಗೆ ಸಚಿವರು ಮತ್ತು ಅಧಿಕಾರಿಗಳ ನಡುವೆ ನಿರ್ಣಾಯಕ ಸಭೆ ನಡೆಯಲಿದ್ದು, ನವೆಂಬರ್ 4 ರಂದು ಹೊಸ ದರ ಜಾರಿಯ …

Read More »

ಸೌಜನ್ಯಳ ತಾಯಿ ಕುಸುಮಾವತಿ, ಯಾವುದೇ ಅನುಮಾನವಿಲ್ಲ: ಸುಧೀರ್‌ ಕುಮಾರ್‌ ರೆಡ್ಡಿ

ಮಂಗಳೂರು: ಕುಸುಮಾವತಿ ಅವರು ಸೌಜನ್ಯಳ ತಾಯಿಯೇ ಅಲ್ಲವೇ ಎಂಬ ಬಗ್ಗೆ ನಮಗೆ ಯಾವುದೇ ರೀತಿಯ ಅನುಮಾನಗಳಿಲ್ಲ ಎಂದು ವಿಶೇಷ ತನಿಖಾ ತಂಡ ತಂಡದ ಹಿರಿಯ ಅಧಿಕಾರಿ ಹಾಗೂ ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಧರ್ಮಸ್ಥಳದ ಗ್ರಾಮಸ್ಥ ಕಿಶೋರ್ ಎಂಬುವವರು ಕುಸುಮಾವತಿ ಅವರು ಸೌಜನ್ಯಳ ನಿಜವಾದ ತಾಯಿಯೇ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಎಸ್‌ಐಟಿಗೆ ದೂರು ಸಲ್ಲಿಸಿದ್ದರು. ದೂರು ಹಾಗೂ ಈ ಕುರಿತು ಪ್ರಕಟವಾದ ಮಾಧ್ಯಮ ವರದಿಗಳಿಗೆ …

Read More »

25 ವರ್ಷಗಳಿಂದ ಹಿರಿಯರ ಬಾಳಿಗೆ ಆಸರೆಯಾದ ‘ಘರಕುಲ’: ಬೆಳ್ಳಿ ಹಬ್ಬದ ಸಂಭ್ರಮ: ಬೆನಕನಹಳ್ಳಿಯ ಆಶ್ರಮದಲ್ಲಿ ಕಾರ್ಯಕ್ರಮ

ಬೆಳಗಾವಿ: ವಯೋವೃದ್ಧರ ಬದುಕಿನ ಸಂಧ್ಯಾಕಾಲಕ್ಕೆ ಪ್ರೀತಿ, ಕಾಳಜಿ, ಸುರಕ್ಷತೆ ಹಾಗೂ ನೆಮ್ಮದಿಯ ಆಸರೆಯಾಗಿರುವ ಬೆಳಗಾವಿಯ ಸ್ವಾಮಿಛಾಯಾ ಪ್ರತಿಷ್ಠಾನ ಸಂಚಾಲಿತ ‘ಘರಕುಲ’ ವೃದ್ಧಾಶ್ರಮವು 25 ವರ್ಷಗಳ ಸೇವಾ ಪಯಣವನ್ನು ಪೂರೈಸಿದ್ದು, ನವೆಂಬರ್ 3ರಂದು ರಜತ ಮಹೋತ್ಸವ (ಬೆಳ್ಳಿ ಹಬ್ಬ) ಆಚರಿಸಿಕೊಳ್ಳಲಿದೆ.ಅಂದು ಬೆಳಗ್ಗೆ 10 ಗಂಟೆಗೆ ಬೆಳಗಾವಿಯ ಬೆನಕನಹಳ್ಳಿಯಲ್ಲಿರುವ ಆಶ್ರಮದ ಆವರಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಹಲವು ಗಣ್ಯರು ಭಾಗವಹಿಸಲಿದ್ದಾರೆ. ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಅನಿಲ ಪೋತದಾರ ಹಾಗೂ ಪ್ರಮುಖರು ಈ ಕುರಿತು …

Read More »

ಬಿಮ್ಸ್‌ನಲ್ಲಿ ಅವಧಿ ಮೀರಿದ ಔಷಧಿಗಳು: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಉಪ ಲೋಕಾಯುಕ್ತರ ಸೂಚನೆ

ಬೆಳಗಾವಿ:  ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಗುರುವಾರ (ಅ.29) ಬೆಳಗಾವಿಯ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಅನೀರಿಕ್ಷಿತ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಿದರು. ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿನ ನೋಂದಣಿ‌ ಕೌಂಟರ, ಶುದ್ಧ ಕುಡಿಯುವ ನೀರು, ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳ ಮಾಹಿತಿ ಪಡೆದು, ಆಸ್ಪತ್ರೆಯ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ತದನಂತರ ಒಳ ರೋಗಿಗಳ ವಿಭಾಗ, ತೀವ್ರ ನಿಗಾ ಘಟಕ, ಪ್ರಸೂತಿ ವಿಭಾಗ,ಸೇರಿದಂತೆ ವಿವಿಧ‌ …

Read More »

ಬೆಳಗಾವಿಯಲ್ಲಿ ಸ್ಕೂಟರ್‌ನಿಂದ ಬಿದ್ದ ವೃದ್ಧನ ತಲೆ ಮೇಲೆ ಹರಿದ ಬಸ್

 ಬೆಳಗಾವಿ: ಸ್ಕೂಟರ್ ಸ್ಕಿಡ್ ಆಗಿ ರಸ್ತೆಗೆ ಬಿದ್ದ ವೃದ್ಧನ ತಲೆಗೆ ಹಿಂಬದಿಯಿಂದ ಬಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ವೃದ್ಧ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಗುರುವಾರ ಮೂಡಲಗಿ ತಾಲೂಕಿನ ಶಿವಾಪೂರ ಗ್ರಾಮದ ಬಳಿ ಸಂಭವಿಸಿದೆ. ಮೃತರನ್ನು ಹಳ್ಳೂರ ಗ್ರಾಮದ ನಿವಾಸಿ ಕೆಂಪಣ್ಣ ಕೌಜಲಗಿ (80) ಎಂದು ಗುರುತಿಸಲಾಗಿದೆ. ಕೆಂಪಣ್ಣ ಕೌಜಲಗಿ ಅವರು ಮೂಡಲಗಿ ಪಟ್ಟಣದಿಂದ ಶಿವಾಪೂರ ಮಾರ್ಗವಾಗಿ ತಮ್ಮ ಗ್ರಾಮವಾದ ಹಳ್ಳೂರಕ್ಕೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಶಿವಾಪೂರ ಗ್ರಾಮದ ಬಳಿ …

Read More »