ಬೆಳಗಾವಿ: ಜಪಾನ್ನಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಎತ್ತಿಹಿಡಿದು, ಪುರುಷರ 100 ಮೀಟರ್ ಬ್ರೆಸ್ಟ್ಸ್ಟ್ರೋಕ್ SB9 ಈಜು ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿರುವ ಬೆಳಗಾವಿ ತಾಲೂಕಿನ ಮುತಗಾ ಗ್ರಾಮದ ಸ್ವಾತಿಕ್ ಪಾಟೀಲ್ ಅವರಿಗೆ ಮಾಜಿ ಸಚಿವೆ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅಭಿನಂದನೆ ಸಲ್ಲಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅದ್ಭುತ ಪ್ರದರ್ಶನ ನೀಡಿ ಪದಕ ಗೆಲ್ಲುವ ಮೂಲಕ ಸ್ವಾತಿಕ್ ಪಾಟೀಲ್ ಅವರು ನಾಡಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅವರ …
Read More »Daily Archives: ಅಕ್ಟೋಬರ್ 24, 2026
ಕಿತ್ತೂರು ಉತ್ಸವ-2026: ಜಲ ಕ್ರೀಡೆ, ದೋಣಿ ವಿಹಾರಕ್ಕೆ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ
ಕಿತ್ತೂರು: ಐತಿಹಾಸಿಕ ಕಿತ್ತೂರು ಉತ್ಸವ-2026ರ ಅಂಗವಾಗಿ ಆಯೋಜಿಸಲಾಗಿರುವ ಜಲ ಕ್ರೀಡೆಗಳು ಹಾಗೂ ದೋಣಿ ವಿಹಾರದ ಕಾರ್ಯಕ್ರಮಕ್ಕೆ ಮಾಜಿ ಸಚಿವೆ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಚಾಲನೆ ನೀಡಿದರು. ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮನ ಐತಿಹಾಸಿಕ ಪರಾಕ್ರಮ, ಶೌರ್ಯ ಮತ್ತು ಸ್ವಾಭಿಮಾನದ ಹೋರಾಟವನ್ನು ಸ್ಮರಿಸುವ ಕಿತ್ತೂರು ಉತ್ಸವದ ಭಾಗವಾಗಿ, ಸಾರ್ವಜನಿಕರು ಹಾಗೂ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಜಲ ಕ್ರೀಡೆಗಳು ಮತ್ತು ದೋಣಿ ವಿಹಾರದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸ್ಥಳೀಯ ನಿವಾಸಿಗಳು ಮಾತ್ರವಲ್ಲದೆ, ದೂರದೂರುಗಳಿಂದ ಆಗಮಿಸುವ …
Read More »ಗೃಹ ಜ್ಯೋತಿ ಫಲಾನುಭವಿಗಳ ಗಮನಕ್ಕೆ: ಸಮೀಕ್ಷೆ ಗಡುವು ವಿಸ್ತರಣೆ ಇಲ್ಲ: ತಕ್ಷಣ ದಾಖಲಾತಿ ಸಲ್ಲಿಸಿ
ಬೆಂಗಳೂರು: ಬೆಸ್ಕಾಂ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಗೃಹ ಜ್ಯೋತಿ ಫಲಾನುಭವಿಗಳ ಮನೆ-ಮನೆ ಸಮೀಕ್ಷೆಗೆ ನೀಡಿರುವ ಗಡುವು ಅಕ್ಟೋಬರ್ 31ಕ್ಕೆ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳದ ಗ್ರಾಹಕರು ಅಗತ್ಯ ದಾಖಲಾತಿಗಳನ್ನು ಬೆಸ್ಕಾಂ ಉಪ ವಿಭಾಗ ಕಚೇರಿಗೆ ಖುದ್ದಾಗಿ ತೆರಳಿ ಸಲ್ಲಿಸಲು ಬೆಸ್ಕಾಂ ವಿನಂತಿಸಿದೆ.ಕಳೆದ ಮೂರುವರೆ ತಿಂಗಳಿನಿಂದ ನಡೆಯುತ್ತಿರುವ ಸಮೀಕ್ಷೆಯಲ್ಲಿ ಮನೆಗೆ ಬೀಗ ಹಾಕಿರುವ, ಮನೆ ಖಾಲಿ ಇರುವ ಹಾಗೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದ ಗ್ರಾಹಕರಿಗೆ ಬೆಸ್ಕಾಂ ಕಚೇರಿಗೆ ತೆರಳಿ ದಾಖಲಾತಿ ಸಲ್ಲಿಸಲು ರಾಜ್ಯ …
Read More »ಗೌತಮ್ ಪಾಟೀಲ್ ಜೊತೆ ಸರಳವಾಗಿ ನೆರವೇರಿದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ನಿಶ್ಚಿತಾರ್ಥ
ಲೋಕಸಭೆಯ ಅತ್ಯಂತ ಕಿರಿಯ ಸಂಸದೆಯರಲ್ಲಿ ಒಬ್ಬರಾದ ಚಿಕ್ಕೋಡಿ ಕ್ಷೇತ್ರದ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರ ನಿಶ್ಚಿತಾರ್ಥ ಗೌತಮ್ ಪಾಟೀಲ್ ಅವರೊಂದಿಗೆ ನೆರವೇರಿತು. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿಯಾಗಿರುವ ಪ್ರಿಯಾಂಕಾ ಅವರು ರಾಯಚೂರು ಮೂಲದ ಚಾರ್ಟರ್ಡ್ ಅಕೌಂಟೆಂಟ್ ಗೌತಮ್ ಪಾಟೀಲ್ ಅವರೊಂದಿಗೆ ವಿವಾಹವಾಗಲಿದ್ದಾರೆ. ಗೋಕಾಕ್ನ ಕ್ಲಬ್ ರಸ್ತೆಯಲ್ಲಿರುವ ಸಚಿವ ಸತೀಶ್ ಜಾರಕಿಹೊಳಿ ಅವರ ‘ಹಿಲ್ ಗಾರ್ಡನ್’ ನಿವಾಸದಲ್ಲಿ ಸರಳವಾಗಿ ಮಗಳು ಪ್ರಿಯಾಂಕ ಜಾರಕಿಹೊಳಿ ಹಾಗೂ ಗೌತಮ್ ಪಾಟೀಲ್ ನಿಶ್ಚಿತಾರ್ಥ …
Read More »ಮನೆಗೆ ನುಗ್ಗಿ ಜೀವ ಬೆದರಿಕೆ ಹಾಕಿದ್ದಾರೆ: ವಿಜಯಲಕ್ಷ್ಮಿ ದರ್ಶನ್ ವಿರುದ್ಧ ಧನ್ವೀರ್ ತಂದೆಯಿಂದ ದೂರು
ನಟ ಧನ್ವೀರ್ ಗೌಡ ಮತ್ತು ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ ವಿವಾದ ಮತ್ತೊಂದು ತಿರುವು ಪಡೆದುಕೊಂಡಿದೆ. ಧನ್ವೀರ್ ತಂದೆ ತಿಮ್ಮೇಗೌಡ, ವಿಜಯಲಕ್ಷ್ಮಿ ಹಾಗೂ ತಂಡದ ವಿರುದ್ಧ ರಾಜಾಜಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮನೆಗೆ ಬಂದು ಗಲಾಟೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ದೂರಿನ ಆಧಾರದಲ್ಲಿ ಪೊಲೀಸರು ಎನ್ಸಿಆರ್ ದಾಖಲಿಸಿಕೊಂಡಿದ್ದಾರೆ. ತಿಮ್ಮೇಗೌಡ ನೀಡಿರುವ ದೂರಿನ ಪ್ರಕಾರ, ಅಕ್ಟೋಬರ್ 21ರಂದು ರಾತ್ರಿ ಸುಮಾರು 8.30ರ ವೇಳೆಗೆ ಧನ್ವೀರ್ ಮೈಸೂರಿಗೆ …
Read More »
Laxmi News 24×7